AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್; ಸಖತ್ ಫನ್ನಿ ಆಗಿದೆ ಅಡ್ವಟೈಸ್​ಮೆಂಟ್

ಯಶ್ ಹೊಸ ಸಿನಿಮಾ ಯಾವ ನಿರ್ದೇಶಕರ ಜೊತೆ ಇರಬಹುದು ಎನ್ನುವ ಗುಟ್ಟು ಹೊರಬಿದ್ದಿಲ್ಲ. ಹೀಗಿರುವಾಗಲೇ ಯಶ್ ವಿವಿಧ ಬ್ರ್ಯಾಂಡ್​ಗಳಿಗೆ ಪ್ರಚಾರ ನೀಡುತ್ತಿದ್ದಾರೆ.

ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್; ಸಖತ್ ಫನ್ನಿ ಆಗಿದೆ ಅಡ್ವಟೈಸ್​ಮೆಂಟ್
ಯಶ್
ರಾಜೇಶ್ ದುಗ್ಗುಮನೆ
|

Updated on: Apr 17, 2023 | 7:11 AM

Share

ನಟ ಯಶ್ (Yash) ರೇಂಜ್ ಬದಲಾಗಿದೆ. ‘ಕೆಜಿಎಫ್ 2’ ಸಿನಿಮಾ ಮೂಲಕ ಅವರ ಖ್ಯಾತಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಶೀಘ್ರವೇ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗಲೇ ಯಶ್ ಅವರು ವಿವಿಧ ಜಾಹೀರಾತಿಗೆ ಪ್ರಚಾರ ರಾಯಭಾರಿ ಆಗುತ್ತಿದ್ದಾರೆ. ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳು ಯಶ್ ಅವರಿಗೆ ಆಹ್ವಾನ ನೀಡುತ್ತಿವೆ. ಈಗ ಅವರು ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಖತ್ ಫನ್ನಿ ಆಗಿದೆ.

‘ಕೆಜಿಎಫ್ 2’ ಮಾಡಿರುವ ದಾಖಲೆಗಳು ಹಲವು. ಯಶ್​ ಅವರಿಗೆ ಇದ್ದ ಬೇಡಿಕೆ ಹೆಚ್ಚಿತು. ಈ ಕಾರಣಕ್ಕೆ ಯಶ್ ಮುಂದಿನ ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಅವರ ಹೊಸ ಸಿನಿಮಾ ಯಾವ ನಿರ್ದೇಶಕರ ಜೊತೆ ಇರಬಹುದು ಎನ್ನುವ ಗುಟ್ಟು ಹೊರಬಿದ್ದಿಲ್ಲ. ಹೀಗಿರುವಾಗಲೇ ಯಶ್ ವಿವಿಧ ಬ್ರ್ಯಾಂಡ್​ಗಳಿಗೆ ಪ್ರಚಾರ ನೀಡುತ್ತಿದ್ದಾರೆ.

ವಿಲನ್ ಹೆಸರಿನ ಪರ್ಫ್ಯೂಮ್​ ಇದೆ. ಯಶ್ ಈ ಕಂಪನಿಯ ಪ್ರಚಾರ ರಾಯಭಾರಿ ಆಗಿದ್ದಾರೆ. ಈಗ ವಿಲನ್ ಎಕ್ಸ್​ಟ್ರೀಮ್ ಹೆಸರಿನ ಫೇಸ್​ವಾಶ್ ರಿವೀಲ್ ಮಾಡಲಾಗಿದೆ. ಇದರ ಜಾಹೀರಾತಿನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಯಶ್ ಕಾರಿನ ಮೇಲೆ ಕುಳಿತಿರುತ್ತಾರೆ. ಆಗ ಗನ್​ನಿಂದ ಬುಲೆಟ್ ಫೈರ್ ಆಗುತ್ತದೆ. ಅದು ಕಾರಿನ ಗಾಜಿಗೆ ಹೊಡೆಯುತ್ತದೆ. ಮುಂದಿನ ಬುಲೆಟ್ ಯಶ್ ಮುಖವನ್ನು ಸವರಿಕೊಂಡು ಹೋಗುತ್ತದೆ. ಆ ಬುಲೆಟ್ ಚಾಕೋಲೇಟ್ ಆಗಿ ಬದಲಾಗುತ್ತದೆ! ಅದನ್ನು ಯಶ್ ತಿನ್ನುತ್ತಾರೆ. ಯಶ್ ಅವರು ಬಳಕೆ ಮಾಡಿದ ಚಾಕೋಲೇಟ್ ಫ್ಲೇವರ್​ನ ಫೇಸ್​ವಾಶ್​ನಿಂದಲೇ ಬುಲೆಟ್ ಚಾಕೋಲೇಟ್ ಆಗಿ ಬದಲಾಗುತ್ತದೆ. ಈ ಜಾಹೀರಾತಿಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Yash: ಯಶ್​ ಮನೆ ಬಾಗಿಲು ತಟ್ಟಿದ ರಾಜಕೀಯ ಮುಖಂಡರು; ರಾಕಿಂಗ್ ಸ್ಟಾರ್ ನಿರ್ಧಾರ ಏನು?

ಯಶ್ ಇತ್ತೀಚೆಗೆ ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಯಶ್ ಅವರು ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದರು. ಯಶ್ ಅವರಿಗೆ ಈ ಮೊದಲು ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲು ಆಫರ್ ಬಂದಿತ್ತು ಎನ್ನಲಾಗಿದೆ. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ಪಾನ್ ಮಸಾಲ ಸೇವನೆ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ಯಶ್ ಅವರು ಇದನ್ನು ಪ್ರೋತ್ಸಾಹಿಸಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ