ಬಿಡುಗಡೆ ಮಾಡಲಾಗದ 40 ಹಾಡುಗಳು ನನ್ನಲ್ಲೇ ಇವೆ: ಪ್ರಿಯಾಂಕಾ ಚೋಪ್ರಾ

Priyanka Chopra: ಗಾಯಕಿಯಾಗಿ ಯಶಸ್ವಿಯಾಗದ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ತಮ್ಮ ಬಳಿ ಬಿಡುಗಡೆ ಆಗದ ತಮ್ಮದೇ 40 ಹಾಡುಗಳು ಇರುವ ಬಗ್ಗೆ ಹೇಳಿದ್ದಾರೆ.

ಬಿಡುಗಡೆ ಮಾಡಲಾಗದ 40 ಹಾಡುಗಳು ನನ್ನಲ್ಲೇ ಇವೆ: ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Follow us
ಮಂಜುನಾಥ ಸಿ.
|

Updated on: Apr 21, 2023 | 8:00 AM

ಬಾಲಿವುಡ್ (Bollywood) ತೊರೆದು ಹಾಲಿವುಡ್​ನಲ್ಲಿ ನೆಲೆ ನಿಂತಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಅವರದ್ದು ಬಹುಮುಖ ಪ್ರತಿಭೆ. ಮಾಡೆಲ್ ಆಗಿ, ನಟಿಯಾಗಿ ಹೆಸರು ಮಾಡುವ ಜೊತೆಗೆ ನಿರ್ಮಾಪಕಿಯಾಗಿಯೂ ಗುರುತು ಮೂಡಿಸಿದ್ದ ಪ್ರಿಯಾಂಕಾ ಚೋಪ್ರಾ ಸಂಗೀತ ಕ್ಷೇತ್ರದಲ್ಲಿಯೂ ಒಂದು ಕೈ ನೋಡಿದ್ದರು. ಹಾಲಿವುಡ್ (Hollywood) ಸಂಗೀತ ಕ್ಷೇತ್ರಕ್ಕೆ (Music Industry) ಪದಾರ್ಪಣೆ ಮಾಡಿದ್ದ ಪ್ರಿಯಾಂಕಾ ಚೋಪ್ರಾ, ಕೆಲವು ಜಗತ್​ ವಿಖ್ಯಾತ ಸಂಗೀತಗಾರರೊಟ್ಟಿಗೆ ಜಂಟಿಯಾಗಿ ಆಲ್ಬಂ ಸಹ ಬಿಡುಗಡೆ ಮಾಡಿದ್ದರು. ಆದರೆ ಏಕೋ ಸಂಗೀತ ಕ್ಷೇತ್ರ ಅವರ ಕೈಹಿಡಿಯಲಿಲ್ಲ.

ಬಿಡುಗಡೆಗೆ ಸಿದ್ಧವಾಗಿರುವ ಹೊಸ ವೆಬ್ ಸರಣಿ ಸಿಟಾಡೆಲ್ ಪ್ರೊಮೋಷನ್​ನಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ, ಈ ಸಂದರ್ಭದಲ್ಲಿ ತಮ್ಮ ಸಂಗೀತ ಕ್ಷೇತ್ರದ ಎಂಟ್ರಿ ಹಾಗೂ ಆ ವೃತ್ತಿಯ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ, ನನ್ನ 22 ವರ್ಷದ ನಟನಾ ವೃತ್ತಿಯಲ್ಲಿ ನನ್ನ ಸಂಗೀತಗಾರ್ತಿಯಾಗಿ ನನ್ನ ಪದಾರ್ಪಣೆ ಕೇವಲ ಎರಡು ಸೆಕೆಂಡ್ ಎನಿಸುತ್ತದೆ. ಅಷ್ಟು ಬೇಗನೆ ಅದು ಮುಗಿದು ಬಿಟ್ಟಿತು ಎಂದಿದ್ದಾರೆ ಪ್ರಿಯಾಂಕಾ.

ಬಹಳ ಉತ್ಸುಕತೆಯಿಂದ ನಾನು ಸಂಗೀತಗಾರ್ತಿಯಾಗಿ ವೃತ್ತಿ ಆರಂಭಿಸಿದೆ ಕೆಲವು ಒಳ್ಳೆಯ ಕೊಲ್ಯಾಬರೇಶನ್​ಗಳನ್ನು ಮಾಡಿದೆ ಆದರೆ ಏಕೋ ಅದು ಬಹು ಬೇಗನೆ ಮುಗಿದುಬಿಟ್ಟಿತು. ಈಗಲೂ ಬಿಡುಗಡೆ ಮಾಡಲಾಗದ ನನ್ನದೇ 40 ಹಾಡುಗಳು ನನ್ನ ಲ್ಯಾಪ್​ಟಾಪ್​ನಲ್ಲಿ ಭದ್ರವಾಗಿದೆ ಎಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಾಡಿದ 4 ಹಾಡುಗಳಷ್ಟೆ ಬಿಡುಗಡೆ ಆಗಿವೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಖ್ಯಾತ ಗಾಯಕ ಪಿಟ್​ಬುಲ್​ ಜೊತೆಗೆ ಒಂದು ಹಾಡನ್ನು ಹಾಡಿದ್ದಾರೆ. ಅದಾದ ಬಳಿಕ ಅದೇ ವೃತ್ತಿಯನ್ನು ಮುಂದುವರೆಸು ಉದ್ದೇಶದಿಂದ ಇನ್ನೂ ಕೆಲವು ಹಾಡನ್ನು ಮಾಡಿಕೊಂಡಿದ್ದರು ಆದರೆ ನಟನಾ ವೃತ್ತಿಯನ್ನೇ ಗಂಭೀರವಾಗಿ ಪರಿಗಣಿಸಿ ಗಾಯನವನ್ನು ಮೊಟಕುಗೊಳಿಸಿದರು.

ಇದೀಗ ಪ್ರಿಯಾಂಕಾ ಚೋಪ್ರಾ ಹಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಆಕೆ ಉದ್ಯಮಿಯೂ ಹೌದು. ತಾನು ಗಾಯಕಿಯಾಗಿ ಯಶಸ್ವಿ ಆಗದೇ ಇದ್ದರೂ ಹಾಲಿವುಡ್​ನ ಜನಪ್ರಿಯ ಗಾಯಕ ನಿಕ್ ಜೋನಸ್ ಅನ್ನು ವಿವಾಹವಾಗಿ ಖುಷಿಯಾಗಿದ್ದಾರೆ. ದಂಪತಿಗೆ ಒಂದು ಹೆಣ್ಣು ಮಗುವಿದೆ.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್​ ಬಿಟ್ಟು ಹಾಲಿವುಡ್​ಗೆ ಹೋಗಿದ್ದು ಯಾಕೆ? ಕಡೆಗೂ ಬಾಯ್ಬಿಟ್ಟ ನಟಿ

ಇನ್ನು ಪ್ರಿಯಾಂಕಾ ಚೋಪ್ರಾ ನಟಿಸಿರುವ ಹಾಲಿವುಡ್ ವೆಬ್ ಸರಣಿ ಸಿಟಾಡೆಲ್ ಪ್ರೊಮೋಷನ್ ಕಾರ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿಯಾಗಿದ್ದಾರೆ. ಈ ವೆಬ್ ಸರಣಿಯು ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿದ್ದು, ವೆಬ್ ಸರಣಿಯಲ್ಲಿ ಗೂಢಚಾರಿಣಿ ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ಸಿಟಾಡೆಲ್​ನಲ್ಲಿ ಪ್ರಿಯಾಂಕಾ ಜೊತೆಗೆ ರಿಚರ್ಡ್ ಮ್ಯಾಡನ್, ಸ್ಟ್ಯಾನ್ಲಿ ಟುಸ್ಸಿ ಇನ್ನೂ ಕೆಲವು ಖ್ಯಾತನಾಮರು ನಟಿಸಿದ್ದಾರೆ. ಈ ವೆಬ್ ಸರಣಿಯಲ್ಲಿ ತಮ್ಮ ಸ್ಟಂಟ್​ಗಳನ್ನು ತಾವೇ ಮಾಡಿರುವುದಾಗಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಸಿಟಾಡೆಲ್ ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 28 ಕ್ಕೆ ಬಿಡುಗಡೆ ಆಗಲಿದೆ.

ಇದರ ಹೊರತಾಗಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾ ಲವ್ ಅಗೇನ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಝೋಯಾ ಅಖ್ತರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆಗೆ ಆಲಿಯಾ ಭಟ್ ಹಾಗೂ ಕರೀನಾ ಕಪೂರ್ ಸಹ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ