AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ಬಿಟ್ಟಿದ್ದಕ್ಕೆ ಕೆಲವು ಗುಂಪುಗಳ ಗುಂಪುಗಾರಿಕೆ ಕಾರಣ: ಪ್ರಿಯಾಂಕಾ ಚೋಪ್ರಾ

Priyanka Chopra: ಬಾಲಿವುಡ್​ನ ಸ್ಟಾರ್ ನಟಿಯಾಗಿದ್ದ ಸಮಯದಲ್ಲಿಯೇ ಚಿತ್ರರಂಗವನ್ನು ತೊರೆದಿದ್ದೇಕೆ ಪ್ರಿಯಾಂಕಾ ಚೋಪ್ರಾ?

ಬಾಲಿವುಡ್​ ಬಿಟ್ಟಿದ್ದಕ್ಕೆ ಕೆಲವು ಗುಂಪುಗಳ ಗುಂಪುಗಾರಿಕೆ ಕಾರಣ: ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಮಂಜುನಾಥ ಸಿ.
|

Updated on:Apr 20, 2023 | 4:41 PM

Share

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್​ನ (Hollywood) ಸ್ಟಾರ್ ನಟಿಯರಲ್ಲಿ ಒಬ್ಬರು. ಹಾಲಿವುಡ್​ನ ದಿಗ್ಗಜರೊಡನೆ ಪ್ರಿಯಾಂಕಾ ಕೆಲಸ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರ ನಟನೆಯ ಇಂಗ್ಲೀಷ್ ವೆಬ್ ಸರಣಿ ಸಿಟಾಡೆಲ್ ಬಿಡುಗಡೆ ಆಗಲಿದ್ದು, ಅದರ ಪ್ರಚಾರ ಕಾರ್ಯದಲ್ಲಿ ಪ್ರಿಯಾಂಕಾ ನಿರತರಾಗಿದ್ದಾರೆ. ಆದರೆ ಬಾಲಿವುಡ್​ನಲ್ಲಿ ಉತ್ತುಂಗದಲ್ಲಿದ್ದಾಗಿಯೂ ಏಕಾ-ಏಕಿ ಚಿತ್ರರಂಗ ತೊರೆದು ಹಾಲಿವುಡ್​ಗೆ ಹಾರಿದ್ಯಾಕೆ ಪ್ರಿಯಾಂಕಾ ಎಂಬ ಬಗ್ಗೆ ಇತ್ತೀಚೆಗೆ ಚರ್ಚೆಗಳು ನಡೆಯುತ್ತಿವೆ. ಇದೇ ಚರ್ಚೆಗೆ ಮತ್ತಷ್ಟು ಸರಕು ಒದಗಿಸಿದ್ದಾರೆ ಪ್ರಿಯಾಂಕಾ.

ಬಾಲಿವುಡ್​ನಲ್ಲಿ ನನ್ನ ಕರಿಯರ್ ಮುಗಿಸಲು ಯತ್ನಿಸಲಾಗಿತ್ತು ಎಂದು ಪ್ರಿಯಾಂಕಾ ಈ ಹಿಂದೆ ಹೇಳಿದ್ದರು, ಇದನ್ನೇ ಇಟ್ಟುಕೊಂಡು ನಟಿ ಕಂಗನಾ ರನೌತ್ ಹಾಗೂ ಇತರರು ಬಾಲಿವುಡ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಿಯಾಂಕಾ ಚೋಪ್ರಾ ಕರಿಯರ್ ಮುಗಿಸುವ ಹಿಂದೆ ಕರಣ್ ಜೋಹರ್ ಕೈವಾಡವಿದೆ ಎಂದೂ ಕೆಲವರು ಹೇಳಿದ್ದರು. ಇದೀಗ ಪ್ರಿಯಾಂಕಾ ತಮ್ಮ ಹೊಸ ಸಂದರ್ಶನದಲ್ಲಿ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿದ್ದಾರೆ.

ಇಡೀ ಬಾಲಿವುಡ್ ಕೆಟ್ಟದೆಂದಲ್ಲ ಆದರೆ ಕೆಲವು ಸಣ್ಣ ಗುಂಪುಗಳು ನನಗೆ ಬಹಳ ತ್ರಾಸು ನೀಡಿದವು. ಇಡೀ ಚಿತ್ರರಂಗ ಹಾಗಿದೆ ಎಂದಲ್ಲ. ನನಗೆ ಬಾಲಿವುಡ್​ನಲ್ಲಿ ಅದ್ಭುತವಾದ ಗೆಳೆಯರಿದ್ದಾರೆ. ಕೆಲವು ಅದ್ಭುತವಾದ ಜನರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಆದರೆ ಇಲ್ಲಿ ಕೆಲವು ನಿರ್ದಿಷ್ಟ ಸಣ್ಣ ಗುಂಪುಗಳಿವೆ. ಅವುಗಳಿಂದ ನನಗೆ ತುಸು ಕಷ್ಟವಾಯಿತು. ಅವು ಸದಾ ಇರುತ್ತವೆ, ತಮ್ಮ ಕೆಲಸವನ್ನು ಅವು ಮುಂದುವರೆಸುತ್ತವೆ ಸಹ. ಈ ಸಮಸ್ಯೆ ಎಲ್ಲ ಉದ್ಯಮದಲ್ಲಿಯೂ ಇದೆ. ಇಲ್ಲಿಯೂ ಸಹ” ಎಂದಿದ್ದಾರೆ ಪ್ರಿಯಾಂಕಾ.

”ಹೆಚ್ಚು ಹೆಚ್ಚು ಹೊಸಬರಿಗೆ ಅನುಕೂಲಕರವಾಗುವಂಥಹಾ ವಾತಾವರಣ ಸೃಷ್ಟಿಸುವುದು ಎಲ್ಲರ ಹೊಣೆಗಾರಿಕೆ ಆಗಿರಬೇಕು. ಕೆಲಸ ಮಾಡಲು ಉತ್ತಮ ವಾತಾವರಣದ ಸೃಷ್ಟಿಯಾಗಬೇಕು ಅದು ನಮ್ಮೆಲ್ಲರ ಜವಾಭ್ದಾರಿ. ನಮ್ಮಲ್ಲಿ ಇತ್ತೀಚೆಗೆ ‘ಕ್ಯಾನ್ಸಲ್’ ಸಂಸ್ಕೃತಿ ಹೆಚ್ಚಾಗಿದೆ. ಆದರೆ ಅದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಾವು ಸ್ವತಃ ಬೆಳೆಯುವ ಜೊತೆಗೆ ಬೇರೆಯವರ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ನಾವು ಯೋಚಿಸಬೇಕು ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

ಇದನ್ನೂ ಓದಿ:Priyanka Chopra: ವಿವಾದದ ಬೆನ್ನಲ್ಲೇ ಮುಂಬೈನಲ್ಲಿನ 7 ಕೋಟಿ ರೂಪಾಯಿ ಆಸ್ತಿ ಮಾರಿಕೊಂಡ ಪ್ರಿಯಾಂಕಾ ಚೋಪ್ರಾ

ನನಗೆ ಇಲ್ಲಿ ಕಷ್ಟ ಎನಿಸಿದಾಗ, ನಾನು ಬಲಹೀನಳಾಗುತ್ತಿದ್ದೇನೆ ಎನಿಸಿದಾಗ, ನನ್ನನ್ನು ತುಳಿಯುವ ಯತ್ನಗಳಾಗುತ್ತಿವೆ ಎನಿಸಿದಾಗ ನಾನು ಇನ್ನಷ್ಟು ಶಕ್ತಿ ಒಟ್ಟುಮಾಡಿಕೊಂಡೆ, ನನ್ನನ್ನು ಬಲಹೀನಗೊಳಿಸಬಹುದಾದ ಮಾತುಗಳ ಬಗ್ಗೆ ಅಲಕ್ಷ್ಯ ವಹಿಸಿದೆ ನನ್ನ ವಿರುದ್ಧ ನಿಂತವರಿಗಿಂತಲೂ ಎತ್ತರವಾಗಿ ಬೆಳೆಯುವ ಪ್ರಯತ್ನದೆಡೆಗೆ ಹೆಜ್ಜೆ ಹಾಕಿದೆ, ಹೆಜ್ಜೆಯ ಮೇಲೆ ಹೆಜ್ಜೆಗಳನ್ನು ಹಾಕುತ್ತಲೇ ಸಾಗಿದೆ ಎಂದ ಪ್ರಿಯಾಂಕಾ ಚೋಪ್ರಾ, ”ನಿಮಗೆ ಯಾವುದರ ಬಗ್ಗೆ ಪ್ರೀತಿ ಇದೆಯೋ ಅದನ್ನು ಮಾಡಲು ಆತ್ಮಶಕ್ತಿಯನ್ನು ಒಟ್ಟು ಮಾಡಿಕೊಳ್ಳಿ ಆ ಬಳಿಕ ಗುರಿಯ ಕಡೆ ನಡೆಯಲು ಪ್ರಾರಂಭಿಸಿ” ಎಂದು ಯುವಕರಿಗೆ ಇದೇ ಸಲಹೆ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ 2015 ರ ಸಮಯದಲ್ಲಿ ಹಾಲಿವುಡ್​ಗೆ ಪದಾರ್ಪಣೆ ಮಾಡಿದರು. ಆಗಿನಿಂದಲೂ ಬಹುತೇಕ ಹಾಲಿವುಡ್​ನಲ್ಲೇ ನೆಲೆ ಕಂಡುಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿಟಾಡೆಲ್ ಹೆಸರಿನ ಇಂಗ್ಲೀಷ್ ವೆಬ್ ಸರಣಿಯಲ್ಲಿ ನಟಿಸಿದ್ದು ಅದು ಅಮೆಜಾನ್ ಪ್ರೈಂನಲ್ಲಿ ಇದೇ ಏಪ್ರಿಲ್ 28ಕ್ಕೆ ಬಿಡುಗಡೆ ಆಗಲಿದೆ. ಜೊತೆಗೆ ಲವ್ ಅಗೇನ್ ಹೆಸರಿನ ಇಂಗ್ಲೀಷ್ ಸಿನಿಮಾದಲ್ಲಿ ನಟಿಸಿದ್ದು ಅದೂ ಸಹ ಶೀಘ್ರವೇ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Thu, 20 April 23