Project K: ಹಾಲಿವುಡ್​ಗೂ ಪೈಪೋಟಿ ನೀಡುತ್ತಾ ಪ್ರಭಾಸ್​ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾ?

Prabhas: ‘ವೈಜಯಂತಿ ಮೂವೀಸ್​’ ಮೂಲಕ ‘ಪ್ರಾಜೆಕ್ಟ್​ ಕೆ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿದೆ.

Project K: ಹಾಲಿವುಡ್​ಗೂ ಪೈಪೋಟಿ ನೀಡುತ್ತಾ ಪ್ರಭಾಸ್​ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾ?
ಪ್ರಾಜೆಕ್ಟ್ ಕೆ
Follow us
ಮದನ್​ ಕುಮಾರ್​
|

Updated on:Apr 10, 2023 | 4:44 PM

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಅವರು ಸಿನಿಮಾ ಕೆಲಸಗಳಲ್ಲಿ ಚುರುಕಾಗಿದ್ದಾರೆ. ‘ಬಾಹುಬಲಿ’ ಸಿನಿಮಾಗೋಸ್ಕರ ಹಲವು ವರ್ಷ ಮೀಸಲಿಟ್ಟಿದ್ದ ಅವರು ಆ ನಂತರ ಸಾಲು ಸಾಲು ಸಿನಿಮಾ ಒಪ್ಪಿಕೊಳ್ಳಲು ಆರಂಭಿಸಿದರು. ಈಗ ‘ಸಲಾರ್​’, ‘ಆದಿಪುರುಷ್​’, ‘ಪ್ರಾಜೆಕ್ಟ್​ ಕೆ’ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಈಗ ‘ಪ್ರಾಜೆಕ್ಟ್​ ಕೆ’ (Project K) ಚಿತ್ರತಂಡದವರು ಹೊಸದೊಂದು ವಿಡಿಯೋ ಹಂಚಿಕೊಳ್ಳುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ನಾಗ್​ ಅಶ್ವಿನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿನ ಪ್ರತಿ ಪಾತ್ರದ ಕಾಸ್ಟ್ಯೂಮ್​ ಕೂಡ ಡಿಫರೆಂಡ್​ ಆಗಿರಲಿದೆ. ಅದನ್ನು ತೋರಿಸುವ ಸಲುವಾಗಿ ಚಿಕ್ಕ ವಿಡಿಯೋ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.

‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲಿ ಪ್ರಭಾಸ್​ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್ ಮುಂತಾದ ಘಟಾನುಘಟಿ ಕಲಾವಿದರು ಕೂಡ ನಟಿಸುತ್ತಿದ್ದಾರೆ. ಇದು ಸೈನ್ಸ್​ ಫಿಕ್ಷನ್​ ಶೈಲಿಯ ಸಿನಿಮಾ ಆಗಿದ್ದು, ಅದಕ್ಕೆ ತಕ್ಕಂತೆಯೇ ಕಾಸ್ಟ್ಯೂಮ್​ ಡಿಸೈನ್​ ಮಾಡಲಾಗಿದೆ. ಸಿನಿಮಾದಲ್ಲಿ ಬರುವ ರೇಡರ್ಸ್​ ಎಂಬ ಪಾತ್ರಗಳಿಗೆ ಹೇಗೆ ವಸ್ತ್ರ ವಿನ್ಯಾಸ ಮಾಡಲಾಗಿದೆ ಎಂಬುದನ್ನು ತಿಳಿಸುವ ಸಲುವಾಗಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಇದನ್ನೂ ಓದಿ: ಪ್ರಭಾಸ್​ ಜತೆ 75 ದಿನ ಕಳೆಯಲಿದ್ದಾರೆ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?

ಸೈನ್ಸ್​ ಫಿಕ್ಷನ್​ ಸಿನಿಮಾಗಳನ್ನು ಮಾಡುವಲ್ಲಿ ಹಾಲಿವುಡ್​ ಮಂದಿ ಸದಾ ಮುಂಚೂಣಿಯಲ್ಲಿ ಇರುತ್ತಾರೆ. ಈಗ ‘ಪ್ರಾಜೆಕ್ಟ್​ ಕೆ’ ಚಿತ್ರತಂಡದವರು ಹಾಲಿವುಡ್​ಗೂ ಪೈಪೋಟಿ ನೀಡಲು ಸಜ್ಜಾದಂತಿದೆ. ಸದ್ಯಕ್ಕೆ ಹೊರಬಂದಿರುವುದು ಚಿಕ್ಕ ಮೇಕಿಂಗ್​ ವಿಡಿಯೋ ಮಾತ್ರ. ಇನ್ನೂ ಹಲವು ವಿಡಿಯೋಗಳನ್ನು ರಿಲೀಸ್​ ಮಾಡಲಾಗುತ್ತದೆ.

ಇದನ್ನೂ ಓದಿ: ‘ನಿಮಗೆ ನಾಚಿಕೆ ಆಗುತ್ತಿದೆಯೇ?’; ಪ್ರಭಾಸ್​​ಗೆ ದೀಪಿಕಾ ಕೇಳಿದ ಮೊದಲ ಪ್ರಶ್ನೆ ಇದು

ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ವೈಜಯಂತಿ ಮೂವೀಸ್​’ ಮೂಲಕ ‘ಪ್ರಾಜೆಕ್ಟ್​ ಕೆ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿದೆ. ‘ಮಹಾನಟಿ’ ಸಿನಿಮಾದಿಂದ ಭರ್ಜರಿ ಗೆಲುವು ಕಂಡಿದ್ದ ನಾಗ್​ ಅಶ್ವಿನ್​ ಅವರ ‘ಪ್ರಾಕೆಜ್ಟ್​ ಕೆ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಿಂದ ಪ್ರಭಾಸ್​ ಅವರು ದೊಡ್ಡ ಸಕ್ಸಸ್​ ಕಾಣಲಿದ್ದಾರೆ ಎಂದು ಸಿನಿಪ್ರಿಯರು ಭವಿಷ್ಯ ನುಡಿಯುತ್ತಿದ್ದಾರೆ.

2024ರ ಜನವರಿ 12ರಂದು ‘ಪ್ರಾಜೆಕ್ಟ್​ ಕೆ’ ಸಿನಿಮಾ ರಿಲೀಸ್​ ಆಗಲಿದೆ. ಚಿತ್ರದ ಬಹುತೇಕ ಶೂಟಿಂಗ್​ ಮುಕ್ತಾಯ ಆಗಿದೆ. ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾದಲ್ಲಿ ಗ್ರಾಫಿಕ್ಸ್​ ಹೇರಳವಾಗಿ ಇರಲಿದ್ದು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಸಖತ್​ ಕಾಳಜಿ ವಹಿಸಿ ಮಾಡಲಾಗುತ್ತಿದೆ. ಬಿಡುಗಡೆಗೆ ಇನ್ನೂ ಹಲವು ತಿಂಗಳ ಬಾಕಿ ಇದ್ದರೂ ಕೂಡ ಈಗಲೇ ಪ್ರಚಾರದ ಬಗ್ಗೆ ಗಮನ ಹರಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:43 pm, Mon, 10 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್