AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ನಟ ದತ್ತಣ್ಣ ಮದುವೆ ಆಗದೇ ಇರಲು ಇತ್ತು ಪ್ರಮುಖ ಕಾರಣ; ಇಲ್ಲಿದೆ ವಿವರ

ಮದುವೆ, ಸಂಸಾರ ಅನ್ನೋದು ಒಂದು ಗೋಳು ಎಂಬುದು ಅನೇಕರ ಅಭಿಪ್ರಾಯ. ದತ್ತಣ್ಣ ಅವರ ಅಭಿಪ್ರಾಯವೂ ಇದೇ ಆಗಿತ್ತು.

ಹಿರಿಯ ನಟ ದತ್ತಣ್ಣ ಮದುವೆ ಆಗದೇ ಇರಲು ಇತ್ತು ಪ್ರಮುಖ ಕಾರಣ; ಇಲ್ಲಿದೆ ವಿವರ
ದತ್ತಣ್ಣ
ರಾಜೇಶ್ ದುಗ್ಗುಮನೆ
|

Updated on:Apr 10, 2023 | 1:43 PM

Share

ಹಿರಿಯ ನಟ ದತ್ತಣ್ಣ (Dattanna) ಅವರ ಬದುಕು ಅನೇಕರಿಗೆ ಮಾದರಿ. ಇಂಜಿನಿಯರಿಂಗ್ ಪದವಿ ಪಡೆದು, ಏರ್​ಫೋರ್ಸ್​​ನಲ್ಲಿ ವಿಂಗ್ ಕಮಾಂಡರ್​ ಆಗಿ ಸೇವೆ ಸಲ್ಲಿಸಿ ಬಳಿಕ ನಟನಾ ಕ್ಷೇತ್ರಕ್ಕೆ ಬಂದು ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಅವರ ಹೆಚ್ಚುಗಾರಿಕೆ. ದತ್ತಣ್ಣ ಅವರು ‘ವೀಕೆಂಡ್ ವಿತ್ ರಮೇಶ್​’ (Weekend With Ramesh) ಐದನೇ ಸೀಸನ್​ನ ನಾಲ್ಕನೇ ಅತಿಥಿಯಾಗಿ ಆಗಮಿಸಿದ್ದಾರೆ. ಅವರ ಬದುಕನ್ನು, ಅವರ ಸಾಧನೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲಾಗಿದೆ. ಈ ವೇಳೆ ಹಲವು ಘಟನೆಗಳ ಬಗ್ಗೆ ದತ್ತಣ್ಣ ಅವರು ಮಾತನಾಡಿದ್ದಾರೆ. ಅವರು ಮದುವೆ ಆಗದೇ ಇರಲು ಕಾರಣ ಏನು ಎಂಬುದು ಕೂಡ ರಿವೀಲ್ ಆಗಿದೆ.

ಎಚ್​.ಜಿ. ದತ್ತಾತ್ರೇಯ ಅನ್ನೋದು ದತ್ತಣ್ಣ ಅವರು ಹೆಸರು. ಅವರು ಚಿತ್ರರಂಗದಲ್ಲಿ ದತ್ತಣ್ಣ ಎಂದೇ ಫೇಮಸ್. ಅವರಿಗೆ ಚಿಕ್ಕ ವಯಸ್ಸಿಂದ ನಾಟಕದ ಹುಚ್ಚಿತ್ತು. ಅನೇಕ ನಾಟಕಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದರು. ದತ್ತಣ್ಣ ಅವರು ಚಿತ್ರರಂಗಕ್ಕೆ ಬರುವಾಗ ಅವರಿಗೆ ವಯಸ್ಸು 45 ವರ್ಷ ತುಂಬಿತ್ತು. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್​​ಫೋರ್ಸ್‌ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಚಂಡೀಗಢ, ದೆಹಲಿ, ಅಂಡಮಾನ್‌ ಮುಂತಾದ ಕಡೆ ಅವರು ಸೇವೆ ಸಲ್ಲಿಸಿದ್ದರು. 1987ರಲ್ಲಿ ಅವರು ಬೆಂಗಳೂರಿನ ಎಚ್​ಎಎಲ್‌ಗೆ ವರ್ಗವಾಗಿ ಬಂದರು. ಹಿಂದಿ ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ‘ಆಸ್ಫೋಟ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಇಷ್ಟೆಲ್ಲ ಆದರೂ ಅವರು ಮದುವೆ ಆಗಿಲ್ಲ. ಇದಕ್ಕೆ ಕಾರಣ ರಿವೀಲ್ ಆಗಿದೆ.

ಇದನ್ನೂ ಓದಿ: ಆ ಸಿನಿಮಾದಲ್ಲಿ ನಟಿಸಿ ನಿರ್ದೇಶಕನೊಟ್ಟಿಗೆ ಜಗಳವಾಡಿ ಮಾತು ಬಿಟ್ಟಿದ್ದ ದತ್ತಣ್ಣ: ಯಾವುದಾ ಸಿನಿಮಾ?

ಮದುವೆ, ಸಂಸಾರ ಅನ್ನೋದು ಒಂದು ಗೋಳು ಎಂಬುದು ಅನೇಕರ ಅಭಿಪ್ರಾಯ. ದತ್ತಣ್ಣ ಅವರ ಅಭಿಪ್ರಾಯವೂ ಇದೇ ಆಗಿತ್ತು. ವೀಕೆಂಡ್ ವಿತ್ ರಮೇಶ್​ ಶೋನಲ್ಲಿ ದತ್ತಣ್ಣ ಅವರ ಗೆಳೆಯರು ಈ ಬಗ್ಗೆ ಮಾತನಾಡಿದ್ದಾರೆ. ‘ದತ್ತಣ್ಣ ಓದಿನಲ್ಲಿ ಚುರುಕಿದ್ದರು. ಜೀವನದಲ್ಲಿ ಅನೇಕ ಸಾಧನೆ ಮಾಡಿದರು. ಆದರೆ, ಮದುವೆ ಆಗಲೇ ಇಲ್ಲ. ಯಾವಾಗಲೂ ಫ್ರೀ ಆಗಿರಬೇಕು. ಎಲ್ಲರೂ ಬಂದು ಸಂಸಾರದ ಗೋಳು ಹೇಳಿಕೊಳ್ತಾರೆ. ಅದಕ್ಕೆ ಮದುವೆ ಆಗಲ್ಲ ಎಂದು ದತ್ತಣ್ಣ ನಿರ್ಧರಿಸಿದ್ದರು’ ಎಂಬುದಾಗಿ ದತ್ತಣ್ಣ ಅವರ ಗೆಳೆಯ ವಿವರಿಸಿದ್ದಾರೆ.

ಇದನ್ನೂ ಓದಿ: Weekend With Ramesh: ದತ್ತಣ್ಣ, ವಾಯು ಸೇನೆಯಿಂದ ಚಿತ್ರರಂಗದತ್ತ ಹೊರಳಿಕೊಂಡಿದ್ದು ಹೇಗೆ?

ಕಳೆದ ವಾರ ಇಬ್ಬರು ಸಾಧಕರು ‘ವೀಕೆಂಡ್ ವಿತ್ ರಮೇಶ್’ ವೇದಿಕೆ ಏರಿದ್ದರು. ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಹಾಗೂ ದತ್ತಣ್ಣ ಅವರು ಪ್ರತ್ಯೇಕ ಎಪಿಸೋಡ್​ನಲ್ಲಿ ಆಗಮಿಸಿದ್ದರು. ಇವರು ನಿಜವಾದ ಸಾಧಕರು ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಈ ಎರಡೂ ಎಪಿಸೋಡ್​ನ ಜನರು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:40 pm, Mon, 10 April 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಇಟಲಿ ಪ್ರಧಾನಿಗೆ ಮೆಲೋಡಿ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ
ಇಟಲಿ ಪ್ರಧಾನಿಗೆ ಮೆಲೋಡಿ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ
ಗಡಿಪಾರಾಗಿದ್ದ ರೌಡಿಯನ್ನುಮದುವೆ ಮಂಟಪದಿಂದಲೇ ಎಳೆದೊಯ್ದ ಪೊಲೀಸರು!
ಗಡಿಪಾರಾಗಿದ್ದ ರೌಡಿಯನ್ನುಮದುವೆ ಮಂಟಪದಿಂದಲೇ ಎಳೆದೊಯ್ದ ಪೊಲೀಸರು!
ರಕ್ಷಿತಾ ಶೆಟ್ಟಿ ಶ್ವಾನ ಪ್ರೇಮ; ಕೋಳಿ ಬೇಯಿಸಿಕೊಟ್ಟ ಬಿಗ್ ಬಾಸ್ ರನ್ನರ್ ಅಪ್
ರಕ್ಷಿತಾ ಶೆಟ್ಟಿ ಶ್ವಾನ ಪ್ರೇಮ; ಕೋಳಿ ಬೇಯಿಸಿಕೊಟ್ಟ ಬಿಗ್ ಬಾಸ್ ರನ್ನರ್ ಅಪ್
ಪಿಡಿಒಗೆ ಫೋನ್​​ ಕರೆಯಲ್ಲೇ ಕ್ಲಾಸ್​​ ತೆಗೆದುಕೊಂಡ ಸಂಸದ ಸುನೀಲ್ ಬೋಸ್
ಪಿಡಿಒಗೆ ಫೋನ್​​ ಕರೆಯಲ್ಲೇ ಕ್ಲಾಸ್​​ ತೆಗೆದುಕೊಂಡ ಸಂಸದ ಸುನೀಲ್ ಬೋಸ್