‘ನಿಮಗೆ ನಾಚಿಕೆ ಆಗುತ್ತಿದೆಯೇ?’; ಪ್ರಭಾಸ್​​ಗೆ ದೀಪಿಕಾ ಕೇಳಿದ ಮೊದಲ ಪ್ರಶ್ನೆ ಇದು

‘ನಿಮಗೆ ನಾಚಿಕೆ ಆಗುತ್ತಿದೆಯೇ?’; ಪ್ರಭಾಸ್​​ಗೆ ದೀಪಿಕಾ ಕೇಳಿದ ಮೊದಲ ಪ್ರಶ್ನೆ ಇದು
ಪ್ರಭಾಸ್​-ದೀಪಿಕಾ

ಪ್ರಭಾಸ್ ರಾಧೆ ಶ್ಯಾಮ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ‘ರಾಧೆ ಶ್ಯಾಮ್​’ ಸಿನಿಮಾ ಟ್ರೇಲರ್​ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಪ್ರಭಾಸ್​ ಬ್ಯುಸಿ ಆಗಿದ್ದಾರೆ.

TV9kannada Web Team

| Edited By: Rajesh Duggumane

Mar 06, 2022 | 5:34 PM

ಟಾಲಿವುಡ್​ ನಟ ಪ್ರಭಾಸ್ (Prabhas)​ ಅವರಿಗೆ ಬಾಲಿವುಡ್​ನಲ್ಲೂ ಬೇಡಿಕೆ ಇದೆ. ‘ಬಾಹುಬಲಿ’ ಸಿನಿಮಾ (Bahubali Movie) ತೆರೆಕಂಡ ನಂತರ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮೆರೆಯುತ್ತಿದ್ದಾರೆ. ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ. ಅನೇಕ ನಿರ್ದೇಶಕರು ಹಾಗೂ ನಟಿಯರ ಜತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಆದರೆ, ಪ್ರಭಾಸ್ ಎಲ್ಲರ ಜತೆಯೂ ಮುಕ್ತವಾಗಿ ಮಾತನಾಡುವುದಿಲ್ಲ. ಅವರದ್ದು ನಾಚಿಕೆ ಸ್ವಭಾವ. ಅವರನ್ನು ತುಂಬಾನೇ ಹತ್ತಿರದಿಂದ ನೋಡಿದವರಿಗೆ ಈ ವಿಚಾರ ಗೊತ್ತಿದೆ. ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರನ್ನು ಭೇಟಿ ಮಾಡಿದಾಗ ಇದೇ ವಿಚಾರವಾಗಿ ಪ್ರಶ್ನೆ ಎದುರಾಗಿತ್ತು. ಈ ಬಗ್ಗೆ ಪ್ರಭಾಸ್ ಮಾಹಿತಿ ನೀಡಿದ್ದಾರೆ.

ಪ್ರಭಾಸ್ ರಾಧೆ ಶ್ಯಾಮ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ‘ರಾಧೆ ಶ್ಯಾಮ್​’ ಸಿನಿಮಾ ಟ್ರೇಲರ್​ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಪ್ರಭಾಸ್​ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರು ದೀಪಿಕಾ ಜತೆಗಿನ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ.

ನಾಗ್​ ಅಶ್ವಿನ್​ ನಿರ್ದೇಶನದ ‘ಪ್ರಾಜೆಕ್ಟ್​-ಕೆ’ ಸಿನಿಮಾದಲ್ಲಿ ದೀಪಿಕಾ ಹಾಗೂ ಪ್ರಭಾಸ್​ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಪ್ರಗತಿಯಲ್ಲಿದೆ. 2021ರ ಡಿಸೆಂಬರ್​ನಲ್ಲಿ ಈ ಚಿತ್ರದ ಶೂಟ್​ ಹೈದರಾಬಾದ್​ನಲ್ಲಿ ನಡೆದಿತ್ತು. ದೀಪಿಕಾಗೆ ದಕ್ಷಿಣ ಭಾರತದ ಊಟ ನೀಡಿ ಖುಷಿಪಡಿಸಿದ್ದರು ಪ್ರಭಾಸ್​. ಇಬ್ಬರೂ ಮೊದಲ ಭೇಟಿಯಲ್ಲಿ ಏನು ಮಾತನಾಡಿದ್ದರು ಎನ್ನುವ ಬಗ್ಗೆ ಪ್ರಭಾಸ್ ಹೇಳಿಕೊಂಡಿದ್ದಾರೆ.

‘ಪ್ರಾಜೆಕ್ಟ್​-ಕೆ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ದೀಪಿಕಾ ಜತೆ ನಟಿಸುತ್ತಿದ್ದೇನೆ. ಅವರು ನಿಮಗೆ ನಾಚಿಕೆ ಆಗುತ್ತಿದೆಯಾ ಎಂದು ಕೇಳಿದರು. ನನಗೆ ಆರಂಭದಲ್ಲಿ ನಾಚಿಕೆ ಆಗುತ್ತದೆ, ಒಂದು ಸಲ ಹೊಂದಾಣಿಕೆ ಆದ ನಂತರ ನಾನು ಚೆನ್ನಾಗಿ ಮಾತನಾಡುತ್ತೇನೆ. ನನ್ನ ಕಂಪನಿಯನ್ನು ನನ್ನ ಜತೆಗಿದ್ದವರು ಎಂಜಾಯ್​ ಮಾಡುತ್ತಾರೆ ಎಂದರೆ ನಾನು ಬ್ಯಾಡ್ ಜೋಕ್​ಗಳನ್ನು ಹೇಳುತ್ತಾ ಇರುತ್ತೇನೆ’ ಎಂದರು ಪ್ರಭಾಸ್.

ನಾಗ್​ ಅಶ್ವಿನ್​ ನಿರ್ದೇಶನ ಮಾಡುತ್ತಿರುವ ‘ಪ್ರಾಜೆಕ್ಟ್​-ಕೆ’ ಚಿತ್ರಕ್ಕೆ ಪ್ರಭಾಸ್​ ನಾಯಕ. ದೀಪಿಕಾ ಚಿತ್ರದ ನಾಯಕಿ. ಅಮಿತಾಭ್​ ಬಚ್ಚನ್​ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕೆಲಸಗಳು ವಿಳಂಬವಾಗುತ್ತಿದೆ. ಈ ಚಿತ್ರದಲ್ಲಿ ವಿಎಫ್​ಎಕ್ಸ್​ ಕೆಲಸಗಳು ತುಂಬಾನೇ ಇದ್ದು, ಹೀಗಾಗಿ, ಸಿನಿಮಾ ಶೂಟಿಂಗ್​​ ಬೇಗ ಪೂರ್ಣಗೊಂಡರೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಹೆಚ್ಚು ಸಮಯ ಹಿಡಿಯಲಿದೆ.

ಇದನ್ನೂ ಓದಿ: ಪ್ರಭಾಸ್​-ಪೂಜಾ ನಡುವಿನ ಆಪ್ತತೆ ತೋರಿಕೆಗೆ ಮಾತ್ರ? ಇಬ್ಬರ ನಡುವೆ ಯಾವುದೂ ಸರಿಯಿಲ್ಲ

ಶರವೇಗದಲ್ಲಿದ್ದಾರೆ ಡಾರ್ಲಿಂಗ್​​; 2022ರಲ್ಲಿ ಪ್ರಭಾಸ್​ ನಟನೆಯ ಎಷ್ಟು ಸಿನಿಮಾ ರಿಲೀಸ್​

Follow us on

Related Stories

Most Read Stories

Click on your DTH Provider to Add TV9 Kannada