Oman: ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್​ ಪಲ್ಟಿ, 13 ಮಂದಿ ಭಾರತೀಯರು ಸೇರಿ 16 ಜನರು ನಾಪತ್ತೆ

|

Updated on: Jul 17, 2024 | 8:07 AM

ಕೊಮೊರೊಸ್ ಧ್ವಜ ಇರುವ ತೈಲ ಟ್ಯಾಂಕರ್​ ಪ್ರೆಸ್ಟೀಜ್ ಫಾಲ್ಕನ್ ಸಿಬ್ಬಂದಿಯಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದವರು ಇದ್ದರು. ಒಮಾನಿ ಬಂದರು ಡುಕ್ಮ್​ ಬಳಿ ರಾಸ್ ಮದರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿದೆ.

Oman: ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್​ ಪಲ್ಟಿ, 13 ಮಂದಿ ಭಾರತೀಯರು ಸೇರಿ 16 ಜನರು ನಾಪತ್ತೆ
ಹಡಗು
Follow us on

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್​ ಪಲ್ಟಿಯಾಗಿ 13 ಮಂದಿ ಭಾರತೀಯರು ಸೇರಿದಂತೆ ಒಟ್ಟು 16 ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊಮೊರೊಸ್ ಧ್ವಜ ಇರುವ ತೈಲ ಟ್ಯಾಂಕರ್​ ಪ್ರೆಸ್ಟೀಜ್ ಫಾಲ್ಕನ್ ಸಿಬ್ಬಂದಿಯಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದವರು ಇದ್ದರು. ಒಮಾನಿ ಬಂದರು ಡುಕ್ಮ್​ ಬಳಿ ರಾಸ್ ಮದರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿದೆ.

ರಾಯಿಟರ್ಸ್​ ವರದಿಯ ಪ್ರಕಾರ, ತೈಲ ಟ್ಯಾಂಕರ್​ ನೀರಿನಲ್ಲಿ ಮುಳುಗಿದೆ ಮತ್ತು ತಲೆಕೆಳಗಾಗಿ ಬಿದ್ದಿದೆ, ಆದರೆ ಹಡಗು ಸ್ಥಿರವಾಗಿದೆಯೇ ಅಥವಾ ಸಮುದ್ರಕ್ಕೆ ತೈಲ ಸೋರಿಕೆಯಾಗುತ್ತಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

2007ರಲ್ಲಿ ನಿರ್ಮಿಸಲಾದ 117 ಮೀಟರ್ ಉದ್ದದ ತೈಲ ಉತ್ಪನ್ನ ಟ್ಯಾಂಕರ್ ಎಲ್​ಎಸ್​ಇಜಿ ಶಿಪ್ಪಿಂಗ್ ಡೇಟಾ ಬಹಿರಂಗಪಡಿಸಿದೆ. ಸ್ವಲ್ಪ ದೂರದವರೆಗೆ ಪ್ರಯಾಣವಿದ್ದರೆ ಮಾತ್ರ ಈ ಟ್ಯಾಂಕರ್​ ನೀಡಲಾಗುತ್ತದೆ.

ಮತ್ತಷ್ಟು ಓದಿ: ಮಧ್ಯಪ್ರದೇಶದಲ್ಲಿ ದೋಣಿ ಮುಳುಗಿ 8 ಮಂದಿ ನಾಪತ್ತೆ; ನಾಲ್ವರ ರಕ್ಷಣೆ

ಒಮಾನ್​ನ ನೈಋತ್ಯ ಕರಾವಳಿಯಲ್ಲಿರುವ ಡುಕ್ಮ್​ ಬಂದರು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳಿಗೆ ಪ್ರಮುಖ ಕೇಂದ್ರವಾಗಿದೆ.

ಗಂಗಾ ನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆ, 6 ಮಂದಿ ನಾಪತ್ತೆ
ಗಂಗಾನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದ್ದು, 6 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಮುಳುಗಿದೆ. ಹನ್ನೊಂದು ಪ್ರಯಾಣಿಕರು ಈಜಿ ದಡ ತಲುಪಿದ್ದಾರೆ, ಉಳಿದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಘಟನೆ ಸಂಭವಿಸಿದಾಗ ಬೋಟ್ ಬರ್ಹ್‌ನ ಉಮಾನಾಥ್ ಘಾಟ್‌ನಿಂದ ಡಿಯಾರಾಗೆ ಪ್ರಯಾಣಿಸುತ್ತಿದ್ದು, ಪ್ರಸ್ತುತ ಬೋಟ್‌ನಲ್ಲಿರುವ ಉಳಿದ ಆರು ಪ್ರಯಾಣಿಕರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳ ಆರಂಭದಲ್ಲಿ ಬಿಹಾರದ ಮಹಾವೀರ್ ತೋಲಾ ಗ್ರಾಮದ ಬಳಿ ಗಂಗಾ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ನಾಪತ್ತೆಯಾಗಿದ್ದರು. ಮೇ 19 ರಂದು ಬೆಳಿಗ್ಗೆ 7-8 ರ ಸುಮಾರಿಗೆ ಕೆಲವು ರೈತರು ತಮ್ಮ ತರಕಾರಿಗಳನ್ನು ದೋಣಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ