ಗ್ರ್ಯಾಂಡ್ ಕ್ಯಾನ್ಯನ್ಗೆ 13 ವರ್ಷದ ಬಾಲಕನೊಬ್ಬ ಕುಟುಂಬದವರ ಜತೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಭಾರಿ ಅನಾಹುತ ಸಂಭವಿಸಿದೆ. ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನನದಲ್ಲಿ ಬಂಡೆಯ ಮೇಲೆ ಕುಳಿತಿರುವಾಗ ಆಯತಪ್ಪಿ 100 ಅಡಿ ಕೆಳಗೆ ಕಂದಕಕ್ಕೆ ಬಿದ್ದಿದ್ದಾನೆ. ಸತತ ಎರಡು ಗಂಟೆಗಳ ಕಾಲ ಆತನನ್ನು ಹುಡುಕಲಾಯಿತು, ಕೊನೆಗೂ ಆತ ಜೀವಂತವಾಗಿ ಸಿಕ್ಕಿದ್ದಾನೆ.
9 ಮೂಳೆಗಳು ಮುರಿದಿವೆ, ಶ್ವಾಸಕೋಶಕ್ಕೂ ಪೆಟ್ಟು ಬಿದ್ದಿದೆ, ಕೈಕಾಲುಗಳು ಮುರಿದಿವೆ, ಬೆರಳುಗಳಿಗೂ ತೊಂದರೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆತರಲಾಯಿತು. ನಮ್ಮ ಮಗನನ್ನು ಜೀವಂತವಾಗಿ ನೋಡುತ್ತೇನೆ ಎನ್ನುವ ಭರವಸೆಯೇ ಹೊರಟುಹೋಗಿದ್ದು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಫೋಟೊ ತೆಗೆಯುವ ವೇಳೆ ಕಲ್ಲು ಬಂಡೆಗಳ ನಡುವೆ ಕುಳಿತಿದ್ದೆ, ಅಲ್ಲಿಂದಲೇ ಜಾರಿ ಬಿದ್ದೆ, ಹಿಡಿದುಕೊಳ್ಳಲು ಏನೂ ಸಿಗಲಿಲ್ಲ, ಕೊನೆಗೆ ಮತ್ತೊಂದು ಕಲ್ಲನ್ನು ಹಿಡಿದುಕೊಂಡೆ ತುಂಬಾ ಹೊತ್ತು ಅದನ್ನೂ ಹಿಡಿದುಕೊಳ್ಳಲು ಆಗದೆ ಕೆಳಗೆ ಬಿದ್ದೆ, ಬಿದ್ದ ಬಳಿಕ ಏನೂ ನೆನಪಿಲ್ಲ ಸ್ವಲ್ಪ ಎಚ್ಚರವಾಗುವಷ್ಟರಲ್ಲಿ ಆಂಬ್ಯುಲೆನ್ಸ್ನಲ್ಲಿದ್ದೆ, ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದ ತಂಡವು ಬಾಲಕನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ.
ಮತ್ತಷ್ಟು ಓದಿ: Mexico Bus Accident: ಬಸ್ ಕಂದಕಕ್ಕೆ ಬಿದ್ದು ಭಾರತೀಯರು ಸೇರಿ 18 ಮಂದಿ ಸಾವು, 20 ಜನರಿಗೆ ಗಂಭೀರ ಗಾಯ
ಗ್ರ್ಯಾಂಡ್ ಕ್ಯಾನ್ಯನ್ಗೆ ಅಮೆರಿಕಾದ ಅರಿಜೊನ ಪ್ರಾಂತ್ಯದಲ್ಲಿ, ಇದು ಕೊಲೆರಾಡೋ ನದಿಯ ಕೊರೆತದಿಂದ ಉಂಟಾದ ಕಂದರಗಳನ್ನು ಒಳಗೊಂಡಿದೆ.ಇದು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದೆ. ಗ್ರ್ಯಾಂಡ್ ಕ್ಯಾನ್ಯನ್ 446 ಕಿ.ಮೀ.ಉದ್ದವಾಗಿದ್ದು ,29 ಕಿ.ಮೀ ಆಗಲವಾಗಿದೆ. ಇದರ ಆಳ ಕೆಲವು ಕಡೆಗಳಲ್ಲಿ 1800 ಮೀಟರ್‍ಗಳಷ್ಟು ಇದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:41 am, Mon, 14 August 23