3ನೇ ಬಾರಿಗೆ ಮ್ಯೂಸಿಯಂನಲ್ಲಿ ವರ್ಣಚಿತ್ರ ಕಳ್ಳತನ! ಅದರ ಮೌಲ್ಯ ಎಷ್ಟು ಗೊತ್ತಾ?

|

Updated on: Aug 31, 2020 | 3:37 PM

ಡಚ್ ಕಲಾ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಕಳ್ಳರು, ಡಚ್ ಸುವರ್ಣ ಯುಗದ ಮಾಸ್ಟರ್ ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ ವರ್ಣಚಿತ್ರವನ್ನು ಕದ್ದು ಪರಾರಿಯಾಗಿದ್ದಾರೆ. ಲೀರ್ಡ್ಯಾಮ್ ಪಟ್ಟಣದ ಹಾಫ್ಜೆ ವ್ಯಾನ್ ಮೆವ್ರೌವ್ ವ್ಯಾನ್ ಏರ್ಡೆನ್ ವಸ್ತುಸಂಗ್ರಹಾಲಯದಿಂದ Hofje Van Mevrouw Van Aerden Museum, Leerdam Town ಈ ವರ್ಣಚಿತ್ರವನ್ನು ಕಳವು ಮಾಡಲಾಗಿದೆ. ವಸ್ತುಸಂಗ್ರಹಾಲಯದ ಹಿಂದಿನ ಬಾಗಿಲನ್ನು ಒಡೆದು ಒಳನುಗ್ಗಿರುವ ಕಳ್ಳರು, ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ Two Laughing Boys ವರ್ಣಚಿತ್ರವನ್ನು ಮ್ಯೂಸಿಯಂನಿಂದ […]

3ನೇ ಬಾರಿಗೆ ಮ್ಯೂಸಿಯಂನಲ್ಲಿ ವರ್ಣಚಿತ್ರ ಕಳ್ಳತನ! ಅದರ ಮೌಲ್ಯ ಎಷ್ಟು ಗೊತ್ತಾ?
Follow us on

ಡಚ್ ಕಲಾ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಕಳ್ಳರು, ಡಚ್ ಸುವರ್ಣ ಯುಗದ ಮಾಸ್ಟರ್ ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ ವರ್ಣಚಿತ್ರವನ್ನು ಕದ್ದು ಪರಾರಿಯಾಗಿದ್ದಾರೆ.

ಲೀರ್ಡ್ಯಾಮ್ ಪಟ್ಟಣದ ಹಾಫ್ಜೆ ವ್ಯಾನ್ ಮೆವ್ರೌವ್ ವ್ಯಾನ್ ಏರ್ಡೆನ್ ವಸ್ತುಸಂಗ್ರಹಾಲಯದಿಂದ Hofje Van Mevrouw Van Aerden Museum, Leerdam Town ಈ ವರ್ಣಚಿತ್ರವನ್ನು ಕಳವು ಮಾಡಲಾಗಿದೆ. ವಸ್ತುಸಂಗ್ರಹಾಲಯದ ಹಿಂದಿನ ಬಾಗಿಲನ್ನು ಒಡೆದು ಒಳನುಗ್ಗಿರುವ ಕಳ್ಳರು, ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ Two Laughing Boys ವರ್ಣಚಿತ್ರವನ್ನು ಮ್ಯೂಸಿಯಂನಿಂದ ಎಗರಿಸಿ, ಪರಾರಿಯಾಗಿದ್ದಾರೆ.

ಇನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಸಿದ್ಧ ಡಚ್ ಕಲಾ ವಸ್ತುಸಂಗ್ರಹಾಲಯದಿಂದ ಕಳ್ಳತನವಾದ ಎರಡನೇ ಅಮೂಲ್ಯ ಕಲಾಕೃತಿ ಇದಾಗಿದೆ. ಇದೇ ಕೋವಿಡ್​ ಲಾಕ್‌ಡೌನ್‌ ಸಮಯದಲ್ಲಿ ಹಾಲೆಂಡಿನ ಕಲಾವಿದ ವಿನ್ಸೆಂಟ್ ವ್ಯಾನ್​ ಗೋ ಅವರ ಕಲಾಕೃತಿ ಕಳ್ಳತನವಾಗಿತ್ತು.

ಇನ್ನು, ಪ್ರಸ್ತುತ ಫ್ರಾನ್ಸ್ ಹಾಲ್ಸ್ ಅವರ ಇದೇ ಕಲಾಕೃತಿಯನ್ನು ಈ ಹಿಂದೆ 2011 ಮತ್ತು 1988ರಲ್ಲಿಯೂ ಕದಿಯಲಾಗಿತ್ತು. ಶತಮಾನಗಳಷ್ಟು ಹಳೆಯದಾದ ಈ ಕೃತಿಯನ್ನು ಮರಳಿ ಪತ್ತೆ ಹಚ್ಚಲು 1988ರಲ್ಲಿ ಪೊಲೀಸರಿಗೆ 3 ವರ್ಷ ಟೈಂ ಹಿಡಿಸಿತ್ತು. ಮತ್ತೊಮ್ಮೆ 2011 ರಲ್ಲಿ 6 ತಿಂಗಳ ಬಳಿಕ ಕಳ್ಳರು ಅದನ್ನು ಮಾರಾಟ ಮಾಡಲು ಮುಂದಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.