Nigeria: ದಕ್ಷಿಣ ನೈಜರ್​​ನಲ್ಲಿ ಚಿನ್ನದ ಗಣಿ ಕುಸಿತ; 18 ಜನರ ಸಾವು, ಏಳು ಮಂದಿಗೆ ಗಾಯ

| Updated By: Lakshmi Hegde

Updated on: Nov 09, 2021 | 10:50 AM

ನೈಜರ್​​ನ ಗರೀನ್​ ಲಿಮಾನ್​ ಗಣಿಯಲ್ಲಿ ದುರ್ಘಟನೆ ನಡೆದಿದೆ. ಕಾರ್ಮಿಕರು ಬಾವಿಯೊಳಗೆ ಅಗೆಯುತ್ತಿದ್ದಾಗ ಅದರ ಗೋಡೆಗಳು ಕುಸಿದಿದ್ದೇ ಇದಕ್ಕೆ ಕಾರಣ.

Nigeria: ದಕ್ಷಿಣ ನೈಜರ್​​ನಲ್ಲಿ ಚಿನ್ನದ ಗಣಿ ಕುಸಿತ; 18 ಜನರ ಸಾವು, ಏಳು ಮಂದಿಗೆ ಗಾಯ
ದಕ್ಷಿಣ ನೈಜರ್​ ಚಿನ್ನದ ಗಣಿ
Follow us on

ನೈಜೀರಿಯಾದ ಗಡಿ ಸಮೀಪ ಇರುವ ದಕ್ಷಿಣ ನೈಜರ್​​ನಲ್ಲಿ ಚಿನ್ನದ ಗಣಿ ಕುಸಿದ ಪರಿಣಾಮ 18 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೇಯರ್​ ತಿಳಿಸಿದ್ದಾರೆ.  ಗಣಿಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ 18 ಮಂದಿ ಜೀವಂತ ಸಮಾಧಿಯಾಗಿದ್ದಾರೆ. ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾನ್-ಇಸ್ಸಾ ಜಿಲ್ಲೆಯ ಮೇಯರ್ ಆಡಮೌ ಗುರೌ ತಿಳಿಸಿದ್ದಾರೆ. 

ನೈಜರ್​​ನ ಗರೀನ್​ ಲಿಮಾನ್​ ಗಣಿಯಲ್ಲಿ ದುರ್ಘಟನೆ ನಡೆದಿದೆ. ಕಾರ್ಮಿಕರು ಬಾವಿಯೊಳಗೆ ಅಗೆಯುತ್ತಿದ್ದಾಗ ಅದರ ಗೋಡೆಗಳು ಕುಸಿದಿದ್ದೇ ಇದಕ್ಕೆ ಕಾರಣ. ಇನ್ನೂ ಮೂರು ಮೃತದೇಹಗಳು ಗುಂಡಿಯೊಳಗೇ ಇರುವ ಸಾಧ್ಯತೆ ಇದೆ ಎಂದು ಸ್ಥಳೀಯ ಆಡಳಿತದ ಮೂಲಗಳು ತಿಳಿಸಿವೆ.  ಗ್ಯಾರಿನ್​-ಲಿಮಾನ್​ ಗಣಿಗಳನ್ನು ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಕಂಡು ಹಿಡಿಯಲಾಗಿದೆ. ಆದರೆ ಈಗಲೇ ಸಾವಿರಾರು ಗಣಿಗಾರರು ಇಲ್ಲಿಗೆ ಆಗಮಿಸಿ, ಕೆಲಸ ಮಾಡುತ್ತಿದ್ದಾರೆ.



ಇದನ್ನೂ ಓದಿ: ಭೋಪಾಲ್​ ಮಕ್ಕಳ ಆಸ್ಪತ್ರೆ ಬೆಂಕಿ ದುರಂತ; 4 ಮಕ್ಕಳು ದುರ್ಮರಣ, 36 ಮಂದಿಯ ರಕ್ಷಣೆ