ಚೀನಾದ ಜಿಂಗ್ಡಾವೋ ಬಂದರಿನಲ್ಲಿ ಹಡಗಿನಲ್ಲಿ ಭೀಕರ ಬೆಂಕಿ; 20 ಜನ ಸಾವು, ಐವರು ನಾಪತ್ತೆ

ಪೂರ್ವ ಚೀನಾದ ಜಿಂಗ್ಡಾವೋ ಬಂದರಿನ ಶಿಪ್‌ಯಾರ್ಡ್‌ನಲ್ಲಿ ವಿದೇಶಿ ಪತಾಕೆಯ ಸರಕು ಸಾಗಣೆ ಹಡಗಿನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, 20 ಜನರು ಮೃತಪಟ್ಟಿದ್ದಾರೆ. ಹಡಗಿನಲ್ಲಿದ್ದ ಒಟ್ಟು 42 ಜನರ ಪೈಕಿ 17 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನಾಪತ್ತೆಯಾಗಿರುವ ಐವರ ಹುಡುಕಾಟಕ್ಕಾಗಿ ತಕ್ಷಣವೇ ಪೂರ್ಣ ಪ್ರಮಾಣದ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಚೀನಾದ ಜಿಂಗ್ಡಾವೋ ಬಂದರಿನಲ್ಲಿ ಹಡಗಿನಲ್ಲಿ ಭೀಕರ ಬೆಂಕಿ; 20 ಜನ ಸಾವು, ಐವರು ನಾಪತ್ತೆ
China Cargo Ship
Image Credit source: x

Updated on: Sep 10, 2026 | 6:49 PM

ಬೀಜಿಂಗ್, ಸೆಪ್ಟೆಂಬರ್ 10: ಪೂರ್ವ ಚೀನಾದ ಜಿಂಗ್ಡಾವೋ ಬಂದರಿನಲ್ಲಿ ಲೈಬೀರಿಯಾ ಪತಾಕೆಯ ಸರಕು ಸಾಗಣೆ ಹಡಗಿನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ 20 ಜನರು ಮೃತಪಟ್ಟಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರಿ ನಿಯಂತ್ರಿತ ‘ಕ್ಸಿನ್ಹುವಾ’ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ ಫೋಟೋಗಳ ಪ್ರಕಾರ, ‘ವೆಸೆಲ್ ಫೈಂಡರ್’ ಶಿಪ್-ಟ್ರ್ಯಾಕಿಂಗ್ ವೆಬ್‌ಸೈಟ್‌ನಲ್ಲಿ ನೋಂದಾಯಿತ ‘ಓಷಿಯನ್ ಮೆಲೋಡಿ’ ಎಂಬ ಹಡಗಿನಲ್ಲಿ ಈ ಅನಾಹುತ ಸಂಭವಿಸಿದೆ.

42 ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಾಚರಣೆ:

ಅಪಘಾತದ ಸಮಯದಲ್ಲಿ ಹಡಗಿನಲ್ಲಿ ಒಟ್ಟು 42 ಜನರು ಉಪಸ್ಥಿತರಿದ್ದರು. ಬೆಂಕಿ ಹೊತ್ತಿಕೊಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ 12 ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನಾಪತ್ತೆಯಾಗಿರುವ ಐವರ ಹುಡುಕಾಟಕ್ಕಾಗಿ ತಕ್ಷಣವೇ ಪೂರ್ಣ ಪ್ರಮಾಣದ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.


ಇದನ್ನೂ ಓದಿ: ಗಾಲ್ವಾನ್ ಮಾದರಿಯಲ್ಲೇ ಈಶಾನ್ಯ ಗಡಿಯಲ್ಲೂ ಸಂಧಾನ: ಚೀನಾ ಕಮಾಂಡರ್‌ಗಳ ಜತೆ ಮೊದಲ ಬಾರಿಗೆ ಭಾರತ ಮುಖಾಮುಖಿ ಚರ್ಚೆ

ಅಪಘಾತದಲ್ಲಿ ಗಾಯಗೊಂಡವರ ಸ್ಥಿತಿ ಹಾಗೂ ಬೆಂಕಿ ಹೊತ್ತಿಕೊಳ್ಳಲು ನಿಜವಾದ ಕಾರಣ ಏನೆಂಬುದರ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಚೀನಾದ ಆಗ್ನೇಯ ಫುಜಿಯನ್ ಪ್ರಾಂತ್ಯದ ಶಿಪ್‌ಯಾರ್ಡ್‌ನಲ್ಲಿ ನಡೆದ ಸ್ಫೋಟದಲ್ಲಿ ರಕ್ಷಣಾ ಸಿಬ್ಬಂದಿ ಮೃತಪಟ್ಟು 12 ಜನರು ಗಾಯಗೊಂಡ ಘಟನೆ ನಡೆದ ಕೇವಲ ಒಂದು ತಿಂಗಳ ಅಂತರದಲ್ಲಿ ಈ ಮತ್ತೊಂದು ದೊಡ್ಡ ಭೀಕರ ದುರಂತ ಸಂಭವಿಸಿದೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us