ಟ್ರಂಪ್​ ಚಿತಾವಣೆ : ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನ ಗಡಿಪಾರು ಮಾಡಿದ ಮೆಕ್ಸಿಕೊ

|

Updated on: Oct 18, 2019 | 11:25 AM

ಮೆಕ್ಸಿಕೊ: ಅಕ್ರಮವಾಗಿ ನೆಲೆಸಿದ್ದ 311 ಭಾರತೀಯ ವಲಸಿಗರನ್ನು ಗಡಿಪಾರು ಮಾಡಿರುವುದಾಗಿ ಮೆಕ್ಸಿಕೊದ ಎನ್​ಎಂಐ (ರಾಷ್ಟ್ರೀಯ ವಲಸೆ ಸಂಸ್ಥೆ) ತಿಳಿಸಿದೆ. ಮೆಕ್ಸಿಕೊದ 8 ರಾಜ್ಯಗಳಲ್ಲಿ ಒಬ್ಬ ಮಹಿಳೆ ಸೇರಿದಂತೆ 311 ವಲಸಿಗರು ಕಾನೂನು ಬಾಹಿರವಾಗಿ ನೆಲೆಸಿದ್ದರು. ಅಲ್ಲದೆ, ಇವರು ಗಡಿ ದಾಟಿ ಅಮೆರಿಕಕ್ಕೆ ತೆರಳಲಿದ್ದರು. ಹಾಗಾಗಿ ಅಕ್ರಮ ವಲಸಿಗರ ಮೇಲೆ ಮೊದಲ ಬಾರಿಗೆ ಕ್ರಮ ಕೈಗೊಂಡ ಮೆಕ್ಸಿಕೊದ ವಲಸೆ ಅಧಿಕಾರಿಗಳು ಟೊಲುಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಲಸಿಗರನ್ನು ನವದೆಹಲಿಗೆ ವಾಪಸ್ ಕಳುಹಿಸಿದ್ದಾರೆ. ಅಮೆರಿಕ ಕುಮ್ಮಕ್ಕು: ಅಕ್ರಮ ವಲಸಿಗರ ಮೇಲೆ ಕ್ರಮ […]

ಟ್ರಂಪ್​ ಚಿತಾವಣೆ : ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನ ಗಡಿಪಾರು ಮಾಡಿದ ಮೆಕ್ಸಿಕೊ
Follow us on

ಮೆಕ್ಸಿಕೊ: ಅಕ್ರಮವಾಗಿ ನೆಲೆಸಿದ್ದ 311 ಭಾರತೀಯ ವಲಸಿಗರನ್ನು ಗಡಿಪಾರು ಮಾಡಿರುವುದಾಗಿ ಮೆಕ್ಸಿಕೊದ ಎನ್​ಎಂಐ (ರಾಷ್ಟ್ರೀಯ ವಲಸೆ ಸಂಸ್ಥೆ) ತಿಳಿಸಿದೆ.

ಮೆಕ್ಸಿಕೊದ 8 ರಾಜ್ಯಗಳಲ್ಲಿ ಒಬ್ಬ ಮಹಿಳೆ ಸೇರಿದಂತೆ 311 ವಲಸಿಗರು ಕಾನೂನು ಬಾಹಿರವಾಗಿ ನೆಲೆಸಿದ್ದರು. ಅಲ್ಲದೆ, ಇವರು ಗಡಿ ದಾಟಿ ಅಮೆರಿಕಕ್ಕೆ ತೆರಳಲಿದ್ದರು. ಹಾಗಾಗಿ ಅಕ್ರಮ ವಲಸಿಗರ ಮೇಲೆ ಮೊದಲ ಬಾರಿಗೆ ಕ್ರಮ ಕೈಗೊಂಡ ಮೆಕ್ಸಿಕೊದ ವಲಸೆ ಅಧಿಕಾರಿಗಳು ಟೊಲುಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಲಸಿಗರನ್ನು ನವದೆಹಲಿಗೆ ವಾಪಸ್ ಕಳುಹಿಸಿದ್ದಾರೆ.

ಅಮೆರಿಕ ಕುಮ್ಮಕ್ಕು:
ಅಕ್ರಮ ವಲಸಿಗರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸುಂಕ ವಿಧಿಸುವುದಾಗಿ ಮೆಕ್ಸಿಕೊಗೆ ಅಮೆರಿಕ ಎಚ್ಚರಿಕೆ ನೀಡಿತ್ತು. ಹೀಗಾಗಿ ವಲಸಿಗರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.

Published On - 8:59 am, Fri, 18 October 19