ಹೆಚ್ಚುವರಿ ಹಣ ಪಾವತಿಸಲು ಇಷ್ಟಪಡದ ನಾಲ್ವರು ಏರ್​ಪೋರ್ಟ್​ನಲ್ಲಿ ಕುಳಿತು 30 ಕೆಜಿ ಕಿತ್ತಳೆ ಹಣ್ಣು ತಿಂದರು! ಬಾಯಲ್ಲೆಲ್ಲ ಹುಣ್ಣು..

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 27, 2021 | 10:03 PM

ತಿನ್ನುವಾಗ ಹೇಗೋ ತಿಂದು ಮುಗಿಸಿದವರಿಗೆ ಬಳಿಕ ಸಮಸ್ಯೆಯಾಗಿದೆ. ಎಲ್ಲರ ಬಾಯಲ್ಲೂ ಹುಣ್ಣು ಆಗಿ ಉರಿಯುತ್ತಿದೆ. ಇನ್ನೊಮ್ಮೆ ಯಾವತ್ತೂ ನಾವು ಕಿತ್ತಳೆ ಹಣ್ಣು ತಿನ್ನಲು ಇಷ್ಟಪಡದಂತಾಗಿದೆ ಎಂದೂ ವಾಂಗ್ ಹೇಳಿದ್ದಾರೆ.

ಹೆಚ್ಚುವರಿ ಹಣ ಪಾವತಿಸಲು ಇಷ್ಟಪಡದ ನಾಲ್ವರು ಏರ್​ಪೋರ್ಟ್​ನಲ್ಲಿ ಕುಳಿತು 30 ಕೆಜಿ ಕಿತ್ತಳೆ ಹಣ್ಣು ತಿಂದರು! ಬಾಯಲ್ಲೆಲ್ಲ ಹುಣ್ಣು..
ಕಿತ್ತಳೆ ಹಣ್ಣು
Follow us on

ವಾಯುಮಾರ್ಗ ಸಾರಿಗೆಯಲ್ಲಿ ನಿಯಮಗಳು ಹೆಚ್ಚು. ಅದನ್ನು ಪ್ರಯಾಣಿಕರು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಅದರಲ್ಲೂ ಬ್ಯಾಗೇಜ್​ಗಳಿಗೆ ಲಿಮಿಟ್​ ಇದ್ದು, ಅದಕ್ಕೂ ಮೀರಿ ಯಾರಾದರೂ ಭಾರವನ್ನು ಹೊತ್ತು ತಂದರೆ, ಅದಕ್ಕೆ ಹೆಚ್ಚುವರಿ ಶುಲ್ಕ ನೀಡಲೇಬೇಕಾಗುತ್ತದೆ. ಇಂದು ವಿಮಾನಯಾನ ಸಂಬಂಧ ಅಂತಾರಾಷ್ಟ್ರೀಯವಾಗಿ ಇರುವ ನಿಯಮ. ಈಗ ಚೀನಾದ ಯುನ್ನಾನ್​ ಪ್ರಾಂತ್ಯದ ಕುನ್ಮಿಂಗ್ ಏರ್​ಪೋರ್ಟ್​ನಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿತ್ತು.

ಈ ವಿಮಾನ ನಿಲ್ದಾಣಕ್ಕೆ ನಾಲ್ವರು ಪ್ರಯಾಣಿಕರು ಬಂದಿದ್ದಾರೆ. ಅವರ ಬಳಿ 30 ಕೆಜಿ ತೂಕದ ಕಿತ್ತಳೆಹಣ್ಣು ಇತ್ತು. ಆದರೆ ಏರ್​ಪೋರ್ಟ್​​ಗೆ ಬಂದ ಅವರಿಗೆ ತಾವು ಈ ಬ್ಯಾಗೇಜ್​ಗೆ 300 ಯುವಾನ್​ (3384ರೂಪಾಯಿ) ಹೆಚ್ಚುವರಿಯಾಗಿ ನೀಡಬೇಕು ಎಂದು ಅವರಿಗೆ ತಿಳಿಯಿತು. ಆದರೆ ಅವರು ಹೆಚ್ಚುವರಿ ಹಣ ನೀಡಲು ಸಿದ್ಧರಿರಲಿಲ್ಲ. ಅದರ ಬದಲಿಗೆ ಅಷ್ಟೂ 30 ಕೆಜಿ ಕಿತ್ತಳೆ ಹಣ್ಣನ್ನು ನಾಲ್ವರೂ ಸೇರಿ ತಿಂದಿದ್ದಾರೆ..!

ಇದು ಖಂಡಿತ ಜೋಕ್​ ಅಲ್ಲ, ನಾಲ್ಕು ಜನರಲ್ಲಿ ಒಬ್ಬನಾದ ವಾಂಗ್​ ಗ್ಲೋಬಲ್ ಟೈಂಗೆ ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. 300 ಯುವಾನ್ ಸಿಕ್ಕಾಪಟೆ ದುಬಾರಿ ಎನಿಸಿತು. ಹಾಗಾಗಿ ಏರ್​ಪೋರ್ಟ್​ನಲ್ಲಿಯೇ ಅಷ್ಟೂ ಹಣ್ಣು ತಿನ್ನಲು ನಿರ್ಧರಿಸಿದೆವು. ನಾಲ್ವರೂ ಸೇರಿ 20-30ನಿಮಿಷದಲ್ಲಿ ಹಣ್ಣುಗಳನ್ನು ಖಾಲಿ ಮಾಡಿದೆವು ಎಂದಿದ್ದಾರೆ. ತಿನ್ನುವಾಗ ಹೇಗೋ ತಿಂದು ಮುಗಿಸಿದವರಿಗೆ ಬಳಿಕ ಸಮಸ್ಯೆಯಾಗಿದೆ. ಎಲ್ಲರ ಬಾಯಲ್ಲೂ ಹುಣ್ಣು ಆಗಿ ಉರಿಯುತ್ತಿದೆ. ಇನ್ನೊಮ್ಮೆ ಯಾವತ್ತೂ ನಾವು ಕಿತ್ತಳೆ ಹಣ್ಣು ತಿನ್ನಲು ಇಷ್ಟಪಡದಂತಾಗಿದೆ ಎಂದೂ ವಾಂಗ್ ಹೇಳಿದ್ದಾರೆ.

ನಮ್ಮ ಆ್ಯಪ್​ ನಿಷೇಧ ಮಾಡುವ ಮೂಲಕ ಭಾರತ WTO ನಿಯಮ ಉಲ್ಲಂಘನೆ ಮಾಡಿದೆ; ಚೀನಾ ಅಸಮಾಧಾನ