ನವದೆಹಲಿ: ದೇಶದಲ್ಲಿ ಮಾರಣಾಂತಿಕ ಕೊರೊನಾ ಸೋಂಕು ಕಾಲಿಟ್ಟನಂತರ ಯಾವುದೇ ವಿದೇಶ ಪ್ರವಾಸ ಕೈಗೊಳ್ಳದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ಮೊದಲ ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದಾರೆ.
ಎಲ್ಲಿಗೆ, ಯಾವತ್ತು?
ಹೌದು, ಕೊರೊನಾ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮಾರ್ಚ್ 26ಕ್ಕೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮಾರ್ಚ್ 26ಕ್ಕೆ ಢಾಕಾ ತಲುಪಲಿರುವ ಪ್ರಧಾನಿ ಮೋದಿ ತಮ್ಮ ಬಾಂಗ್ಲಾ ಪ್ರವಾಸ ವೇಳೆ ಬಾಂಗ್ಲಾದೇಶ ಮತ್ತು ನೇಪಾಳದ ಜೊತೆಗೆ ಸಾರಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.
ಭಾರತದಲ್ಲಿ ಕೊರೊನಾಕ್ಕೆ ಒಂದು ವರ್ಷ
ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟು ಇಂದಿಗೆ ಭರ್ತಿ ಒಂದು ವರ್ಷವಾಗಿದೆ. ಚೀನಾದ ವುಹಾನ್ನಿಂದ ಕೇರಳದ ತ್ರಿಶೂಲ್ಗೆ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬನಲ್ಲಿ 2020ರ ಜನವರಿ 30ರಂದು ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು.
ಕೊರೊನಾ ನಿಯಂತ್ರಣದಲ್ಲಿ ಭಾರತ ವಿಶ್ವಕ್ಕೇ ಮಾದರಿ: ಪ್ರಧಾನಿ ನರೇಂದ್ರ ಮೋದಿ
Published On - 10:11 am, Sat, 30 January 21