ಕೊರೊನಾ​ಗೆ ಬಲಿಯಾದ ಅಜ್ಜಿ 10 ದಿನದ ನಂತರ ಮನೆಯಲ್ಲಿ ಪ್ರತ್ಯಕ್ಷ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 25, 2021 | 7:14 PM

ರೊಗೆಲಿಯಾ ಬ್ಲಾಂಕೊ ಹೆಸರಿನ 85 ವರ್ಷದ ಅಜ್ಜಿ ಜನವರಿ 13ರಂದು ಕೊರೊನಾ ವೈರಸ್​ನಿಂದಾಗಿ ಆಸ್ಪತ್ರೆ ಸೇರಿದ್ದರು. ಆಸ್ಪತ್ರೆ ಸೇರಿದ ಕೆಲವೇ ದಿನಗಳ ನಂತರ ಅವರು ಮೃತಪಟ್ಟ ಸುದ್ದಿ ಮನೆ ತಲುಪಿತ್ತು. ಆದರೆ, ಆಸ್ಪತ್ರೆಯವರು ಶವವನ್ನು ನೀಡಲೇ ಇಲ್ಲ.

ಕೊರೊನಾ​ಗೆ ಬಲಿಯಾದ ಅಜ್ಜಿ 10 ದಿನದ ನಂತರ ಮನೆಯಲ್ಲಿ ಪ್ರತ್ಯಕ್ಷ!
ಸಾಂದರ್ಭಿಕ ಚಿತ್ರ
Follow us on

ಕೊರೊನಾ ಸೋಂಕಿಗೆ ಬಲಿಯಾದವರನ್ನು ಆಸ್ಪತ್ರೆಯವರೇ ಕೊಂಡೊಯ್ದು ಅಜ್ಞಾತ ಸ್ಥಳದಲ್ಲಿ ಸುಟ್ಟು ಹಾಕುವ ಪ್ರಕ್ರಿಯೆ ನಡೆದೇ ಇದೆ. ಸ್ಪೇನ್​ನಲ್ಲೂ ಇದೇ ರೀತಿ ಆಗಿದೆ. ಕೊರೊನಾಗೆ ಬಲಿಯಾದ ಅಜ್ಜಿಯನ್ನು ಆಸ್ಪತ್ರೆಯವರೇ ಸುಟ್ಟಿದ್ದರು. ವಿಚಿತ್ರ ಎಂದರೆ 10 ದಿನಗಳ ನಂತರ ಈ ಅಜ್ಜಿ ಮನೆಯಲ್ಲಿ ಪತ್ತೆ ಆಗಿದ್ದಾಳೆ!

ರೊಗೆಲಿಯಾ ಬ್ಲಾಂಕೊ ಹೆಸರಿನ 85 ವರ್ಷದ ಅಜ್ಜಿ ಜನವರಿ 13ರಂದು ಕೊರೊನಾ ವೈರಸ್​ನಿಂದಾಗಿ ಆಸ್ಪತ್ರೆ ಸೇರಿದ್ದರು. ಆಸ್ಪತ್ರೆ ಸೇರಿದ ಕೆಲವೇ ದಿನಗಳ ನಂತರ ಅವರು ಮೃತಪಟ್ಟ ಸುದ್ದಿ ಮನೆ ತಲುಪಿತ್ತು. ಆದರೆ, ಆಸ್ಪತ್ರೆಯವರು ಶವವನ್ನು ನೀಡಲೇ ಇಲ್ಲ. ಕೊರೊನಾ ನಿಯಮದಂತೆ ಶವವನ್ನು ಅಜ್ಞಾತ ಸ್ಥಳದಲ್ಲಿ ಸುಡಲಾಗಿತ್ತು.

ಮನೆಯವರೆಲ್ಲರೂ ಶೋಕದಲ್ಲಿದ್ದರು. ಅಮ್ಮನನ್ನು ಕಳೆದುಕೊಂಡ ಮಗ ನೊಂದಿದ್ದ. ಆದರೆ, ಇತ್ತೀಚೆಗೆ ಎಂಬಂತೆ ಮನೆಯ ಮುಂಭಾಗದಲ್ಲಿ ಆ್ಯಂಬುಲೆನ್ಸ್​ ಬಂದು ನಿಂತಿತ್ತು. ಆ್ಯಂಬುಲೆನ್ಸ್​ನಿಂದ ರೊಗೆಲಿಯಾ ಬ್ಲಾಂಕೊ ಕೆಳಗೆ ಇಳಿದಿದ್ದರು. ಇದನ್ನು ನೋಡಿದ ಕುಟುಂಬದವರಿಗೆ ಇದು ನಿಜವೋ ಅಥವಾ ಸುಳ್ಳೋ ಎನ್ನುವುದನ್ನು ನಂಬಲಾಗಲೇ ಇಲ್ಲ.

ನಂತರ, ಗೊತ್ತಾಗಿದ್ದ ವಿಚಾರ ಎಂದರೆ, ಆಸ್ಪತ್ರೆಯಲ್ಲಿ ಹೆಸರು ಅದಲು-ಬದಲಾಗಿತ್ತು. ಮೃತಪಟ್ಟವರು ಬೇರೆ ಯಾರೋ ಆದರೂ, ಅಜ್ಜಿಯ ಹೆಸರು ಅದಕ್ಕೆ ಥಳುಕು ಹಾಕಿಕೊಂಡಿತ್ತು.

ಆತ್ಮಹತ್ಯೆಗೆ ಯತ್ನಿಸಿದ್ದ ಕೊರೊನಾ ಸೋಂಕಿತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು