ನವದೆಹಲಿ: ಟರ್ಕಿಯ ಏರೋಸ್ಪೇಸ್ ಇಂಡಸ್ಟ್ರೀಸ್ (TUSAS) ನ ಪ್ರಧಾನ ಕಚೇರಿಯಲ್ಲಿ ಇಂದು ಮಾರಣಾಂತಿಕ ದಾಳಿ ನಡೆದಿದೆ ಎಂದು ಟರ್ಕಿ ದೃಢಪಡಿಸಿದೆ. ಮಾಧ್ಯಮಗಳು ಘಟನಾ ಸ್ಥಳದಲ್ಲಿ ಜೋರಾಗಿ ಸ್ಫೋಟವನ್ನು ವರದಿ ಮಾಡಿದೆ ಮತ್ತು ಗುಂಡಿನ ವಿನಿಮಯದ ವಿಡಿಯೋ ತುಣುಕನ್ನು ಪ್ರಸಾರ ಮಾಡಿವೆ. ಈ ಸ್ಫೋಟದ ಕಾರಣ ಮತ್ತು ನಂತರದ ಗುಂಡಿನ ದಾಳಿ ನಡೆಸಿದವರ ವಿವರ ಇನ್ನೂ ತಿಳಿದುಬಂದಿಲ್ಲ. ಆದರೂ ಕೆಲವು ವರದಿಗಳು ಸಂಭವನೀಯ ಆತ್ಮಹತ್ಯಾ ದಾಳಿಯನ್ನು ಸೂಚಿಸುತ್ತವೆ. ಸರ್ಕಾರಿ ಸ್ವಾಮ್ಯದ ಅನಡೋಲು ಏಜೆನ್ಸಿ ವರದಿ ಮಾಡಿದಂತೆ ತುರ್ತು ಸೇವೆಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ.
TUSAS ಟರ್ಕಿಯ ಪ್ರಮುಖ ರಕ್ಷಣಾ ಮತ್ತು ವಾಯುಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸೌಲಭ್ಯವು ಅಂಕಾರಾದ ಕಹ್ರಾಮಂಕಜನ್‌ನಲ್ಲಿ 43 ಮಿಲಿಯನ್ ಚದರ ಅಡಿಗಳನ್ನು ಒಳಗೊಂಡಿದೆ. ಇದು ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಉಪಗ್ರಹಗಳ ಉತ್ಪಾದನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಘಟನೆಯ ನಂತರ, ಟರ್ಕಿಯ ಬೆಂಚ್‌ಮಾರ್ಕ್ ಸ್ಟಾಕ್ ಸೂಚ್ಯಂಕವು ಶೇ. 2ರಷ್ಟು ಕುಸಿದಿದೆ. ಈ ಘಟನಾ ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರಿದಿದ್ದು, ಕೆಲವು ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿರಬಹುದು ಎಂದು ಎನ್‌ಟಿವಿ ವರದಿ ಮಾಡಿದೆ. ಅಂಕಾರಾದ ಕಹ್ರಾಮಂಕಜನ್ ಜಿಲ್ಲೆಯ ಆವರಣದ ಮೇಲೆ ಹೆಲಿಕಾಪ್ಟರ್‌ಗಳು ಹಾರುತ್ತಿರುವುದು ಕಂಡುಬಂದಿದೆ.
Report of a terror attack in #Ankara #Turkey – several people have been killed by attackers, gunfight and explosion have been heard. Hostage situation seems to be reported.
***What does the first picture remind you of …😕 pic.twitter.com/49HOffzqvT
— manju 🇮🇳 (@justtweettz) October 23, 2024
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ- ಭಾರತ ಮುಖಾಮುಖಿ; ಭಯೋತ್ಪಾದನೆ ವಿರುದ್ಧ ದ್ವಂದ್ವ ನಿಲುವಿಲ್ಲ ಎಂದ ಮೋದಿ
ನಾನು ಈ ಹೇಯ ದಾಳಿಯನ್ನು ಖಂಡಿಸುತ್ತೇನೆ. ಭಯೋತ್ಪಾದಕನನ್ನು ಕೊಲ್ಲುವವರೆಗೂ ನಮ್ಮ ಹೋರಾಟವು ಮುಂದುವರಿಯುತ್ತದೆ ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ. ನಮ್ಮ ಹುತಾತ್ಮರ ಮೇಲೆ ದೇವರು ಕರುಣಿಸಲಿ. ನಮ್ಮ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ