ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿರುವ ಅಫ್ಘಾನ್ ಸಿಖ್ ಮತ್ತು ಹಿಂದುಗಳಿಗೆ ಭಾರತಕ್ಕೆ ತೆರಳಲು ಅನುಮತಿ ನೀಡಲಾಗುತ್ತದೆ ಎಂದು ತಾಲಿಬಾನಿಗಳು (Taliban Terrorists) ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನ್ನ ಹಿಂದು ಮತ್ತು ಸಿಖ್ ನಾಗರಿಕರು ಕಾಬೂಲ್ ಏರ್ಪೋರ್ಟ್ (Kabul Airport)ಗೆ ಬರಲು, ಅಲ್ಲಿಂದ ಭಾರತಕ್ಕೆ ಪ್ರಯಾಣ ಮಾಡಲು ಏನೋ ತೊಡಕು ಇಲ್ಲ. ಆದರೆ ಅವರು ಮಾನ್ಯವಾದ ಪ್ರಯಾಣ ದಾಖಲೆಗಳನ್ನು ಹೊಂದಿರಬೇಕು. ಹಿಂದು ಮತ್ತು ಸಿಖ್ರು ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗಾಗಿಯೂ ಭಾರತಕ್ಕೆ ಹೋಗಿ-ಬರಬಹುದು ಎಂದು ತಾಲಿಬಾನ್ ವಕ್ತಾರ ಜಬೀಹುಲ್ಲಾಹ್ ಮುಜಾಹಿದ್ ಹೇಳಿದ್ದಾರೆ ಅಫ್ಘಾನ್ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್ ಸೇರಿ ಬೇರೆ ಕೆಲವು ಸಮುದಾಯಗಳ ಭದ್ರತೆ ಬಗ್ಗೆ ಮಾತನಾಡಿದ ಜಬೀಹುಲ್ಲಾ ಮುಜಾಹಿದ್, ಇತರ ಅಲ್ಪಸಂಖ್ಯಾತರಂತೆ ಅಫ್ಘಾನ್ನಲ್ಲಿರುವ ಹಿಂದು, ಸಿಖ್ರಿಗೂ ನಮ್ಮಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ, ಅಫ್ಘಾನಿಸ್ತಾನದ ಹಿಂದು ಮತ್ತು ಸಿಖ್ ಸಮುದಾಯದವರು ಕಾಬೂಲ್ ಏರ್ಪೋರ್ಟ್ಗೆ ಬಂದು ಭಾರತದ ವಿಮಾನಗಳನ್ನು ಹತ್ತಲು ಮುಂದಾದರೆ ತಾಲಿಬಾನಿಗಳು ಅವರನ್ನು ತಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಸುಮಾರು 150 ಸಿಖ್ ಮತ್ತು ಹಿಂದೂಗಳು ಭಾರತಕ್ಕೆ ಹೋಗಲು ಮುಂದಾಗಿದ್ದರು. ಆದರೆ ಅವರಿಗೆ ತಾಲಿಬಾನಿಗಳು ಅವಕಾಶ ನೀಡಲಿಲ್ಲ ಎಂದು ಕಾಬೂಲ್ ಮೂಲಕ ಪರ್ವಾನ್ ಸಮಿತಿ ಅಧ್ಯಕ್ಷೆ ಗುರ್ನಮ್ ಸಿಂಗ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದರು. ಇದೀಗ ಗುರು ತೇಗ್ ಬಹದ್ದೂರ್ ಅವರ 400ನೇ ಜನ್ಮಜಯಂತಿ ನಿಮಿತ್ತ ಸಿಖ್ ಸಮುದಾಯದವರು ಭಾರತಕ್ಕೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಇದೆ. ಈ ಪ್ರಯಾಣಕ್ಕೆ ನಾವು ತೊಡಕು ಮಾಡುವುದಿಲ್ಲವೆಂದು ತಾಲಿಬಾನ್ ಭರವಸೆ ನೀಡಿದೆ.
ಇದನ್ನೂ ಓದಿ: Pradeep Narwal: ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್
ತಾಲಿಬಾನ್ ಬಗ್ಗೆ ಭಯವಿಲ್ಲ, ಯಾಕೆ ಹೆದರಬೇಕು? ಎಂದ ಕಾಬೂಲ್ ಶಾಲಾ ವಿದ್ಯಾರ್ಥಿನಿ
Published On - 2:51 pm, Tue, 31 August 21