Panic Attack: ಅಯ್ಯಯ್ಯೋ ಬಾಗಿಲು ತೆಗೀರಿ, ಹೊರಗೆ ಹೋಗ್ಬೇಕು, ವಿಮಾನದಲ್ಲಿ ವ್ಯಕ್ತಿಯ ಕಿರುಚಾಟ

|

Updated on: May 19, 2023 | 11:27 AM

ಅಯ್ಯಯ್ಯೋ ಬಾಗಿಲು ತೆಗೀರಿ ಒಂದು ಕ್ಷಣ ನಾನು ವಿಮಾನದೊಳಗೆ ಇರುವುದಿಲ್ಲ ಹೊರಗೆ ಹೋಗುತ್ತೇನೆ ಎಂದು ವೃದ್ಧರೊಬ್ಬರು ಕಿರುಚಾಡಲು ಶುರು ಮಾಡಿದ್ದು ಸಿಬ್ಬಂದಿ ಒಮ್ಮೆ ಭಯಭೀತರಾಗಿದ್ದರು.

Panic Attack: ಅಯ್ಯಯ್ಯೋ ಬಾಗಿಲು ತೆಗೀರಿ, ಹೊರಗೆ ಹೋಗ್ಬೇಕು, ವಿಮಾನದಲ್ಲಿ ವ್ಯಕ್ತಿಯ ಕಿರುಚಾಟ
ಏರ್​ ಇಂಡಿಯಾ ವಿಮಾನ
Follow us on

ಅಯ್ಯಯ್ಯೋ ಬಾಗಿಲು ತೆಗೀರಿ ಒಂದು ಕ್ಷಣನೂ ನಾನು ವಿಮಾನದೊಳಗೆ ಇರುವುದಿಲ್ಲ ಹೊರಗೆ ಹೋಗುತ್ತೇನೆ ಎಂದು ವೃದ್ಧರೊಬ್ಬರು ಕಿರುಚಾಡಲು ಶುರು ಮಾಡಿದ್ದು ವಿಮಾನ ಸಿಬ್ಬಂದಿ ಒಮ್ಮೆ ಭಯಭೀತರಾಗಿದ್ದರು. ನೆವಾರ್ಕ್​ನಿಂದ ಮುಂಬೈಗೆ ಹೋಗುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಘಟನೆ ನಡೆದಿದೆ. ಸಿಬ್ಬಂದಿಯೊಂದಿಗೂ ಕೆಟ್ಟದಾಗಿ ವರ್ತಿಸಿದ್ದಾರೆ, ವೈದ್ಯರು ಸಮಾಧಾನ ಮಾಡಿದ ಬಳಿಕ ಶಾಂತರಾದರು. ಔಷಧಿ ನೀಡುವ ಮೂಲಕ ಶಾಂತಗೊಳಿಸಲಾಯಿತು. ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಗಾಬರಿಗೊಂಡು ಜೋರಾಗಿ ಕೂಗಾಡಲು ಆರಂಭಿಸಿದ್ದರು. ಕ್ಯಾಬಿನ್ ಸಿಬ್ಬಂದಿಯ ಸದಸ್ಯರು ಅವರನ್ನು ಸಹಜ ಸ್ಥಿತಿಗೆ ತರಲು ತುಂಬಾ ಪ್ರಯತ್ನಿಸಿದ್ದಾರೆ.

ವ್ಯಕ್ತಿ ನೋಡಲು ಆರೋಗ್ಯವಂತರಾಗಿಯೇ ಕಂಡಿದ್ದಾರೆ, ಕೆಲವೊಮ್ಮೆ ವಿಮಾನದಲ್ಲಿ ಪ್ರಯಾಣಿಸುವಾಗ ಕೆಲವರಿಗೆ ಪ್ಯಾನಿಕ್ ಅಟ್ಯಾಕ್ ಕಾಣಿಸಿಕೊಳ್ಳುತ್ತದೆ. ಇವರಿಗೂ ಅದೇ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಪ್ಯಾನಿಕ್ ಅಟ್ಯಾಕ್‌ ಉಂಟಾಗುವಾಗ ಯಾವುದೇ ಮುನ್ಸೂಚನೆ ಬರುವುದಿಲ್ಲ. ಇದು ಹಠಾತ್ ಉಂಟಾಗುವ ಭಾವನೆಗಳನ್ನು ಒಳಗೊಂಡಿರುತ್ತವೆ. ಈ ರೀತಿ ಭಾವನೆಗಳ ತರಂಗ ನಿದ್ರೆಯ ಸಮಯದಲ್ಲೂ ಉಂಟಾಗಬಹುದು. ಅಥವಾ ಯಾವುದೇ ಸಮಯದಲ್ಲೂ ಆಗಬಹುದು.

ಮತ್ತಷ್ಟು ಓದಿ: Indigo Flight: ಇಂಡಿಗೋ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ, ಇಬ್ಬರು ಪ್ರಯಾಣಿಕರ ಬಂಧನ

ಪ್ಯಾನಿಕ್ ಅಟ್ಯಾಕ್ ಅನುಭವಿಸುತ್ತಿರುವ ಜನರು ತಾವು ಸಾಯುತ್ತಿರುವುದಾಗಿ ಅಥವಾ ಹುಚ್ಚರಾಗುತ್ತಿರುವಂತೆ ಭಾಸವಾಗುತ್ತದೆ. ಅಂತಹ ಪ್ಯಾನಿಕ್ ಸಮಯದಲ್ಲಿ ವ್ಯಕ್ತಿಯು ಅನುಭವಿಸುವ ಭಯ ಮತ್ತು ಭಾವನೆಗಳು ಎರಡೂ ನೈಜ ಪರಿಸ್ಥಿತಿಗೆ ಅನುಗುಣವಾಗಿರುವುದಿಲ್ಲ. ಹೊರಗಿನ ವಾತಾವರಣಕ್ಕೂ ಅವರ ಭಾವನೆಗಳು ಮತ್ತು ಭಯಕ್ಕೂ ಸಂಬಂಧವೇ ಇರುವುದಿಲ್ಲ.

ಕೈಕಾಲುಗಳಲ್ಲಿ ಜುಮ್ಮೆನ್ನುವುದು ಅಥವಾ ತಲೆತಿರುಗುವುದು: ಪ್ಯಾನಿಕ್ ಅಟ್ಯಾಕ್ ಶುರುವಾದಾಗ, ನಿಮ್ಮ ಶರೀರದ ತುದಿಗಳಲ್ಲಿ ಕಡಿಮೆ ರಕ್ತ ಇರುವಂತೆ ಭಾಸವಾಗುತ್ತದೆ. ಪರಿಣಾಮ, ಕೆಲವರು ತೋಳು, ಕಾಲು, ಕೈ ಮತ್ತು ಪಾದಗಳಲ್ಲಿ ದುರ್ಬಲತೆಯನ್ನು ಅನುಭವಿಸುತ್ತಾರೆ. ರಕ್ತದ ಹರಿವಿನ ಈ ಇಳಿಕೆಯು ಪಾದಗಳು ಮತ್ತು ಕೈಗಳನ್ನು ಜುಮ್ಮೆನ್ನುವಂತೆ ಮಾಡುತ್ತದೆ. ನೀವು ಹೆಚ್ಚು ಕಾಲ ಒಂದೇ ಸ್ಥಾನದಲ್ಲಿದಾಗ ಆಗುವಂತೆ ಸ್ವಲ್ಪ ಮರಗಟ್ಟುವಿಕೆಯನ್ನು ಅನುಭವಿಸಬಹುದು.

ನಿಮ್ಮ ಹೃದಯ ಬಡಿತವು ಹೆಚ್ಚಾಗುತ್ತದೆ ಅಥವಾ ಅದು ಬಡಿತವನ್ನು ನಿಲ್ಲಿಸಿರುವಂತೆಯೂ ಭಾಸವಾಗುತ್ತದೆ: ನಿಮ್ಮ ಹೃದಯ ಬಡಿತವು ಸಾಮಾನ್ಯಕ್ಕಿಂತ ವೇಗವಾಗಿದ್ದರೆ ಅಥವಾ ಮಿತಿಮೀರಿದ ಹೃದಯ ಬಡಿತ ಪ್ರಾರಂಭವಾಗಿದ್ದರೆ, ಇದು ಪ್ಯಾನಿಕ್ ಅಟ್ಯಾಕ್‌ನ ಸೈಲೆಂಟ್‌ ಸಂಕೇತವಾಗಿರಬಹುದು. ಯಾವುದೇ ರೀತಿಯ ಆತಂಕದಿಂದ ನೀವು ಅನುಭವಿಸುವ ಮೊದಲ ಶಾರೀರಿಕ ಲಕ್ಷಣಗಳಲ್ಲಿ ಇದು ಒಂದು ಆಗಿರಲೂಬಹುದು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ