ಭೂಮಿ ಸಮೀಪ ಹಾದು ಹೋಗಿತ್ತು ಅನ್ಯಜೀವಿ! ಖಗೋಳಶಾಸ್ತ್ರಜ್ಞನ ಪುಸ್ತಕದಲ್ಲಿ ಅಚ್ಚರಿಯ ವಿಚಾರ

ವಾಷಿಂಗ್ಟನ್​: ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ ಎನ್ನುವ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಆದರೆ, ಈವರೆಗೆ ಅದಕ್ಕೆ ಉತ್ತರ ಸಿಕ್ಕಿಲ್ಲ. ಕೆಲ ವಿಜ್ಞಾನಿಗಳು ಬೇರೆ ಗ್ರಹದಲ್ಲಿ ಜೀವಿಗಳು ಇವೆ ಎಂದರೆ, ಇನ್ನೂ ಕೆಲವರು ಇಲ್ಲ ಎನ್ನುತ್ತಿದ್ದಾರೆ. ಈ ಮಧ್ಯೆ ಹಾರ್ವರ್ಡ್​ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಖಗೋಳಶಾಸ್ತ್ರಜ್ಞ ಅವಿ ಲೋಯೆಬ್​ ಬರೆದ Extraterrestrial: The First Sign of Intelligent Life Beyond Earth ಪುಸ್ತಕ ಈ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಅವರು ಪುಸ್ತಕದಲ್ಲಿ ಬರೆದ ಪ್ರಕಾರ 2017ರಲ್ಲಿ […]

ಭೂಮಿ ಸಮೀಪ ಹಾದು ಹೋಗಿತ್ತು ಅನ್ಯಜೀವಿ! ಖಗೋಳಶಾಸ್ತ್ರಜ್ಞನ ಪುಸ್ತಕದಲ್ಲಿ ಅಚ್ಚರಿಯ ವಿಚಾರ
ಸಾಂದರ್ಭಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Jan 04, 2021 | 4:42 PM

ವಾಷಿಂಗ್ಟನ್​: ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ ಎನ್ನುವ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಆದರೆ, ಈವರೆಗೆ ಅದಕ್ಕೆ ಉತ್ತರ ಸಿಕ್ಕಿಲ್ಲ. ಕೆಲ ವಿಜ್ಞಾನಿಗಳು ಬೇರೆ ಗ್ರಹದಲ್ಲಿ ಜೀವಿಗಳು ಇವೆ ಎಂದರೆ, ಇನ್ನೂ ಕೆಲವರು ಇಲ್ಲ ಎನ್ನುತ್ತಿದ್ದಾರೆ. ಈ ಮಧ್ಯೆ ಹಾರ್ವರ್ಡ್​ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.

ಖಗೋಳಶಾಸ್ತ್ರಜ್ಞ ಅವಿ ಲೋಯೆಬ್​ ಬರೆದ Extraterrestrial: The First Sign of Intelligent Life Beyond Earth ಪುಸ್ತಕ ಈ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಅವರು ಪುಸ್ತಕದಲ್ಲಿ ಬರೆದ ಪ್ರಕಾರ 2017ರಲ್ಲಿ ಭೂಮಿ ಸಮೀಪ ಯಾವುದೋ ಒಂದು ವಸ್ತು ಹಾದು ಹೋಗಿತ್ತಂತೆ.

ಅದು 2017ರ ಸಮಯ. ಈ ವೇಳೆ ಸೌರ ಮಂಡಲಕ್ಕೆ ಯಾವುದೋ ವಿಚಿತ್ರ ವಸ್ತು ಬಂದು ಹೋಗಿದೆ. ಇದು ತುಂಬಾನೇ ವೇಗವಾಗಿ ಚಲಿಸಿತ್ತು. ಇದು ಯಾವುದೋ ಬೇರೆ ಗ್ರಹದಿಂದಲೇ ಬಂದಿರಬೇಕು ಎಂದು ಅವಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ನಮ್ಮ ಭೂಮಿ ಬಳಿ ಹಾದು ಹೋದ ಯಾವುದೋ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಒಂದು ಕಲ್ಪನೆ ಮಾಡುವುದಾದರೆ ಅನ್ಯಗ್ರಹ ಜೀವಿಗಳು ಇದನ್ನು ನಿರ್ಮಾಣ ಮಾಡಿರಬಹುದು ಎಂದು ಅವರು ಹೇಳಿದ್ದಾರೆ.

ನಾಸಾ ಭೂಮಿ ಸಮೀಪ ಹಾದು ಹೋದ ವಸ್ತುವಿಗೆ 1I/2017 U1 Oumuamua ಎಂದು ಹೆಸರಿಟ್ಟಿತ್ತು. ಸಿಗಾರ್​ ಆಕೃತಿ ಮಾದರಿಯಲ್ಲಿ ಈ ವಸ್ತು ಇತ್ತು. ನಮ್ಮ ಸೌರ ವ್ಯವಸ್ಥೆಯನ್ನು ಅವರು ಅಧ್ಯಯನ ಮಾಡಲು ಬಂದಿದ್ದ ಶಂಕೆ ಇದೆ ಎಂದು ಊಹಿಸಲಾಗಿದೆ.

 

ಏಲಿಯನ್​ಗಳಿಂದ ಮನುಷ್ಯರ ಫ್ರೆಂಡ್​ಶಿಪ್: ಇದು ಇಸ್ರೇಲಿ ಬಾಹ್ಯಾಕಾಶ ವಿಜ್ಞಾನಿಯ ಖಚಿತ ನುಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us