ಟೇಕ್​ಆಫ್​ಗೂ ಮುನ್ನ ರನ್​ವೇನಲ್ಲೇ ಅಮೆರಿಕನ್ ಏರ್​ಲೈನ್ಸ್​ ವಿಮಾನದ ಟೈರ್​ ಸ್ಫೋಟ, ವಿಡಿಯೋ ಇಲ್ಲಿದೆ

ಫ್ಲೋರಿಡಾದ ಟ್ಯಾಂಪಾ ವಿಮಾನ ನಿಲ್ದಾಣದಿಂದ ಫಿಯೋನಿಕ್ಸ್​ಗೆ ಹೊರಟಿದ್ದ ಅಮೆರಿಕನ್ ಏರ್​ಲೈನ್ಸ್​ ವಿಮಾನದ ಟೈರ್​ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ.

ಟೇಕ್​ಆಫ್​ಗೂ ಮುನ್ನ ರನ್​ವೇನಲ್ಲೇ ಅಮೆರಿಕನ್ ಏರ್​ಲೈನ್ಸ್​ ವಿಮಾನದ ಟೈರ್​ ಸ್ಫೋಟ, ವಿಡಿಯೋ ಇಲ್ಲಿದೆ
ಅಮೆರಿಕನ್ ಏರ್​ಲೈನ್ಸ್​

Updated on: Jul 11, 2024 | 12:59 PM

ಅಮೆರಿಕನ್ ಏರ್​ಲೈನ್ಸ್ ವಿಮಾನ ಟೇಕ್​ ಆಫ್​ ಆಗುವುದಕ್ಕೂ ಮುನ್ನ ರನ್​ವೇನಲ್ಲೇ ಟೈರ್​ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ಟ್ಯಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಫ್ಲೋರಿಡಾ ವಿಮಾನ ನಿಲ್ದಾಣದಿಂದ ಅಮೆರಿಕದ ಫಿಯೋನಿಕ್ಸ್​ಗೆ ಈ ವಿಮಾನ ಹೋಗುತ್ತಿತ್ತು ಎನ್ನಲಾಗಿದೆ. ಬೆಳಗ್ಗೆ 8 ಗಂಟೆಯ ವೇಳೆ ಈ ಅವಘಡ ಸಂಭವಿಸಿದೆ.

ಇನ್ನೇನು ವಿಮಾನ ಟೇಕ್​ಆಫ್​ ಆಗಬೇಕು ಎನ್ನುವಾಗ ಜೋರಾಗಿ ರನ್​ವೇನಲ್ಲಿ ಓಡುತ್ತಾ ಹೊರಟಿದ್ದ ವಿಮಾನದ ಬಲಭಾಗದ ಟೈರ್​ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತ್ತು. ಹೇಗೋ ಮಾಡಿ ವಿಮಾನವನ್ನು ರನ್​ವೇನಲ್ಲೇ ನಿಲ್ಲಿಸಲಾಯಿತು. ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು ಯಾರಿಗೂ ಯಾವುದೇ ಅಪಾಯವಾಗಿಲ್ಲ.

ವಿಮಾನವನ್ನು ಟರ್ಮಿನಲ್​ಗೆ ಕಳುಹಿಸಲಾಗಿದೆ ಎಂದು ಅಮೆರಿಕನ್ ಏರ್​ಲೈನ್ಸ್ ವಕ್ತಾರ ಆಲ್ಫ್ರೆಡೊ ಗಾರ್ಡುನೊ ಹೇಳಿದ್ದಾರೆ.

ಪ್ರಯಾಣಿಕರನ್ನು ಬೇರೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು, ಘಟನೆಯಿಂದಾಗಿ ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಇತರೆ ವಿಮಾನ ಕಾರ್ಯಚರಣೆಗಳಿಗೆ ತೊಂದರೆಯಾಗಿಲ್ಲ ಎಂದು ಏರ್​ಲೈನ್ಸ್​ ಹೇಳಿದೆ.

ಮತ್ತಷ್ಟು ಓದಿ: ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ; 12 ಗಂಟೆಗಳಿಂದ ವಿಮಾನದಲ್ಲಿ ಲಾಕ್ ಆಗಿರುವ ಪ್ರಯಾಣಿಕರು

ಹೇಳಿಕೆಯಲ್ಲಿ, ಅಮೆರಿಕನ್ ಏರ್​ಲೈನ್ಸ್​ ಫ್ಲೈಟ್​ 590 ಟೇಕ್ ಆಫ್ ಮಾಡುವ ಮೊದಲು ರನ್​ವೇನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು, ಅನನುಕೂಲತೆಗಾಗಿ ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದ್ದಾರೆ. ವಿಮಾನವು ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us