ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ; 12 ಗಂಟೆಗಳಿಂದ ವಿಮಾನದಲ್ಲಿ ಲಾಕ್ ಆಗಿರುವ ಪ್ರಯಾಣಿಕರು
ದೆಹಲಿಯಿಂದ ಬೆಂಗಳೂರಿಗೆ ನಿನ್ನೆ ಸಂಜೆ ಹಾರಬೇಕಿದ್ದ ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಇದುವರೆಗೂ ವಿಮಾನ ಟೇಕಾಫ್ ಆಗಿಲ್ಲ. ಆದರೆ ಸ್ಪೈಸ್ಜೆಟ್ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕರನ್ನ ಫ್ಲೈಟ್ ಹತ್ತಿಸಿ ಕೆಳಗಡೆ ಇಳಿಯದಂತೆ ಏರೋಬ್ರಿಡ್ಜ್ ಲಾಕ್ ಮಾಡಿದ್ದಾರೆ. ಇದರಿಂದ ಪ್ರಯಾಣಿಕರು 12 ಗಂಟೆಗಳಿಂದ ಪರದಾಡುವಂತಾಗಿದೆ.
ದೇವನಹಳ್ಳಿ, ಜುಲೈ.06: ದೆಹಲಿಯಿಂದ ಬೆಂಗಳೂರಿಗೆ ಹಾರಬೇಕಿದ್ದ ಸ್ಪೈಸ್ಜೆಟ್ ಏರ್ಲೈನ್ಸ್ (Spice Jet Airlines) ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಯಾಣಿಕರು ಹತ್ತು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿ ಪರದಾಡುವಂತಹ ಪರಿಸ್ಥಿತಿ ನಡೆದಿದೆ. ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೋಗುವ SG 8151ನ ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನವನ್ನು ಏರಿದ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗಳಿಗೂ ಅಧಿಕ ಕಾಲ ವಿಮಾನದೊಳಗೆ ಲಾಕ್ ಆಗಿ ಪರದಾಡಿದ್ದಾರೆ. ತಾಂತ್ರಿಕ ದೋಷ ಎಂದು ನಿನ್ನೆ ಸಂಜೆಯಿಂದ ಬೆಳಗ್ಗೆ ವರೆಗೂ ದೆಹಲಿ ಏರ್ಪೋಟ್ನಲ್ಲೆ ಫ್ಲೈಟ್ ನಿಲ್ಲಿಸಲಾಗಿದ್ದು ಪ್ರಯಾಣಿಕರನ್ನು ಹೊರಗೆ ಬಿಡದೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಅಲ್ಲದೆ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆಯೂ ಮಾಡದೆ ಫ್ಲೈಟ್ನಲ್ಲೇ ಕೂರಿಸಿದ್ದಾರೆ. ಆಚೆಯೂ ಹೋಗಲಾಗದೆ ಒಳಗೂ ಇರಲಾಗದೆ ಪರದಾಡುತ್ತಿರುವ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನ ನಿನ್ನೆ ರಾತ್ರಿ 7.40ಕ್ಕೆ ದೆಹಲಿಯ ಟರ್ಮಿನಲ್ 3 ಯಿಂದ ಟೇಕಾಫ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಟೇಕಾಫ್ ಆಗಿಲ್ಲ. ಬೆಳಗಿನ ಜಾವ 7 ಗಂಟೆಯಾದರೂ ವಿಮಾನ ದೆಹಲಿಯಿಂದ ಹೊರಡಿಲ್ಲ. ಆದಷ್ಟು ಬೇಗ ಟೇಕಾಫ್ ಮಾಡ್ತೀವಿ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಏಕೆ? ಸಿದ್ದರಾಮಯ್ಯ ರಾಜಕೀಯ ತಂತ್ರವೇನು?
ವಿಮಾನ ಹೈಜಾಕ್ ಮಾಡಿದ್ದೀರಾ ಅಂದು ಗಲಾಟೆ
ಇನ್ನು ಯಾವುದೇ ಮಾಹಿತಿ ಸಿಗದೆ ವಿಮಾನದಲ್ಲಿ ಕೂತು ಬೇಸತ್ತ ಪ್ರಯಾಣಿಕರು ವಿಮಾನದಲ್ಲಿ ಗಲಾಟೆ ಮಾಡಿದ್ದಾರೆ. ವಿಮಾನ ಹೈಜಾಕ್ ಮಾಡಿದ್ದೀರಾ ಅಂತ ಪ್ರಶ್ನೆಮಾಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರಿಂದ ಗದ್ದಲ ಗಲಾಟೆಯಾಗಿದೆ. ಇನ್ನು ಏಳೆಂಟು ಬಾರಿ ಬೋರ್ಡಿಂಗ್ ಪಾಸ್ ಬದಲಾಯಿಸಿರುವ ಆರೋಪ ಕೇಳಿ ಬಂದಿದೆ. ಹೊರಗಡೆಯೂ ಬಿಡುತ್ತಿಲ್ಲ, ಏನಾಗ್ತಿದೆ ಅಂತನೂ ಹೇಳುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಚಿಕ್ಕ ಮಕ್ಕಳಿದ್ದಾರೆ, ವೃದ್ಧರಿದ್ದಾರೆ ನಾವು ನಮ್ಮ ಊರಿಗೆ ತೆರಳಬೇಕಿತ್ತು ಅಂತ ಗಲಾಟೆ ಮಾಡಿದ್ದಾರೆ.
ಪ್ರಯಾಣಿಕರ ಬೋರ್ಡಿಂಗ್ ಪಾಸ್ಗಳನ್ನ ಬದಲಾವಣೆ ಮಾಡಿ ಫ್ಲೈಟ್ನಲ್ಲೇ ಕೂರಿಸಲಾಗಿದೆ. ಸೂಕ್ತ ಮಾಹಿತಿ ನೀಡದೆ ಫ್ಲೈಟ್ನಲ್ಲೇ ಕೂರಿಸಿರುವುದಕ್ಕೆ ಏರ್ಲೈನ್ಸ್ ವಿರುದ್ದ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಸಾವಿರಾರು ರೂಪಾಯಿ ಹಣ ನೀಡಿ ಟಿಕೆಟ್ ಖರೀದಿಸಿದ್ರು ಸಮರ್ಪಕ ಸೇವೆ ನೀಡಿಲ್ಲ ಅಂತ ಗರಂ ಆಗಿದ್ದಾರೆ. ದೆಹಲಿ ಜೊತೆಗೆ ವಿದೇಶದಿಂದ ಬಂದಿರುವ ಪ್ರಯಾಣಿಕರು, ಮಹಿಳೆಯರು, ಪುರುಷರು, ಹಿರಿಯರು ಸೇರಿದಂತೆ 60 ಜನ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪ್ರಯಾಣಿಕರನ್ನ ಫ್ಲೈಟ್ ಹತ್ತಿಸಿ ಕೆಳಗಡೆ ಇಳಿಯದಂತೆ ಏರೋಬ್ರಿಡ್ಜ್ ಲಾಕ್ ಮಾಡಲಾಗಿದೆ. ಹೀಗಾಗಿ ಏರೋಬ್ರಿಡ್ಜ್ ನಲ್ಲೆ ಕೂತು, ಮಲಗಿ ಪ್ರಯಾಣಿಕರು ಕಷ್ಟಪಡುತ್ತಿದ್ದಾರೆ. ಸ್ಪೈಸ್ಜೆಟ್ ಏರ್ಲೈನ್ಸ್ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ