ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಏಕೆ? ಸಿದ್ದರಾಮಯ್ಯ ರಾಜಕೀಯ ತಂತ್ರವೇನು?
ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕೂಗಿನ ಬೆನ್ನಲ್ಲೆ ಇತ್ತ ಅಹಿಂದ ಮತ್ತೆ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಮುಂದಾಗಿದೆ. ಸಿದ್ದರಾಮಯ್ಯ ಹುಟ್ಟು ಹಬ್ಬದ ಹಿನ್ನಲೆ ಹುಬ್ಬಳ್ಳಿಯಲ್ಲಿ ಆಗಸ್ಟ್ನಲ್ಲಿ ಅಹಿಂದ ಶಕ್ತಿ ಪ್ರದರ್ಶನಕ್ಕೆ ಅಹಿಂದ ಸಂಘಟಕರು ಮುಂದಾಗಿದ್ದಾರೆ. ಅದು ಕಳೆದ ಬಾರಿ ಸಿದ್ದರಾಮೋತ್ಸವ ಸಕ್ಸಸ್ ಕಂಡಿತ್ತು. ಇದೀಗ ಮತ್ತೆ ಅಹಿಂದ ಸಮಾವೇಶ ಮಾಡಲು ಸಂಘಟಕರು ಮುಂದಾಗಿದ್ದಾರೆ.
ಹುಬ್ಬಳ್ಳಿ, ಜುಲೈ 05: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿ ನಡಿತೀದೆ. ಸಿದ್ದರಾಮಯ್ಯ ಬದಲಾವಣೆಗೆ ಚರ್ಚೆಗಳು ಆರಂಭವಾಗಿವೆ. ಒಕ್ಕಲಿಗೆ ಸ್ವಾಮೀಜಿ ಹೇಳಿಕೆಯ ನಂತರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆರಂಭವಾಗಿದೆ. ಸಿದ್ದರಾಮಯ್ಯ (Siddaramaiah) ವಿರುದ್ದ ಮುಡಾ ಹಗರಣವೂ ದೊಡ್ಡ ಮಟ್ಟದ ಸದ್ದು ಮಾಡ್ತಿದೆ. ರಾಜ್ಯ ರಾಜಕೀಯದಲ್ಲಿ ಆಗ್ತಿರೋ ಬೆಳವಣಿಗೆ ಬಗ್ಗೆ ನಾನಾ ರೀತಿಯಲ್ಲಿ ವಾಖ್ಯಾನಗಳು ಹುಟ್ಟಿಕೊಂಡಿವೆ. ಕಾಂಗ್ರೆಸ್ (Congress) ಮನೆಯೊಳಗೆ ಎಲ್ಲವೂ ಸರಿ ಇಲ್ಲ ಅನ್ನೋದಂತೂ ಸ್ಪಷ್ಟವಾಗಿದೆ. ಇನ್ನು ಬಿಜೆಪಿ ಇದನ್ನೆ ಅಸ್ತ್ರ ಮಾಡಿಕೊಂಡು ಹೋರಾಟ ಶುರುಮಾಡಿದೆ. ಕಾರ್ಟೂನ್ ಮೂಲಕ ಸಿದ್ದರಾಮಯ್ಯ ಕಾಲೆಳೆಯೋ ಕೆಲಸವನ್ನ ಬಿಜೆಪಿ ನಾಯಕರು ಮಾಡುತ್ತಿದ್ದರೆ, ಇದೆಲ್ಲ ಬೆಳವಣಿಗೆ ಮದ್ಯೆ ಅಹಿಂದ ಅಸ್ತ್ರದ ಪ್ರಯೋಗಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಆಗಸ್ಟ್ನಲ್ಲಿ ಅಹಿಂದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗ್ತಿದೆ. ಅದು ಸಿದ್ದರಾಮಯ್ಯ ಅಹಿಂದ ರತ್ನ ಪ್ರಶಸ್ತಿ ಮೂಲಕ ಅನ್ನೋದು ಬಹಳ ಪ್ರಮುಖ. ಹಾಗಾದ್ರೆ ಅಹಿಂದ ಸಮಾವೇಶ ನಡೆಯೋದು ಎಲ್ಲಿ ಅಂತೀರಾ ಈ ಸ್ಟೋರಿ ಓದಿ.
ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಬದಲಾವಣೆ ಆಗ್ತಾರೆ ಅನ್ನೋ ಸುದ್ದಿ ಮೊದಲಿನಿಂದಲೂ ಇದ್ರು, ಒಕ್ಕಲಿಗ ಸ್ವಾಮೀಜಿ ಮಾತಾಡಿದ ಬಳಿ ಮುಖ್ಯಮಂತ್ರಿ ಖರ್ಚಿ ಫೈಟ್ ಜೋರಾಗಿದೆ. ಕಾಂಗ್ರೆಸ್ನಲ್ಲಿಯೇ ಕೆಲವರು ನೇರಾ ನೇರವಾಗಿ ಮಾತಾಡಬೇಡಿ ಎಂದು ವಾರ್ನ್ ಮಾಡಿದ್ರು, ಸಚಿವರು ಡೋಂಟ್ ಕೇರ್ ಅಂತೀದಾರೆ. ಹೆಚ್ಚುವರಿ ಡಿಸಿಎಂಗೂ ಕೂಡಾ ಕೆಲವರು ಪಟ್ಟು ಹಿಡಿದಿದ್ದು ಹೊಸದೇನಲ್ಲ. ರಾಜ್ಯ ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಬದಲಾವಣೆಗೆ ಸದ್ದು ಜೋರಾಗಿದೆ.
ಇದೇ ವಿಷಯ ಇಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ಕಾಲೆಳೆಯೋ ಕೆಲಸ ಮಾಡ್ತೀದಾರೆ. ಏಕಾಏಕಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಜೋರಾಗಿರೋದು ಸ್ವತಃ ಸಿದ್ದರಾಮಯ್ಯಗೂ ಇರುಸು ಮುರುಸು ಉಂಟು ಮಾಡಿದೆ. ಇದರ ಮದ್ಯೆ ಮುಡಾ ಹಗರಣವೂ ಸಿದ್ದರಾಮಯ್ಯಗೆ ಅಲ್ಪ ಮಟ್ಟದ ಸಂಕಷ್ಟ ತಂದಿಟ್ಟಿದೆ. ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗಿನ ಬೆನ್ನಲ್ಲೆ ಇತ್ತ ಅಹಿಂದ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಹುಬ್ಬಳ್ಳಿಯಲ್ಲಿ ಆಗಸ್ಟ್ನಲ್ಲಿ ಅಹಿಂದ ಶಕ್ತಿ ಪ್ರದರ್ಶನಕ್ಕೆ ಅಹಿಂದ ಸಂಘಟಕರು ಮುಂದಾಗಿದ್ದಾರೆ. ಅದು ಸಿದ್ದರಾಮಯ್ಯ ಹುಟ್ಟು ಹಬ್ಬದ ಹಿನ್ನಲೆ. ಕಳೆದ ಬಾರಿ ಸಿದ್ದರಾಮೋತ್ಸವ ಸಕ್ಸಸ್ ಕಂಡ ಹಿನ್ನಲೆ ಇದೀಗಮತ್ತೆ ಅಹಿಂದ ಸಮಾವೇಶ ಮಾಡಲು ಸಂಘಟಕರು ಮುಂದಾಗಿದ್ದಾರೆ.
ಇದನ್ನೂ ಓದಿ: ಮುಡಾ ಸೈಟ್ ಬದಲಿಗೆ 62 ಕೋಟಿ ರೂ. ಪರಿಹಾರ ಕೇಳಿದ ಸಿಎಂಗೆ ತಿವಿದ ಲೇಹರ್ ಸಿಂಗ್
ಅದು ಸಿದ್ದರಾಮಯ್ಯ ಅಹಿಂದ ರತ್ನ ಪ್ರಶಸ್ತಿ ಕೊಡೋ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕಳೆದ ವಾರ ಇದೇ ವಿಚಾರಕ್ಕೆ ರಾಜ್ಯದ ಅಹಿಂದ ಸಂಘಟನೆ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಂಡಿತ್ತು. ಸಭೆಯಲ್ಲಿ ಕಾರ್ಯಕ್ರಮ ಎಲ್ಲಿ ಮಾಡಬೇಕು ಅನ್ನೋ ಚರ್ಚೆ ನಡೀತು. ಕೆಲವರು ಬಳ್ಳಾರಿ, ಕೋಲಾರ, ಧಾರವಾಡ ಹೀಗೆ ನಾನಾ ಜಿಲ್ಲೆಯ ಹೆಸರು ಹೇಳಿದ್ರು. ಅಂತಿಮವಾಗಿ ಇದೀಗ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕಾರ್ಯಕ್ರಮ ಮಾಡೋದು ಫಿಕ್ಸ್ ಆಗಿದೆ. ಬರುವ ರವಿವಾರ ಅಹಿಂದ ಸಂಘಟಕರು ಸಿದ್ದರಾಮಯ್ಯ ಬಳಿ ನಿಯೋಗ ಹೊರಡಲಿದ್ದಾರೆ. ಬರುವ ಆಗಸ್ಟ್ನಲ್ಲಿ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಮಾಡಲು ಸಿದ್ದರಾಮಯ್ಯ ಬಳಿ ತೆರಳಿದ್ದಾರೆ. ಸಿದ್ದರಾಮಯ್ಯ ಹುಟ್ಟು ಹಬ್ಬದ ಹಿನ್ನಲೆ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅಹಿಂದ ರತ್ನ ಪ್ರಶಸ್ತಿ ಕೊಡೋದಕ್ಕೆ ಸಂಘಟಕರು ಮುಂದಾಗಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 50 ಜನರಿಗೆ ಪ್ರಶಸ್ತಿ ಕೊಡೋದಕ್ಕೆ ತೀರ್ಮಾನ ಮಾಡಲಾಗಿದೆ.
ಕಳೆದ ವಾರ ನಡೆದ ಪೂರ್ವ ಭಾವಿ ಸಭೆಯಲ್ಲಿ ಕೆಲವರು ಬೇರೆ ಬೇರೆ ಜಿಲ್ಲೆಯ ಹೆಸರು ಹೇಳಿದ್ರು. ಕೊನೆಗೆ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡೋದು ಫಿಕ್ಸ್ ಆಗಿದೆ. ಸಿದ್ದರಾಮಯ್ಯ ಹುಟ್ಟು ಹಬ್ಬದ ಹಿನ್ನಲೆ ವಿಶೇಷವಾಗಿ ಅಚರಣೆ ಮಾಡಬೇಕು ಅನ್ನೋ ಕಾರಣಕ್ಕೆ ಈ ಬಾರಿ ಸಿದ್ದರಾಮಯ್ಯ ಅಹಿಂದ ರತ್ನ ಪ್ರಶಸ್ತಿ ಕೊಡೋದಕ್ಕೆ ಸಂಘಟಕರು ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ದಿನಾಂಕ ನಿಗದಿ ಮಾಡಿದ ಬಳಿಕ ಸಮಾವೇಶದ ದಿನಾಂಕ ನಿಗದಿಯಾಗಲಿದೆ. ಹೀಗಾಗಿ ರವಿವಾರ ಅಹಿಂದ ಸಂಘಟನೆಯ ನಿಯೋಗ ಸಿದ್ದರಾಮಯ್ಯ ಬಳಿ ತೆರಳಿ ಮಾತುಕತೆ ಮಾಡಲಿದೆ.
ಸಿದ್ದರಾಮೋತ್ಸವರ ಕಾರ್ಯಕ್ರಮದಂತೆ ಈ ಬಾರಿಯೂ ಹುಟ್ಟು ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಮೇಲ್ನೋಟಕ್ಕೆ ಇದು ಸಿದ್ದರಾಮಯ್ಯ ಹುಟ್ಟು ಹಬ್ಬದ ಕಾರ್ಯಕ್ರಮ ಅನಸಿದ್ರು, ಅಹಿಂದ ಶಕ್ತಿ ಪ್ರದರ್ಶನಕ್ಕೆ ಮಾಡಿಕೊಳ್ತಿರೋ ತಯಾರಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿರೋ ಹಿನ್ನಲೆ ಅಹಿಂದ ಸಂಘಟನೆ ಹಮ್ಮಿಕೊಳ್ತಿರೋ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ಸಿದ್ದರಾಮಯ್ಯರ ಹಿಂದೆ ಅಹಿಂದ ಸಂಘಟನೆ ಇದೆ ಅನ್ನೋದನ್ನ ತೋರ್ಸೋದು ಸಮಾವೇಶದ ಉದ್ದೇಶ.
ಸಮಾವೇಶ ಹುಬ್ಬಳ್ಳಿಯಲ್ಲಿ ಯಾಕೆ?
ಇದು ಬಹಳ ಮುಖ್ಯವಾಗಿರೋ ವಿಚಾರ. ಈ ಬಾರಿ ಹಲವು ಜಿಲ್ಲೆ ಹುಟ್ಟು ಹಬ್ಬ ಮಾಡಲು ಮುಂದಾದ್ರು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಲು ತೀರ್ಮಾನ ಮಾಡಿದ್ದು ಹಲವು ಕೂತುಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅಹಿಂದ ರತ್ನ ಪ್ರಶಸ್ತಿಯನ್ನ ಮುಖ್ಯಮಂತ್ರಿ ಕಡೆಯಿಂದ ಸಾಧಕರಿಗೆ ಕೊಡಸಬೇಕು ಅನ್ನೋದು ಆಯೋಜಕರ ಅಭಿಪ್ರಾಯ. ಆದರೆ ಅದಕ್ಕೆ ಹುಬ್ಬಳ್ಳಿ ಯಾಕೆ ಅನ್ನೋದು ವೆರಿ ಇಂಟ್ರಸ್ಟಿಂಗ್.
ಇದನ್ನೂ ಓದಿ: ಸಿದ್ದರಾಮಯ್ಯನವರನ್ನ ಬದಲಾವಣೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ: ಅಹಿಂದ ಎಚ್ಚರಿಕೆ
ಇದೇ ಸಿದ್ದರಾಮಯ್ಯ ಅಹಿಂದ ಹುಟ್ಟು ಹಾಕಿದ್ದು ಇದೇ ಹುಬ್ಬಳ್ಳಿಯಿಂದ 2005 ರಲ್ಲಿ ಅಹಿಂದ ಸಂಘಟನೆ ಮೂಲಕ ಸಿದ್ದು ಶಕ್ತಿ ಪ್ರದರ್ಶನ ಮಾಡಿದ್ದರು. ದೇವೆಗೌಡರು ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಹೇಳಿದ್ರು. ಕೊನೆಗೆ ಜೆಡಿಎಸ್ನಿಂದ ಸಿದ್ದರಾಮಯ್ಯ ಉಚ್ಛಾಟನೆ ಆಗ್ತಾರೆ. ಆವಾಗ ಸಿದ್ದರಾಮಯ್ಯ ಹುಬ್ಬಳ್ಳಿಯಿಂದ ಅಹಿಂದ ಶಕ್ತಿ ಪ್ರದರ್ಶನ ಮಾಡಿದ್ದು ಇತಿಹಾಸ. ಇದೀಗ ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಎದ್ದಿರೋ ಹಿನ್ನಲೆ ಸಿದ್ದರಾಮಯ್ಯ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಒಳಗೊಳಗೆ ಸಿದ್ದು ಹತ್ತಿಕ್ಕುಲು ಯತ್ನ ನಡೆಯುತ್ತಿದೆ, ಅಂತವರಿಗೆ ಟಾಂಗ್ ಕೊಡಲು ಸಿದ್ದರಾಮಯ್ಯ ಮತ್ತೆ ಅಹಿಂದ ಶಕ್ತಿ ಪ್ರದರ್ಶನ ಮಾಡೋಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಬದಲಾವಣೆ ಕೂಗಿನ ಬೆನ್ನಲ್ಲೆ ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. 2005 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶ ರಾಜಕೀಯ ಇತಿಹಾಸ ಸೃಷ್ಟಿ ಮಾಡಿತ್ತು. ಸಿದ್ದರಾಮಯ್ಯ ಏನು ಅನ್ನೋ ಶಕ್ತಿ ಪ್ರದರ್ಶನವಾಗಿತ್ತು. ಅಹಿಂದ ಸಂಘಟನೆಯನ್ನ ಒಂದುಗೂಡಿಸಿ ಎರಡು ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಇದೀಗ ಮತ್ತೊಮ್ಮೆ ಅಹಿಂದ ದಾಳ ಉರುಳಿಸಲು ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.