ಮುಡಾ ಸೈಟ್ ಬದಲಿಗೆ 62 ಕೋಟಿ ರೂ. ಪರಿಹಾರ ಕೇಳಿದ ಸಿಎಂಗೆ ತಿವಿದ ಲೇಹರ್ ಸಿಂಗ್

ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರ ಸಿದ್ದರಾಮಯ್ಯನವರ ಪತ್ನಿ ಹೆಸರು ಹೇಳಿಬಂದಿದೆ. ಇನ್ನು ಈ ಬಗ್ಗೆ ಸಿದ್ದರಾಮಯ್ಯ ಅವರು ಸೈಟ್​ಗಳನ್ನು ವಾಪಸ್ ಪಡೆದುಕೊಂಡು ತಮ್ಮ ಜಮೀನು ತೆಗೆದುಕೊಂಡಿರುವುದಕ್ಕೆ ಪರಿಹಾರವಾಗಿ 62 ಕೋಟಿ ರೂ. ನೀಡುವಂತೆ ಹೇಳಿದ್ದಾರೆ. ಇದಕ್ಕೆ ಇದೀಗ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಡಾ ಸೈಟ್ ಬದಲಿಗೆ 62 ಕೋಟಿ ರೂ. ಪರಿಹಾರ ಕೇಳಿದ ಸಿಎಂಗೆ ತಿವಿದ ಲೇಹರ್ ಸಿಂಗ್
ಲೇಹರ್ ಸಿಂಗ್, ಸಿದ್ದರಾಮಯ್ಯ
Follow us
|

Updated on: Jul 05, 2024 | 9:42 PM

ಬೆಂಗಳೂರು, (ಜುಲೈ 05): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಅವರ ನೇತೃತ್ವದ ಸರ್ಕಾರದಿಂದ 62 ಕೋಟಿ ರೂ. ಮೊತ್ತದ ಭಾರಿ ಪರಿಹಾರವನ್ನು ಅವರೇ ಕೇಳಿರುವುದು ಬೇಸರದ ಸಂಗತಿ ಮಾತ್ರವಲ್ಲ, ಲಜ್ಜೆಗೆಟ್ಟ ವರ್ತನೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್ ಟೀಕಿಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ನೇತೃತ್ವದ ಸರ್ಕಾರದಿಂದಲೇ 62 ಕೋಟಿ ರೂ.ಗಳ ಭಾರೀ ಪರಿಹಾರವನ್ನು ಏಕೆ ಕೇಳುತ್ತಿದ್ದಾರೆ? ತಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರು ಮುಡಾ ಪ್ರಕರಣವನ್ನು ಸಿಬಿಐ ಅಥವಾ ಯಾವುದಾದರೂ ಸ್ವತಂತ್ರ ಸಂಸ್ಥೆಗೆ ಒಪ್ಪಿಸಲು ಹೆದರಬಾರದು. ಹಾಗೆಯೇ ಜಾಣತನದಿಂದ ತಮಗೆ ಬೇಕಿರುವ ನಿವೃತ್ತ ನ್ಯಾಯಾಧೀಶರನ್ನು ಕರೆತಂದು ತನಿಖೆ ನಡೆಸಲು ಮುಖ್ಯಮಂತ್ರಿಗಳು ಮುಂದಾಗಬಾರದು ಎಂದಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಆರೋಪದ ಕುರಿತಂತೆ ಮಾಧ್ಯಮ ಹೇಳಿಕೆ ನೀಡಿರುವ ಲೇಹರ್ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಪಾತ್ರವಿದೆ ಎನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಕುರಿತಂತೆ ಪತ್ರಿಕೆಗಳಲ್ಲಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನಿಸಿದ್ದೇನೆ. ಇಡೀ ದೇಶದಲ್ಲಿ ಬಹುಶಃ ಹಿಂದಿನ ಅಥವಾ ಇಂದಿನ ಯಾವ ಮುಖ್ಯಮಂತ್ರಿಯೂ ತಮ್ಮ ನೇತೃತ್ವದ ಸರ್ಕಾರದ ವಿರುದ್ಧವೇ ಹೀಗೆ ಬ್ಲ್ಯಾಕ್‌ಮೇಲ್ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಅವರ ನೇತೃತ್ವದ ಸರ್ಕಾರದಿಂದ 62 ಕೋಟಿ ರೂ. ಮೊತ್ತದ ಭಾರಿ ಪರಿಹಾರವನ್ನು ಅವರೇ ಕೇಳಿರುವುದು ಬೇಸರದ ಸಂಗತಿ ಮಾತ್ರವಲ್ಲ, ಲಜ್ಜೆಗೆಟ್ಟ ವರ್ತನೆಯೂ ಹೌದು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಮುಡಾ ಫ್ಯಾಕ್ಟರಿ ಶುರುವಾಯ್ತು: ಡಿಕೆಶಿ ಬುಡಕ್ಕೆ ತಂದಿಟ್ಟ ಕುಮಾರಸ್ವಾಮಿ

ತಾವು ಸದಾ ಪಾರದರ್ಶಕವಾಗಿದ್ದು, ತಾವೊಬ್ಬ ಲೋಹಿಯಾ-ಸಮಾಜವಾದಿ ಹೇಳಿಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳದ ಮುಖ್ಯಮಂತ್ರಿಗಳ ಮನಸ್ಥಿತಿಯನ್ನು ಇದು ಬಯಲು ಮಾಡಿದೆ. ಮುಡಾ ಮಾರುಕಟ್ಟೆ ಮೌಲ್ಯದ ಪರಿಹಾರ ನೀಡಿದರೆ ಅನುಮಾನಾಸ್ಪದವಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ಮರಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರುವುದು ನಂಬಲಾಗದ ಮತ್ತು ಆಘಾತಕಾರಿ ಸಂಗತಿ. ಹಾಗೆಯೇ, ಮುಖ್ಯಮಂತ್ರಿಗಳು ಏಕೆ ಧಾವಂತದಲ್ಲಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಹೆಚ್ಚಿನ ಪರಿಹಾರವನ್ನು ಕೇಳುವ ಮೊದಲು ನಿವೇಶನಗಳ ಹಂಚಿಕೆ ಕಾನೂನುಬದ್ಧವಾಗಿ ನಡೆದಿದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕಲ್ಲವೇ? ಸರ್ಕಾರ ಯಾವುದೇ ಪಕ್ಷದ್ದಿರಲಿ, ಒಬ್ಬ ಶ್ರೀಸಾಮಾನ್ಯನಿಗೆ ಹೋಲಿಸಿದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ ಯಾವ ರೀತಿಯ ಅನುಕೂಲ ಕಲ್ಪಿಸಲಾಗಿದೆ ಎನ್ನುವುದನ್ನು ಮೊದಲು ತನಿಖೆ ಮಾಡಬೇಕಲ್ಲವೇ? ಸಿದ್ದರಾಮಯ್ಯನವರು ಅಧಿಕಾರದಲ್ಲಿರಲಿ ಅಥವಾ ಪ್ರತಿಪಕ್ಷದಲ್ಲಿರಲಿ, ಅನೇಕ ದಶಕಗಳಿಂದ ರಾಜ್ಯದಲ್ಲಿ ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿರುವುದಂತೂ ನಿಜ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತಮ್ಮ ಆಸ್ತಿಯನ್ನು ಸಾರ್ವಜನಿಕ ಒಳಿತಿಗಾಗಿ ಬಿಟ್ಟುಕೊಡುತ್ತಾರೆ. ಆದರೆ ಇಲ್ಲಿ ಒಬ್ಬ ಮುಖ್ಯಮಂತ್ರಿಗಳು ಅತ್ಯಧಿಕ ಪರಿಹಾರ ಪಡೆದುಕೊಂಡದ್ದು ಮಾತ್ರವಲ್ಲ, ಇನ್ನೂ ಹೆಚ್ಚು ಕಬಳಿಸಲು ಆಸೆ ಪಡುತ್ತಿದ್ದಾರೆ. ನೆಹರೂ-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಸಿಎಂ ಸಿದ್ದರಾಮಯ್ಯನವರ, ಆ ಹಿರಿಯರ ʼತ್ಯಾಗʼದ ಮಾದರಿಯನ್ನೂ ಅನುಸರಿಸಬೇಕು. ಆ ಕುಟುಂಬ ಅನೇಕ ವರ್ಷಗಳ ಹಿಂದೆ ಪ್ರಯಾಗರಾಜ್‌ನಲ್ಲಿರುವ ಪೂರ್ವಜರ ಮನೆಯನ್ನು ಬಿಟ್ಟುಕೊಟ್ಟಿತ್ತು. ಆದರೆ ನಂತರ ಇಡೀ ದೇಶವನ್ನು ಆಕ್ರಮಿಸಿಕೊಂಡರು ಎನ್ನುವುದು ಬೇರೆಯೇ ಕಥೆ. ಆದರೂ ತಾಂತ್ರಿಕವಾಗಿಯಾದರೂ ಅವರು ಏನೋ ಒಂದನ್ನು ತ್ಯಾಗ ಮಾಡಿದರಲ್ಲ, ಅದರಲ್ಲಿಯೂ ಒಂದು ಪಾಠ ಕಲಿಯಲಿಕ್ಕಿದೆ ಎಂದಿದ್ದಾರೆ.

ತಾವು ಯಾವುದಕ್ಕೂ ಹೆದರುವುದಿಲ್ಲ ಮತ್ತು ಹಿರಿಯ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಸಿಬಿಐ ಅಥವಾ ಯಾವುದಾದರೂ ಸ್ವತಂತ್ರ ಸಂಸ್ಥೆಗೆ ಮುಡಾ ಪ್ರಕರಣವನ್ನು ತನಿಖೆಗೆ ಕೊಡಲು ಹಿಂಜರಿಯಬಾರದು. ಈ ಪ್ರಕರಣದ ತನಿಖೆಗೆ ತಮಗೆ ಆಪ್ತರಾದ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವ ಬಗ್ಗೆಯೂ ಕೂಡ ಅವರು ಯೋಚಿಸಬಾರದು. ಈ ಬೃಹತ್ ಹಗರಣ ಸ್ವತಂತ್ರವಾಗಿ ತನಿಖೆಯಾಗಬೇಕಿದೆ. ಅವರು ಮುಖ್ಯಮಂತ್ರಿಯಾಗಿರುವುದರಿಂದ, ತಾವೇ ಫಿರ್ಯಾದಿ ಮತ್ತು ತಾವೇ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕೆಂದು ನಮ್ಮ ಪಕ್ಷದ ಕೆಲವು ಹಿರಿಯ ನಾಯಕರು ಸಲಹೆ ನೀಡಿದ್ದಾರೆ. ಬಹುಶಃ ಅವರು ಅದನ್ನು ಪರಿಗಣಿಸಿದರೆ ಒಳ್ಳೆಯದೇನೋ ಎಂದು ಹೇಳಿದ್ದಾರೆ.

ಪ್ರತಿಪಕ್ಷದ ನಾಯಕರುಗಳನ್ನು ತೆಗಳಲು, ನಿಂದಿಸಲು ಸದಾ ಮುಗಿಬೀಳುವ ಸಿದ್ದರಾಮಯ್ಯನವರ ಬೆಂಬಲಿಗ ಪಡೆಯ ಉದಾರವಾದಿಗಳು ಮತ್ತು ನಗರ ನಕ್ಸಲರು, ಈ ವಿಷಯದಲ್ಲಿ ಹೇಗೆ ಉತ್ತರದಾಯಿತ್ವಕ್ಕಾಗಿ ಆಗ್ರಹಿಸುತ್ತಾರೆ ಎನ್ನುವ ಕುತೂಹಲ ನನಗೂ ಇದೆ. ಅವರು ಪ್ರತಿಭಟಿಸಲು ಬಯಸುವುದಾದರೆ ಅಗತ್ಯ ವ್ಯವಸ್ಥೆಗಳನ್ನು ನಾವೇ ಮಾಡಿಕೊಡುತ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು