ಅತ್ಯಾಚಾರವೆಂಬುದು ಮನುಷ್ಯನಿಗಾಗಿ, ಪ್ರಾಣಿಗಾಗಲೀ ಎರಡೂ ಒಂದೇ, ಮನುಷ್ಯನಂತೆ ಪ್ರಾಣಿಗಳು ಕೂಡ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತವೆ. ಹಾಗೆಯೇ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ತನ್ನ ರಕ್ಷಣೆಗಾಗಿ ಒದ್ದು ಕೊಂದಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ಸಾಂಬಾಯಾದಲ್ಲಿ ಹಸುವಿನ ಜತೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಹಸು ಕೊಂದಿದೆ.
ಕೃಷಿ ಕಾರ್ಮಿಕನಾಗಿದ್ದ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ, ಆತ ಕಾಂಡೋಮ್ ಧರಿಸಿದ್ದ ಎನ್ನಲಾಗಿದೆ. ಪಕ್ಕದಲ್ಲೇ ಹೊದಕೆಯೂ ಇತ್ತು. ಆತ ಸಾಯುವ ಒಂದು ದಿನದ ಮೊದಲು ತನ್ನ ಸ್ನೇಹಿತನ ಜತೆ ಸಮಯ ಕಳೆದಿದ್ದ ಎನ್ನಲಾಗಿದೆ.
ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ.
ಈ ವಿಲಕ್ಷಣ ಘಟನೆ ಜನವರಿ 8 ರ ಬುಧವಾರದಂದು ಲಾಜೆ ಡ ಜಿಬೋಯಾ ಎಂಬ ಗ್ರಾಮೀಣ ಪ್ರದೇಶದ ಜಮೀನಿನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಮೃತನ ಸಹೋದ್ಯೋಗಿ ಪೊಲೀಸರಿಗೆ ತಿಳಿಸಿದ್ದು, ವ್ಯಕ್ತಿ ತಸಾಯುವ ದಿನದಂದು ಬೆಳಿಗ್ಗೆ 5 ಗಂಟೆಗೆ ಹಾಲು ಕರೆಯಲು ಎದ್ದಿದ್ದ, ಮಾಲೀಕನಿಗೆ ಕಾಫಿಗಾಗಿ ಹಾಲು ತೆಗೆದುಕೊಂಡು ಹೋಗುತ್ತಿದ್ದವನು ಅಂದು ಬಂದಿರಲಿಲ್ಲ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ
ಹಸುವಿನ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸಹೋದ್ಯೋಗಿ ಪತ್ತೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ಕಾಂಡೋಮ್ ಧರಿಸಿದ್ದ ಎಂದು ಸಹೋದ್ಯೋಗಿ ಹೇಳಿದ್ದು, ಆತನನ್ನು ಆ ಸ್ಥಳದಿಂದ ಬೇರೆಡೆಗೆ ಕರೆದೊಯ್ಯಲು ಪ್ರಯತ್ನಿಸಿದ್ದ.
ವೈದ್ಯರು ಸ್ಥಳಕ್ಕಾಗಮಿಸಿ ಆತನನ್ನು ಎಬ್ಬಿಸಲು ಪ್ರಯತ್ನಿಸಿದರು, ಆತ ಹೃದಯಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ. ಮ್ಯಾಡ್ರಿಡ್ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ orld