ನಾಲ್ಕು ದಿನಗಳ ಕದನ ವಿರಾಮ; 13 ಇಸ್ರೇಲಿ, 12 ಥಾಯ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

|

Updated on: Nov 24, 2023 | 10:01 PM

ಇಂದು ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮದ(Truce Deal) ಭಾಗವಾಗಿ ಹಮಾಸ್, ಇಸ್ರೇಲಿ ಜೈಲಿನಲ್ಲಿರುವ 39 ಪ್ಯಾಲೆಸ್ತೀನಿಯಾದವರಿಗೆ ಪ್ರತಿಯಾಗಿ 13 ಇಸ್ರೇಲಿ ಒತ್ತೆಯಾಳುಗಳ ಗುಂಪನ್ನು ನೆರೆಯ ಈಜಿಪ್ಟ್‌ಗೆ ತಲುಪಿಸಲು ಆರಂಭದಲ್ಲಿ ನಿಗದಿಪಡಿಸಲಾಗಿತ್ತು. 12 ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಸುಮಾರು ಎರಡು ತಿಂಗಳ ನಂತರ 25 ಜನರು ಸೆರೆಯಿಂದ ಹೊರಬರುತ್ತಾರೆ.

ನಾಲ್ಕು ದಿನಗಳ ಕದನ ವಿರಾಮ; 13 ಇಸ್ರೇಲಿ, 12 ಥಾಯ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ ನವೆಂಬರ್24: ಹಮಾಸ್‌ (Hamas) ಹನ್ನೆರಡು ಥಾಯ್‌ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ಥಾಯ್ಲೆಂಡ್‌ ಪ್ರಧಾನಿ ಸ್ರೆಟ್ಟಾ ಥಾವಿಸಿನ್‌ (Srettha Thavisin) ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳು ಬಿಡುಗಡೆಗೊಂಡ ಒತ್ತೆಯಾಳುಗಳನ್ನು ಸ್ವೀಕರಿಸುವ ಹಾದಿಯಲ್ಲಿದ್ದಾರೆ ಎಂದು ಅವರು ಹೇಳಿದರು. “12 ಥಾಯ್ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಭದ್ರತಾ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೃಢಪಡಿಸಿದೆ. ರಾಯಭಾರ ಕಚೇರಿಯ ಅಧಿಕಾರಿಗಳು ಇನ್ನೊಂದು ಗಂಟೆಯಲ್ಲಿ ಅವರನ್ನು ಕರೆದೊಯ್ಯಲು ಹೊರಟಿದ್ದಾರೆ. ಅವರ ಹೆಸರುಗಳು ಮತ್ತು ವಿವರಗಳನ್ನು ಶೀಘ್ರದಲ್ಲೇ ತಿಳಿಯಬೇಕುಎ ಎಂದು ಥಾವಿಸಿನ್ ಹೇಳಿದ್ದಾರೆ.

ಇಂದು ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮದ(Truce Deal) ಭಾಗವಾಗಿ ಹಮಾಸ್, ಇಸ್ರೇಲಿ ಜೈಲಿನಲ್ಲಿರುವ 39 ಪ್ಯಾಲೆಸ್ತೀನಿಯಾದವರಿಗೆ ಪ್ರತಿಯಾಗಿ 13 ಇಸ್ರೇಲಿ ಒತ್ತೆಯಾಳುಗಳ ಗುಂಪನ್ನು ನೆರೆಯ ಈಜಿಪ್ಟ್‌ಗೆ ತಲುಪಿಸಲು ಆರಂಭದಲ್ಲಿ ನಿಗದಿಪಡಿಸಲಾಗಿತ್ತು. 12 ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಸುಮಾರು ಎರಡು ತಿಂಗಳ ನಂತರ 25 ಜನರು ಸೆರೆಯಿಂದ ಹೊರಬರುತ್ತಾರೆ.

ದಿಗಳ ವಿನಿಮಯಕ್ಕೆ ಕೆಲವೇ ನಿಮಿಷಗಳಲ್ಲಿ, 13 ಇಸ್ರೇಲಿಗಳ ಜೊತೆಗೆ ತನ್ನ 12 ನಾಗರಿಕರನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ಥಾಯ್ಲೆಂಡ್ ಘೋಷಿಸಿತು.

ಇದನ್ನೂ ಓದಿ: ಇಸ್ರೇಲ್​-ಹಮಾಸ್ ನಡುವೆ 4 ದಿನಗಳ ಕದನ ವಿರಾಮ, ಇಂದು 13 ಒತ್ತೆಯಾಳುಗಳ ಬಿಡುಗಡೆ

ವರದಿಗಳ ಪ್ರಕಾರ, ಒತ್ತೆಯಾಳುಗಳನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ. ಅವರು ರಫಾ ಗಡಿಗೆ ಹೋಗುತ್ತಿದ್ದಾರೆ. ಕೆಲವು ಇಸ್ರೇಲಿ ಒತ್ತೆಯಾಳುಗಳನ್ನು ಇಸ್ರೇಲ್‌ಗೆ ಹಿಂತಿರುಗಲು ರೆಡ್‌ಕ್ರಾಸ್‌ನ ಅಂತರಾಷ್ಟ್ರೀಯ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ಹಮಾಸ್‌ಗೆ ಹತ್ತಿರವಿರುವ ಎರಡು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.

“ಅರ್ಧ ಗಂಟೆಯ ಹಿಂದೆ, ಕೈದಿಗಳನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಯಿತು, ಅವರು ಅವರನ್ನು ಈಜಿಪ್ಟಿನವರಿಗೆ ಮತ್ತು ಅವರನ್ನು ಸ್ವೀಕರಿಸಲಿರುವ ಇಸ್ರೇಲಿಗಳಿಗೆ ಕರೆದೊಯ್ಯುತ್ತಾರೆ” ಎಂದು ಮೂಲವೊಂದು ತಿಳಿಸಿದೆ ಎಂದು ಎಎಫ್‌ಪಿ ವರದಿ ತಿಳಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ