ಬೀಜಿಂಗ್: ಚೀನಾದ ವುಕ್ಸಿ ನಗರದಲ್ಲಿ ವಿದ್ಯಾರ್ಥಿಯಿಂದ ಇರಿತದ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ, 17 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಚೀನಾದ ವುಕ್ಸಿ ನಗರದಲ್ಲಿ ಇಂದು (ನವೆಂಬರ್ 16) ನಡೆದ ಚೂರಿ ಇರಿತದ ಘಟನೆಯಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಖಚಿತಪಡಿಸಿವೆ.
ಶನಿವಾರ ಚೀನಾದ ವುಕ್ಸಿ ಸಿಟಿಯಲ್ಲಿ ಆರೋಪಿಯಾಗಿರುವ 21 ವರ್ಷದ ವಿದ್ಯಾರ್ಥಿ ಚೂರಿ ಇರಿತಕ್ಕೆ ತೆರಳಿದ ನಂತರ ನಡೆದ ಘಟನೆಯಲ್ಲಿ 17 ಜನರು ಗಾಯಗೊಂಡಿದ್ದಾರೆ. ಆರೋಪಿ ಈಗ ಬಂಧನದಲ್ಲಿದ್ದಾನೆ.
👉 8 people killed and 17 injured in knife attack at vocational school in city of Yixing in Jiangsu, eastern China: Local police pic.twitter.com/LyeqGlzLdL
— News Of The Globe (@NewsOfEarthTr) November 16, 2024
21 ವರ್ಷದ ವಿದ್ಯಾರ್ಥಿಯೊಬ್ಬ ಇಂದು ಸಂಜೆ ಪೂರ್ವ ಚೀನಾದ ವುಕ್ಸಿ ನಗರದಲ್ಲಿ ಚೂರಿ ಇರಿತಕ್ಕೆ ಹೋಗಿ ಎಂಟು ಮಂದಿ ಸಾವನ್ನಪ್ಪಿ 17 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು ಹೇಳಿಕೆಯಲ್ಲಿ ದಾಳಿಯನ್ನು ದೃಢಪಡಿಸಿದ್ದಾರೆ. ಆದರೆ ಈ ದಾಳಿಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿಲ್ಲ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸುಳ್ಳು ಹರಡುವ ಮೂಲಕ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ; ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಝುಹೈನಲ್ಲಿ ನಡೆದ ಮತ್ತೊಂದು ದುರಂತದ ಕೆಲವೇ ದಿನಗಳಲ್ಲಿ ಈ ಚೂರಿ ಇರಿತದ ಘಟನೆ ಸಂಭವಿಸಿದೆ. ಅಲ್ಲಿ ಕ್ರೀಡಾ ಕೇಂದ್ರದ ಹೊರಗೆ ಹಿಟ್ ಅಂಡ್ ರನ್ ಘಟನೆಯಲ್ಲಿ 35 ಜನರು ಸಾವನ್ನಪ್ಪಿದರು ಮತ್ತು 43 ಮಂದಿ ಗಾಯಗೊಂಡರು. ಈ ಹಿನ್ನಲೆಯ ಘಟನೆಗಳು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ