380 ಮಿಲಿಯನ್ ವರ್ಷಗಳಿಂದ ಸಂರಕ್ಷಿಸಲ್ಪಟ್ಟ ಮೀನಿನ ಹೃದಯವನ್ನು ಆಸ್ಟ್ರೇಲಿಯದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2022 | 8:03 AM

ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಪಳಯುಳಿಕೆಯು ದಕ್ಷಿಣ ಆಸ್ಟ್ರೇಲಿಯದ ಕಿಂಬರ್ಲೀ ಪ್ರಾಂತ್ಯದ ಗೊಗೊ ಫಾರ್ಮೇಶನ್ ನಲ್ಲಿ ಪತ್ತೆಯಾಗಿದೆ. ಬಂಡೆಗಳಿಂದ ಅವೃತವಾಗಿರುವ ಈ ಕರಾವಳಿ ಪ್ರದೇಶವು ಡೆವೋನಿಯನ್ ಕಾಲದ ವಿಶಿಷ್ಟ ಪ್ರಾಣಿಗಳು ಮತ್ತು ಸಸ್ಯವರ್ಗಕ್ಕೆ ಹೆಸರಾಗಿದೆ.

380 ಮಿಲಿಯನ್ ವರ್ಷಗಳಿಂದ ಸಂರಕ್ಷಿಸಲ್ಪಟ್ಟ ಮೀನಿನ ಹೃದಯವನ್ನು ಆಸ್ಟ್ರೇಲಿಯದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ!
ಆಸ್ಟ್ರೇಲಿಯ ವಿಜ್ಞಾನಿಗಳು ಕಂಡುಹಿಡಿದಿರುವ ಮೀನಿನ ಪಳಯುಳಿಕೆಯ ಭಾಗ
Follow us on

ಇದು ವಿಸ್ಮಯವಲ್ಲದೆ ಮತ್ತೇನೂ ಅಲ್ಲ ಮಾರಾಯ್ರೇ. ವಿಷಯವೇನು ಗೊತ್ತಾ?
ಆಸ್ಟ್ರೇಲಿಯಾದ ವಿಜ್ಞಾನಿಗಳು ಮೀನಿನ ಸುಮಾರು 380 ಮಿಲಿಯನ್ ವರ್ಷಗಳ ಹಿಂದಿನ ಪಳೆಯುಳಿಕೆಯಲ್ಲಿ ಅದರ ಹೃದಯವನ್ನು ಪತ್ತೆ ಮಾಡಿದ್ದಾರೆ. ಸದರಿ ಆವಿಷ್ಕಾರವು ಕರ್ಟಿನ್ ವಿಶ್ವವಿದ್ಯಾನಿಲಯದ (Curtin University) ಸಂಶೋಧಕರ ಹೃದಯವನ್ನು ಸಂತೋಷದಿಂದ ಭರಿಸಿದೆ. ಯಾಕೆಂದರೆ ಇದು ಬಹಳ ಸೂಕ್ಷ್ಮವಾಗಿ ಕಾಯ್ದಿರಿಸಲಾಗಿರುವ ಹೃದಯವಾಗಿದ್ದು ಮಾನವಕುಲ ಸೇರಿದಂತೆ ಕೋರೆಹಲ್ಲುಳ್ಳ ಕಶೇರುಕಗಳ ವಿಕಾಸದ ಬಗ್ಗೆ ಸುಳಿವುಗಳನ್ನು ನೀಡುತ್ತದೆ ಎಂದು ಸಿಎನ್‌ಇಟಿಯ ವರದಿಯೊಂದು ತಿಳಿಸುತ್ತದೆ. ಪಳೆಯುಳಿಕೆಯು ಹೊಟ್ಟೆ, ಕರುಳು ಮತ್ತು ಯಕೃತ್ತನ್ನು ಸಹ ಒಳಗೊಂಡಿದೆ. ಅಂಗಗಳು ಶಾರ್ಕ್ ಒಂದರ ಅಂಗರಚನಾಶಾಸ್ತ್ರವನ್ನು ಹೋಲುತ್ತವೆ. ಸಂಶೋಧನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಪತ್ತೆಯಾಗಿರುವ ಹೃದಯುವು 358 ಮಿಲಿಯನ್ ವರ್ಷಗಳಷ್ಟು ಹಿಂದೆ ವಿನಾಶಗೊಂಡ ಆರ್ಥ್ರೋಡೈರ್ ಪ್ರಜಾತಿಗೆ ಸೇರಿದ ಮೀನಿಗೆ ಸೇರಿದ್ದಾಗಿದೆ. ಮಾದರಿಯು ಪ್ರಸ್ತುತ ದಾಖಲೆ ಹೊಂದಿರುವ ಕೋರೆಹಲ್ಲಿನ ಮೀನಿನ ಪಳೆಯುಳಿಕೆಗಿಂತ ಹಳೆಯದಾಗಿದೆ.

ಹೃದಯವು S-ಆಕಾರದಲ್ಲಿದ್ದು ಎರಡು ಚೇಂಬರ್ ಗಳನ್ನು ಹೊಂದಿರುವುದರಿಂದ ಸಂಶೋಧಕರಿಗೆ ಮೀನು ಮತ್ತು ಆದುನಿಕ ಶಾರ್ಕ್ ಗಳ ನಡುವಿನ ಹೋಲಿಕೆಗಳನ್ನು ಅರಿಯಲು ನೆರವಾಗಿದೆ.

‘ವಿಕಾಸವಾದವನ್ನು ಸಾಮಾನ್ಯವಾಗಿ ಸಣ್ಣಸಣ್ಣ ಹಂತಗಳ ಸರಣಿ ಎಂದು ಭಾವಿಸಲಾಗುತ್ತದೆ. ಆದರೆ ಈ ಪುರಾತನ ಪಳೆಯುಳಿಕೆಗಳು ಕೋರೆಹಲ್ಲಿಲ್ಲದ ಮತ್ತು ಕೋರೆಹಲ್ಲುಳ್ಳ ಕಶೇರುಕಗಳ ನಡುವೆ ದೊಡ್ಡ ಅಂತರವನ್ನು ಸೂಚಿಸುತ್ತದೆ,’ ಎಂದು ಕರ್ಟಿನ್ ವಿಶ್ವವಿದ್ಯಾಲಯದ ಕಶೇರುಕ ಪ್ರಾಗ್ಜೀವಶಾಸ್ತ್ರಜ್ಞ ಮತ್ತು ಸಂಶೋಧನೆಗಳ ಅಧ್ಯಯನದ ಸಹ-ಲೇಖಕ ಪ್ರೊಫೆಸರ್ ಕೇಟ್ ಟ್ರಿನಾಜ್ಸ್ಟಿಕ್ ಹೇಳಿರುವರೆಂದು ಸಿ ಎನ್ ಈ ಟಿ ವರದಿಯಲ್ಲಿ ಹೇಳಲಾಗಿದೆ. ‘ಈ ಮೀನುಗಳು ಇಂದಿನ ಶಾರ್ಕ್ ಗಳ ಹಾಗೆ ತಮ್ಮ ಹೃದಯವನ್ನು ಅಕ್ಷರಶಃ ಬಾಯಿಯಲ್ಲಿ ಮತ್ತು ತಮ್ಮ ಕಿವಿರುಗಳ ಅಡಿಯಲ್ಲಿ ಹೊಂದಿವೆ,’ ಎಂದು ಪ್ರೊಫೆಸರ್ ಕೇಟ್ ಹೇಳಿದ್ದಾರೆ.

ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಪಳಯುಳಿಕೆಯು ದಕ್ಷಿಣ ಆಸ್ಟ್ರೇಲಿಯದ ಕಿಂಬರ್ಲೀ ಪ್ರಾಂತ್ಯದ ಗೊಗೊ ಫಾರ್ಮೇಶನ್ ನಲ್ಲಿ ಪತ್ತೆಯಾಗಿದೆ. ಬಂಡೆಗಳಿಂದ ಅವೃತವಾಗಿರುವ ಈ ಕರಾವಳಿ ಪ್ರದೇಶವು ಡೆವೋನಿಯನ್ ಕಾಲದ ವಿಶಿಷ್ಟ ಪ್ರಾಣಿಗಳು ಮತ್ತು ಸಸ್ಯವರ್ಗಕ್ಕೆ ಹೆಸರಾಗಿದೆ.

ಅಧ್ಯಯನದ ಮತ್ತೊಬ್ಬ ಸಹ-ಲೇಖಕ ಹಾಗೂ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದಿಂದ ಪ್ರೊಫೆಸರ್ ಜಾನ್ ಲಾಂಗ್ ಅವರು ಸದರಿ ಆವಿಷ್ಕಾರವು ‘ಪ್ಯಾಲಿಯಂಟಾಲಜಿಸ್ಟ್‌ನ ಕನಸನ್ನು ನಿಜವಾಗಿಸಿರುವ ಸಂಗತಿಯಾಗಿದೆ’ ಅಂತ ಹೇಳಿದ್ದಾರೆ