ಇಸ್ರೇಲ್ ಪ್ರಧಾನಿಯಾಗಿ ಬೆಂಜಮಿನ್ ನೆತನ್ಯಾಹು ಆಯ್ಕೆಯಾಗಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಯೇರ್ ಲ್ಯಾಪಿಡ್ ಅವರನ್ನು ಬೆಂಜಮಿನ್ ನೆತನ್ಯಾಹು ಮಣಿಸುವ ಮೂಲಕ ಮತ್ತೆ ಇಸ್ರೇಲ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಮತಗಳ ಮತಗಳ ಎಣಿಕೆ ಕಾರ್ಯ ಇಂದು(ಗುರುವಾರ ) ಮುಕ್ತಾಯಗೊಂಡಿದ್ದು, ಇದರಲ್ಲಿ ನೆತನ್ಯಾಹು ಭರ್ಜರಿ ಗೆಲುವು ಸಾಧಿಸಿದ್ದು, ಯೇರ್ ಲ್ಯಾಪಿಡ್ ಅವರಿಗೆ ಮುಖಭಂಗವಾಗಿದೆ.
ಇನ್ನು ಬೆಂಜಮಿನ್ ನೆತನ್ಯಾಹು ಅವರ ಗೆಲುವಿಗೆ ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರು ಅಭಿನಂದನೆ ತಿಳಿಸಿದ್ದಾರೆ. ಬೆಂಜಮಿನ್ ನೆತನ್ಯಾಹು ಅವರು 1996-99 ಮತ್ತು 2009ರಿಂದ 2021ರ ವರೆಗೆ ಇಸ್ರೆಲ್ ಪ್ರಧಾನಿಯಾಗಿದ್ದರು.
ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಮತ್ತು ಮಿತ್ರಪಕ್ಷಗಳು 120-ಸೀಟುಗಳ ನೆಸೆಟ್‌ನಲ್ಲಿ ಬಹುಮತವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆ ವರದಿ ಹೇಳಿತ್ತು.
Published On - 11:12 pm, Thu, 3 November 22