‘‘ಕೊವಿಡ್-19ಗೆ ವ್ಯಾಕ್ಸಿನ್ ಇನ್ನೇನು ಬಿಡುಗಡೆಯಾಗಲಿದೆ. ಅದನ್ನು ಜನರಿಗೆ ವಿತರಿಸುವುದು ನಮ್ಮ ಸರ್ಕಾರದ ಅತಿ ದೊಡ್ಡ ಜವಾಬ್ದಾರಿಯಾಗಲಿದೆ. ನಾವು ಆದಷ್ಟು ಬೇಹ ಕಾರ್ಯೋನ್ಮುಖರಾಗದಿದ್ದರೆ ಮತ್ತಷ್ಟು ಜನ ಸಾಯಲಿದ್ದಾರೆ. ಹಾಗಾಗಿ, ವ್ಯಾಕ್ಸೀನನ್ನು ಜನರಿಗೆ ತಲುಪಿಸಲು ದಯವಿಟ್ಟು ನಮ್ಮೊಂದಿಗೆ ಕೊಆರ್ಡಿನೇಟ್ ಮಾಡಿ ಎಂದು ನಿಮ್ಮನ್ನು ಕೇಳುತ್ತೇನೆ. ಎಬೊಲ ಸೋಂಕನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ನನ್ನ ಚೀಫ್ ಆಫ್ ಸ್ಟಾಫ್ ರಾನ್ ಕ್ಲೇನ್ ಒಂದು ಮಾತನ್ನು ಬಹಳ ಸ್ಪಷ್ಟವಾಗಿ ಹೇಳುತ್ತಾರೆ, ‘ನಮಗೆ ವ್ಯಾಕ್ಸಿನ್ ಬಹಳ ಮುಖ್ಯ. ಆದರೆ ಅದು ಲಭ್ಯವಾದ ಮೇಲೆ ಜನರಿಗೆ ಸಮರ್ಪಕವಾಗಿ ವಿತರಿಸದೆ ಹೋದರೆ, ಅದನ್ನು ತಯಾರಿಸಲು ಪಟ್ಟ ಶ್ರಮವೆಲ್ಲ ವ್ಯರ್ಥವಾಗುತ್ತದೆ. 30 ಕೋಟಿ ಅಮೆರಿಕನ್ನರಿಗೆ ಅದನ್ನು ವಿತರಿಸುವುದು ಸುಲಭದ ಕೆಲಸವಲ್ಲ. ಅದೊಂದು ಹರ್ಕ್ಯೂಲಿಯನ್ ಟಾಸ್ಕ್ ಆಗಿರುವುದರಿಂದ ಒಂದು ಫೂಲ್ಪ್ರೂಫ್ ಗೇಮ್ಪ್ಲ್ಯಾನ್ ಬೇಕು. ಹಾಗಾಗಿ ನಿಮ್ಮ ಸಹಕಾರದ ಅಗತ್ಯ ನನ್ನ ಸರ್ಕಾರಕ್ಕಿದೆ, ದಯವಿಟ್ಟು ಸಹಕರಿಸಿ,’’ ಎಂದು ಬೈಡೆನ್ ಹೇಳಿದ್ದಾರೆ.
ವ್ಯಾಕ್ಸಿನ್ ವಿತರಣೆಯ ಯೋಜನೆಯನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವುದರಲ್ಲೇ ಬುದ್ಧಿವಂತಿಕೆ ಅಡಗಿದೆಯೆಂದು ಬೈಡೆನ್ ಒತ್ತಿ ಹೇಳಿದ್ದಾರೆ.
‘‘ಜನವರಿ 20ರವರೆಗೆ ಕಾಯುತ್ತಾ ಕೂತರೆ ನಮ್ಮ ಟಾಸ್ಕ್ನಲ್ಲಿ ಒಂದು ತಿಂಗಳು ಹಿಂದುಳಿದು ಬಿಡುತ್ತೇವೆ. ನಾವು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಜನವರಿ 20ರೊಳಗಾಗಿ ನಿಮಗೆ ಜ್ಞಾನೋದಯವಾಗಬಹುದೆಂಬ ನಂಬಿಕೆ ನನಗಿದೆ,’’ ಎಂದು ತಮ್ಮ ಮಾತಿನ ಕೊನೆಯಲ್ಲಿ ಬೈಡೆನ್ ಚಾಟಿ ಬೀಸಿದ್ದಾರೆ.