
ಲಂಡನ್, ಅಕ್ಟೋಬರ್ 06: ಲಂಡನ್‌ನಿಂದ ಅಮೆರಿಕದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್ ಬೋಯಿಂಗ್ ವಿಮಾನವು ಹಾರಾಟ ನಡೆಸುತ್ತಿದ್ದಾಗ ಹಠಾತ್ 9 ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದು ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಪೈಲಟ್‌ಗಳು ತುರ್ತು ಪರಿಸ್ಥಿತಿ ಘೋಷಿಸಿ ವಿಮಾನವನ್ನು ಯಶಸ್ವಿಯಾಗಿ ಲಂಡನ್ ಹೀಥ್ರೂ ವಿಮಾನ ನಿಲ್ದಾಣಕ್ಕೆ ವಾಪಸ್ ತಿರುಗಿಸಿ ಸುರಕ್ಷಿತವಾಗಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ವಿಮಾನವು 37,000 ಅಡಿ ಎತ್ತರದಲ್ಲಿ ಐರ್ಲೆಂಡ್ ವಾಯುಪ್ರದೇಶದ ಮೇಲೆ ಹಾರುತ್ತಿದ್ದಾಗ ಕೇವಲ ಕೆಲವೇ ನಿಮಿಷಗಳಲ್ಲಿ 28,000 ಅಡಿ ಎತ್ತರಕ್ಕೆ ಇಳಿಯಿತು. ಒಟ್ಟು 9,000 ಅಡಿಗಳಷ್ಟು ಕೆಳಗೆ ಇಳಿದ ಕಾರಣ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಬ್ರಿಟಿಷ್ ಏರ್‌ವೇಸ್‌ನ BA295 ವಿಮಾನವು ಬೆಳಗ್ಗೆ 11.50ಕ್ಕೆ ಲಂಡನ್‌ನ ಹೀಥ್ರೂನಿಂದ ಹೊರಟು ಸುಮಾರು 8.40 ಗಂಟೆಗಳಲ್ಲಿ ಚಿಕಾಗೋ ತಲುಪಬೇಕಿತ್ತು. ಆದರೆ ಹಾರಾಟ ಆರಂಭವಾದ ಒಂದು ಗಂಟೆಯಲ್ಲೇ ತಾಂತ್ರಿಕ ಅಡಚಣೆ ಕಂಡುಬಂದಿತು.
ವಿಮಾನ ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ATC) ಸಾಮಾನ್ಯ ತುರ್ತುಸ್ಥಿತಿಯನ್ನು ಸೂಚಿಸುವ ‘7700’ ಟ್ರಾನ್ಸ್‌ಪಾಂಡರ್ ಕೋಡ್ ರವಾನಿಸಿ, ಮುನ್ನೆಚ್ಚರಿಕೆಯಾಗಿ ಲಂಡನ್‌ಗೆ ಮರಳುವ ನಿರ್ಧಾರ ಕೈಗೊಂಡರು. ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮಗೆ ಮೊದಲ ಆದ್ಯತೆ. ಪೈಲಟ್‌ಗಳ ಸಮಯಪ್ರಜ್ಞೆಯಿಂದ ವಿಮಾನವು ಹೀಥ್ರೂನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬ್ರಿಟಿಷ್ ಏರ್‌ವೇಸ್ ತಿಳಿಸಿದೆ.
ಮತ್ತಷ್ಟು ಓದಿ:
‘Squawk 7700’ ಎಂದರೇನು?
ವಿಮಾನಯಾನದಲ್ಲಿ ಪೈಲಟ್‌ಗಳು ಎಟಿಸಿಗೆ ಸಮಸ್ಯೆಗಳನ್ನು ಸಂವಹಿಸಲು 4 ಅಂಕಿಗಳ ಕೋಡ್ ಬಳಸುತ್ತಾರೆ.
7700: ಸಾಮಾನ್ಯ ಅಥವಾ ಗಂಭೀರ ತಾಂತ್ರಿಕ ತುರ್ತುಸ್ಥಿತಿ.
7600: ರೇಡಿಯೋ ಸಂವಹನ ಸಂಪರ್ಕ ಕಡಿತ.
7500: ವಿಮಾನ ಅಪಹರಣ (Hijack).
ಕೆಲವೇ ದಿನಗಳ ಹಿಂದಷ್ಟೇ ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ (FZ1073) ವಿಮಾನದಲ್ಲಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದ್ದ. ತೀವ್ರ ರಕ್ತಸ್ರಾವದ ನಡುವೆಯೂ ಕ್ಯಾಪ್ಟನ್ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರ ನೆರವಿನಿಂದ ವಿಮಾನವನ್ನು ಸೌದಿಯ ತಬೂಕ್‌ನಲ್ಲಿ ಇಳಿಸಿ 174 ಪ್ರಯಾಣಿಕರ ಪ್ರಾಣ ಉಳಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ