AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್ ಪ್ಲ್ಯಾನ್ ಫೇಲ್ ಆಗ್ತಿದ್ದಂತೆ ಎಂಜಿನ್ ಆಫ್: ಸೌದಿ ಮರುಭೂಮಿಯಲ್ಲೇ ವಿಮಾನ ಬೀಳಿಸಲು ಯತ್ನಿಸಿದ್ದ ಓಮನ್ ಕೋ- ಪೈಲಟ್

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಸೌದಿ ಮರುಭೂಮಿಯಲ್ಲಿ ಪತನಗೊಳಿಸಲು ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಯತ್ನಿಸಿದ್ದ. ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವ ಸಂಚು ವಿಫಲವಾಗಿದ್ದರಿಂದ ಎಂಜಿನ್ ಆಫ್ ಮಾಡಿ ಸಾಮೂಹಿಕ ಹತ್ಯೆಗೆ ಮುಂದಾಗಿದ್ದ. ಕ್ಯಾಪ್ಟನ್ ಸ್ಮಿತ್ ಮತ್ತು ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳ ಸಮಯಪ್ರಜ್ಞೆಯಿಂದ 174 ಜನರ ಪ್ರಾಣ ಉಳಿದಿದ್ದು, ಇದು ವಾಯುಯಾನ ಇತಿಹಾಸದಲ್ಲಿ ಪವಾಡವೆಂದು ಪರಿಗಣಿಸಲಾಗಿದೆ.

ಇಸ್ರೇಲ್ ಪ್ಲ್ಯಾನ್ ಫೇಲ್ ಆಗ್ತಿದ್ದಂತೆ ಎಂಜಿನ್ ಆಫ್: ಸೌದಿ ಮರುಭೂಮಿಯಲ್ಲೇ ವಿಮಾನ ಬೀಳಿಸಲು ಯತ್ನಿಸಿದ್ದ ಓಮನ್ ಕೋ- ಪೈಲಟ್
ಫ್ಲೈದುಬೈImage Credit source: PTI
ನಯನಾ ರಾಜೀವ್
|

Updated on:Oct 05, 2026 | 8:10 AM

Share

ದುಬೈ, ಅಕ್ಟೋಬರ್ 05: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವ ಸಂಚು ವಿಫಲವಾಗುತ್ತಿದ್ದಂತೆ ಸೌದಿ ಮರುಭೂಮಿಯಲ್ಲೇ ಎಂಜಿನ್‌ಗಳನ್ನು ಸ್ಥಗಿತಗೊಳಿಸಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ನಡೆಸಿದ ಸಮಗ್ರ ತನಿಖೆಯನ್ನು ಉಲ್ಲೇಖಿಸಿ ಇಸ್ರೇಲ್‌ನ ‘ವೈನೆಟ್ ನ್ಯೂಸ್’ ಈ ವಿವರಗಳನ್ನು ಪ್ರಕಟಿಸಿದೆ.

ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತ

ವಿಮಾನದೊಳಗೆ ಪ್ರಯಾಣಿಕರು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ವಿಶ್ಲೇಷಿಸಿದ ಇಬ್ಬರು ಅನುಭವಿ ಬೋಯಿಂಗ್ 737 ಕ್ಯಾಪ್ಟನ್‌ಗಳು, ಹಾರಾಟದ ಮಧ್ಯದಲ್ಲೇ ಪ್ರಯಾಣಿಕರ ಕ್ಯಾಬಿನ್‌ನ ತುರ್ತು ದೀಪಗಳು ಏಕಾಏಕಿ ಹೊತ್ತಿಕೊಂಡಿದ್ದನ್ನು ಗುರುತಿಸಿದ್ದಾರೆ. ವಿಮಾನವು ಹಾರಾಟದಲ್ಲಿರುವಾಗ ಮುಖ್ಯ ವಿದ್ಯುತ್ ಪೂರೈಕೆ ಕಡಿತಗೊಂಡು, ವ್ಯವಸ್ಥೆ ಬ್ಯಾಟರಿ ಶಕ್ತಿಗೆ ಬದಲಾದಾಗ ಮಾತ್ರ ಹೀಗಾಗುತ್ತದೆ. ಅಂದರೆ, ದಾಳಿಕೋರ ಪೈಲಟ್ ಇಂಧನ ಸ್ವಿಚ್‌ಗಳನ್ನು “RUN” ನಿಂದ “CUTOFF” ಗೆ ಬದಲಾಯಿಸಿ ಎಂಜಿನ್‌ಗಳನ್ನು ಬಂದ್ ಮಾಡಿದ್ದ ಎಂದು ವರದಿ ಹೇಳಿದೆ.

60 ಸೆಕೆಂಡ್‌ಗಳಲ್ಲಿ 16,000 ಅಡಿ ಪಾತಾಳಕ್ಕೆ ಡೈವ್

ಕ್ಯಾಪ್ಟನ್ ಸ್ಮಿತ್ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಬಾಗಿಲು ತೆರೆಯದಂತೆ ತಡೆಯಲು ಯತ್ನಿಸಿದ ಹಮ್ಮಾಮಿ, ಆಟೋಪೈಲಟ್ ಸಂಪರ್ಕ ಕಡಿತಗೊಳಿಸಿ ವಿಮಾನವನ್ನು ತೀಕ್ಷ್ಣವಾದ ಕಡಿದಾದ ಇಳಿಜಾರಿಗೆ ತಳ್ಳಿದ್ದ. ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಿಮಾನವು ಬರೋಬ್ಬರಿ 16,000 ಅಡಿಗಳಷ್ಟು ಕೆಳಗೆ ಕುಸಿಯಿತು.

ಮರುಭೂಮಿಯಲ್ಲಿ ಸಾಮೂಹಿಕ ಹತ್ಯೆಯ ಸಂಚು:

ಇಸ್ರೇಲ್ ನೆಲದಲ್ಲಿ ವಿಮಾನ ಅಪ್ಪಳಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಸೌದಿ ಅರೇಬಿಯಾದ ವಿಶಾಲ ಮರುಭೂಮಿಯಲ್ಲೇ ವಿಮಾನವನ್ನು ಅಪ್ಪಳಿಸಿ 174 ಪ್ರಯಾಣಿಕರನ್ನೂ ಸಾಯಿಸುವುದು ಆತನ ಪರ್ಯಾಯ ಯೋಜನೆಯಾಗಿತ್ತು.

ಆಫ್-ಡ್ಯೂಟಿ ಪೈಲಟ್‌ಗಳ ಸಮಯಪ್ರಜ್ಞೆ:

ಗಾಯಗೊಂಡ ಸ್ಥಿತಿಯಲ್ಲಿದ್ದ ಕ್ಯಾಪ್ಟನ್ ಸ್ಮಿತ್ ಕಾಕ್‌ಪಿಟ್ ಸ್ವಿಚ್ ಒತ್ತಿ ಬಾಗಿಲು ತೆರೆದಾಗ ಪ್ರಯಾಣಿಕರು ಒಳನುಗ್ಗಿ ಹಮ್ಮಾಮಿಯನ್ನು ನಿಯಂತ್ರಿಸಿದರು. ಅದೇ ಸಮಯದಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಆಫ್-ಡ್ಯೂಟಿ ಫ್ಲೈದುಬೈ ಪೈಲಟ್‌ಗಳು ತಕ್ಷಣ ನಿಯಂತ್ರಣ ವಹಿಸಿಕೊಂಡು, ಆಫ್ ಆಗಿದ್ದ ಎಂಜಿನ್‌ಗಳನ್ನು ಮರುಚಾಲನೆಗೊಳಿಸಿ ವಿಮಾನವನ್ನು ಸಮತೋಲನಕ್ಕೆ ತಂದು ತಬುಕ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.

ಹಮಾಮ್ ಅಲ್-ಹಮ್ಮಾಮಿ ಹಿನ್ನೆಲೆ: ಓಮನ್ ಪ್ರಜೆಯಾಗಿದ್ದರೂ ಸಿರಿಯಾದಲ್ಲಿದ್ದ ತನ್ನ ತಾಯಿಯೊಂದಿಗೆ ಬೆಳೆದ ಈತ, ಅಲ್ಲಿಯೇ ಐಸಿಸ್ ಹಾಗೂ ತೀವ್ರಗಾಮಿ ಉಗ್ರ ಸಿದ್ಧಾಂತಕ್ಕೆ ಮಾರುಹೋಗಿದ್ದನು. 2024 ರಲ್ಲಿ ‘ಓಮನ್ ಏರ್’ ಸಂಸ್ಥೆಯಲ್ಲಿದ್ದಾಗ ಉಗ್ರ ಸಾಮಗ್ರಿಗಳೊಂದಿಗೆ ಸಿಕ್ಕಿಬಿದ್ದು, ತವರು ದೇಶದಲ್ಲೇ ಹಾರಾಟ ನಿರ್ಬಂಧಕ್ಕೆ ಒಳಗಾಗಿದ್ದ.

ಮತ್ತಷ್ಟು ಓದಿ:

ಫ್ಲೈದುಬೈ ವಿಮಾನದಲ್ಲಿ ಇಬ್ಬರು ಹೆಚ್ಚುವರಿ ಪೈಲಟ್‌‌ಗಳು ಇದ್ದರು ಯಾಕೆ?: ವಿಮಾನಯಾನ ಕ್ಷೇತ್ರದ ‘ಡೆಡ್‌ಹೆಡಿಂಗ್’ ರಹಸ್ಯ ಇಲ್ಲಿದೆ

ವಿಚಾರಣೆಯಲ್ಲಿ ತಪ್ಪೊಪ್ಪಿಗೆ: ಸೌದಿ ಅರೇಬಿಯಾ ಮತ್ತು ಯುಎಇ ತನಿಖಾ ಸಂಸ್ಥೆಗಳ ಎದುರು ತಪ್ಪೊಪ್ಪಿಕೊಂಡಿರುವ ಹಮ್ಮಾಮಿ, “ನನಗೆ ಸಾವಿನ ಭಯವಿಲ್ಲ, ಇಸ್ರೇಲ್ ಮೇಲೆ ವಿಮಾನ ಪತನಗೊಳಿಸುವುದೇ ನನ್ನ ಮುಖ್ಯ ಗುರಿಯಾಗಿತ್ತು” ಎಂದು ಹೇಳಿದ್ದಾನೆ. ಎಮಿರೇಟ್ಸ್ ಸುದ್ದಿ ಸಂಸ್ಥೆ (WAM) ಇದನ್ನು ಅಧಿಕೃತವಾಗಿ ‘ಭಯೋತ್ಪಾದಕ ಕೃತ್ಯ’ ಎಂದು ಘೋಷಿಸಿದೆ.

ಬೋಯಿಂಗ್ 737 ಎಂಜಿನ್ ರೀ-ಸ್ಟಾರ್ಟ್ ಸವಾಲು: 30,000 ಅಡಿ ಎತ್ತರದಲ್ಲಿ ಎಂಜಿನ್ ಕಟ್‌ಆಫ್ ಆದಾಗ ವಿಮಾನವು ಗ್ಲೈಡರ್‌ನಂತೆ ವೇಗವಾಗಿ ಎತ್ತರ ಕಳೆದುಕೊಳ್ಳುತ್ತದೆ. ಅಂತಹ ಭೀಕರ ತುರ್ತು ಪರಿಸ್ಥಿತಿಯಲ್ಲಿ ಇಂಜಿನ್ ಅನ್ನು ಗಾಳಿಯಲ್ಲೇ ಮರುಪ್ರಾರಂಭಿಸುವುದು ಪೈಲಟ್‌ಗಳಿಗೆ ಅತ್ಯಂತ ಕಠಿಣ ಸವಾಲು. ಆಫ್-ಡ್ಯೂಟಿ ಪೈಲಟ್‌‌ಗಳು ಹಾಗೂ ಗಾಯಾಳು ಕ್ಯಾಪ್ಟನ್ ಸ್ಮಿತ್ ತೋರಿದ ಈ ಸಮಯಪ್ರಜ್ಞೆ ವಿಶ್ವ ವಾಯುಯಾನ ಇತಿಹಾಸದಲ್ಲೇ ಮಹಾ ಪವಾಡವೆಂದು ಪರಿಗಣಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:04 am, Mon, 5 October 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ