AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲೈದುಬೈ ವಿಮಾನದಲ್ಲಿ ಇಬ್ಬರು ಹೆಚ್ಚುವರಿ ಪೈಲಟ್‌‌ಗಳು ಇದ್ದರು ಯಾಕೆ?: ವಿಮಾನಯಾನ ಕ್ಷೇತ್ರದ ‘ಡೆಡ್‌ಹೆಡಿಂಗ್’ ರಹಸ್ಯ ಇಲ್ಲಿದೆ

ದುಬೈನಿಂದ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕೋ-ಪೈಲಟ್ ವಿಮಾನ ಪತನಕ್ಕೆ ಸಂಚು ನಡೆಸಿದ್ದ. ಮುಖ್ಯ ಪೈಲಟ್‌ಗೆ ಚಾಕು ಇರಿದು ನಿಯಂತ್ರಣ ಕಳೆದುಕೊಳ್ಳುತ್ತಿದ್ದ ವಿಮಾನವನ್ನು ಇಬ್ಬರು 'ಡೆಡ್‌ಹೆಡಿಂಗ್' ಪೈಲಟ್‌ಗಳು ಹಿರೋಯಿಕ್ ಆಗಿ ರಕ್ಷಿಸಿದರು. ಸುಮಾರು 170 ಅಮಾಯಕರ ಪ್ರಾಣ ಉಳಿದದ್ದು ಅವರ ಸಮಯೋಚಿತ ಕಾರ್ಯದಿಂದ. 'ಡೆಡ್‌ಹೆಡಿಂಗ್' ಎಂದರೆ ಕರ್ತವ್ಯದ ಪೈಲಟ್‌ಗಳು ಬೇರೆ ವಿಮಾನದಲ್ಲಿ ಪ್ರಯಾಣಿಸುವುದು ಎಂದು ವಿವರಿಸಲಾಗಿದೆ.

ಫ್ಲೈದುಬೈ ವಿಮಾನದಲ್ಲಿ ಇಬ್ಬರು ಹೆಚ್ಚುವರಿ ಪೈಲಟ್‌‌ಗಳು ಇದ್ದರು ಯಾಕೆ?: ವಿಮಾನಯಾನ ಕ್ಷೇತ್ರದ 'ಡೆಡ್‌ಹೆಡಿಂಗ್' ರಹಸ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Oct 03, 2026 | 12:57 PM

Share

ದುಬೈ, ಅ.3: ದುಬೈನಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ (Flight FZ1073) ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವನ್ನು ಆಕಾಶದಲ್ಲೇ ಪತನಗೊಳಿಸಲು ಜಿಹಾದಿ ಕೋ-ಪೈಲಟ್‌ ಭೀಕರ ಸಂಚು ನಡೆಸಿದ್ದ ವೇಳೆ, 170ಕ್ಕೂ ಹೆಚ್ಚು ಅಮಾಯಕರ ಪ್ರಾಣ ಉಳಿದದ್ದು ಪ್ರಯಾಣಿಕರ ರೂಪದಲ್ಲಿದ್ದ ಇಬ್ಬರು ‘ಡೆಡ್‌ಹೆಡಿಂಗ್’ (Deadheading) ಆಫ್-ಡ್ಯೂಟಿ ಪೈಲಟ್‌ಗಳ ಹಠಾತ್ ಪ್ರವೇಶದಿಂದ. ಇದೀಗ ಈ ಡೆಡ್‌ಹೆಡಿಂಗ್ ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತದೆ. ವಿಮಾನಯಾನದ ವೇಳೆ ಈ ಡೆಡ್‌ಹೆಡಿಂಗ್ ಪೈಲಟ್​​​​​ಗಳು ಯಾಕೆ? ಇವರ ಕೆಲಸ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ವಿಮಾನದ ಕಾಕ್‌ಪಿಟ್‌ನಲ್ಲಿ ಕೇವಲ ಇಬ್ಬರು ಪೈಲಟ್‌ಗಳು ಇರಬೇಕಾದ ಜಾಗದಲ್ಲಿ ಒಟ್ಟು ನಾಲ್ವರು ‘ಫ್ಲೈದುಬೈ’ ಪೈಲಟ್‌ಗಳು ಆ ವಿಮಾನದಲ್ಲಿದ್ದರು. ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್ ಹಮಾಮ್ ಅಲ್-ಹಮಾಮಿ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಇರಿದಿದ್ದ ಸಮಯದಲ್ಲ ಸಾಧಾರಣ ಪ್ರಯಾಣಿಕರಂತೆ ಕುಳಿತಿದ್ದ ಇಬ್ಬರು ಹೆಚ್ಚುವರಿ ಪೈಲಟ್‌ಗಳು ವಿಮಾನದ ನಿಯಂತ್ರಣ ತೆಗೆದುಕೊಂಡು ಸೌದಿ ಅರೇಬಿಯಾದ ‘ತಬುಕ್’ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.

ರಾಯಿಟರ್ಸ್ ವರದಿಯ ಪ್ರಕಾರ, ಕೋ-ಪೈಲಟ್ ಜಿಹಾದಿ ಅಲ್-ಹಮಾಮಿಯ ಧಾಂದಲೆಯಿಂದ ವಿಮಾನ ಅತ್ಯಂತ ವೇಗವಾಗಿ ಭೂಮಿಯತ್ತ ಹೋಗುತ್ತಿತ್ತು. ತೀವ್ರ ರಕ್ತಸ್ರಾವದಿಂದ ಕಾಕ್‌ಪಿಟ್ ಮೇಲೆ ಬಿದ್ದಿದ್ದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ವಿಮಾನ ಕೆಳಕ್ಕೆ ಹೋಗುತ್ತಿದ್ದ ಕ್ಷಣದಲ್ಲೇ ಹೆಣಗಾಡಿ ಕಾಕ್‌ಪಿಟ್ ಬಾಗಿಲನ್ನು ಒಳಗಿನಿಂದ ಅನ್‌ಲಾಕ್ ಮಾಡಿದರು. ಬಾಗಿಲು ತೆರೆಯುತ್ತಿದ್ದಂತೆ ಸೀಟಿನಿಂದ ಜಿಗಿದು ಬಂದ ಪ್ರಯಾಣಿಕರು ಒಳಗಡೆ ನುಗ್ಗಿ, ಕ್ಯಾಪ್ಟನ್ ಸ್ಮಿತ್ ಅವರಿಗೆ ಚಾಕು ಇರಿದಿದ್ದ ಕೋ-ಪೈಲಟ್‌ನನ್ನು ಹಿಡಿದು ಉಸಿರುಗಟ್ಟಿಸಿ ಮೆಟ್ಟಿಹಾಕಿದರು.

ಈ ಹಂತದಲ್ಲಿ, ವಿಮಾನದಲ್ಲಿದ್ದ ಇಬ್ಬರು ಹೆಚ್ಚುವರಿ ‘ಫ್ಲೈದುಬೈ’ ಪೈಲಟ್‌ಗಳು ಕಾಕ್‌ಪಿಟ್‌ ಪ್ರವೇಶಿಸಿ ತಕ್ಷಣವೇ ವಿಮಾನದ ಕಂಟ್ರೋಲ್ ತೆಗೆದುಕೊಂಡರು. ಅಪಾರ ಅನುಭವವಿದ್ದ ಇಬ್ಬರೂ ಪೈಲಟ್‌ಗಳು ವಿಮಾನವನ್ನು ಸೌದಿಯ ತಬುಕ್ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಡೈವರ್ಟ್ ಮಾಡಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.

ವಿಮಾನದಲ್ಲೇಕೆ ನಾಲ್ವರು ಪೈಲಟ್‌ಗಳು ಇದ್ದರು?:

ಸಾಮಾನ್ಯವಾಗಿ ಒಂದು ವಿಮಾನದಲ್ಲಿ ನಾಲ್ವರು ಪೈಲಟ್‌ಗಳನ್ನು ಕಳುಹಿಸುವುದು ಅತ್ಯಂತ ಅಪರೂಪ. ಮುನ್ನೆಚ್ಚರಿಕೆಯಾಗಿ ಯಾರೂ ಹೆಚ್ಚುವರಿ ಪೈಲಟ್‌ಗಳನ್ನು ನಿಯೋಜಿಸುವುದಿಲ್ಲ. ಹಾಗಿದ್ದರೂ ಈ ವಿಮಾನದಲ್ಲಿ ಇಬ್ಬರು ಹೆಚ್ಚುವರಿ ಪೈಲಟ್‌ಗಳು ಸಾಧಾರಣ ಸೀಟಿನಲ್ಲಿ ಪ್ರಯಾಣಿಕರಂತೆ ಕುಳಿತಿದ್ದರು. ವಿಮಾನಯಾನ ಕ್ಷೇತ್ರದಲ್ಲಿ ಇದನ್ನು ‘ಡೆಡ್‌ಹೆಡಿಂಗ್’ ಎನ್ನಲಾಗುತ್ತದೆ.

ಇದನ್ನೂ ಓದಿ: “ಅತ್ಯಂತ ಭಾರಿ ಬೆಲೆ ತೆರಬೇಕಾಗುತ್ತದೆ”: ಇಸ್ರೇಲ್ ಪ್ರಧಾನಿ ನೆತನ್ಯಾಹು ಖಡಕ್ ಎಚ್ಚರಿಕೆ; ಇದು ಇರಾನ್ ಕೈವಾಡ ಎಂದ ಟ್ರಂಪ್

ಏನಿದು ‘ಡೆಡ್‌ಹೆಡಿಂಗ್’ ಪದ್ಧತಿ?:

ವಿಮಾನಯಾನ ಸಂಸ್ಥೆಯೊಂದು ತನ್ನ ಮುಂದಿನ ಬೇರೊಂದು ವಿಮಾನ ಹಾರಾಟಕ್ಕಾಗಿ ಪೈಲಟ್‌ಗಳನ್ನು ಅಥವಾ ವಿಮಾನ ಸಿಬ್ಬಂದಿಯನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ತಲುಪಿಸಬೇಕಿದ್ದಾಗ, ಅವರನ್ನು ಬೇರೊಂದು ನಿಗದಿತ ವಿಮಾನದಲ್ಲಿ ಪ್ರಯಾಣಿಕರಂತೆ ಕಳುಹಿಸುತ್ತದೆ. ‘ಡೆಡ್‌ಹೆಡಿಂಗ್’ ಮಾಡುವ ಪೈಲಟ್‌ಗಳು ಡ್ಯೂಟಿಯಲ್ಲೇ ಇದ್ದಾರೆ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಪೂರ್ಣ ಪ್ರಮಾಣದ ವೇತನ ದೊರೆಯುತ್ತದೆ ಮತ್ತು ಅವರ ಕೆಲಸದ ಸಮಯ ಗಣನೆಗೆ ಬರುತ್ತದೆ.

ಅವರು ಯಾವುದೇ ಕಾಕ್‌ಪಿಟ್ ಕೆಲಸ ಅಥವಾ ವಿಮಾನ ತಪಾಸಣೆ ಮಾಡುವುದಿಲ್ಲ. ಅವರು ಕನ್ಫರ್ಮ್ ಟಿಕೆಟ್‌ನೊಂದಿಗೆ ಪೂರ್ಣ ಯುನಿಫಾರ್ಮ್‌ನಲ್ಲಿ ಸಾಮಾನ್ಯ ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಫ್ಲೈದುಬೈ ಸಂಸ್ಥೆಯು ಇದನ್ನು ದೃಢಪಡಿಸಿದ್ದು, ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ನೆರವಾದ ಸಿಬ್ಬಂದಿ “ಮತ್ತೊಂದು ಕಾರ್ಯಕ್ಕಾಗಿ ಪ್ರಯಾಣಿಸುತ್ತಿದ್ದ ಡ್ಯೂಟಿಯಲ್ಲಿದ್ದ ಫ್ಲೈದುಬೈ ಪೈಲಟ್‌ಗಳು” ಎಂದು ಸ್ಪಷ್ಟಪಡಿಸಿದೆ. ಆ ದಿನ ಅವರಿದ್ದದ್ದು ವಿಮಾನದ 170ಕ್ಕೂ ಹೆಚ್ಚು ಜನರ ಪಾಲಿಗೆ ವರಪ್ರದವಾಯಿತು.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ದೇಶಕ ಮನೋಜ್ ಮಾತು
‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ದೇಶಕ ಮನೋಜ್ ಮಾತು
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ