Justin Trudeau:ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಶೀಘ್ರ ರಾಜೀನಾಮೆ ಸಾಧ್ಯತೆ

|

Updated on: Jan 06, 2025 | 9:01 AM

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಶೀಘ್ರದಲ್ಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ. ದಿ ಗ್ಲೋಬ್ ಮತ್ತು ಮೇಲ್ ವರದಿಯ ಪ್ರಕಾರ, ಬುಧವಾರ ನಡೆಯಲಿರುವ ರಾಷ್ಟ್ರೀಯ ಕಾಕಸ್ ಸಭೆಯ ಮೊದಲು ಟ್ರೂಡೊ ಲಿಬರಲ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ರಾಷ್ಟ್ರೀಯ ಕಾಕಸ್ ಸಭೆಯಲ್ಲಿ ಟ್ರುಡೊ ಬಂಡಾಯ ಎದುರಿಸಬೇಕಾಗಬಹುದು ಎಂದು ಪಕ್ಷಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

Justin Trudeau:ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಶೀಘ್ರ ರಾಜೀನಾಮೆ ಸಾಧ್ಯತೆ
ಜಸ್ಟಿನ್
Image Credit source: Hindustan Times
Follow us on

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಲಿಬರಲ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿರುವ ಕಾರಣ ಈ ವಾರ ತಮ್ಮ ರಾಜೀನಾಮೆಯನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರದಂದು ರಾಷ್ಟ್ರೀಯ ಲಿಬರಲ್ ಪಕ್ಷದ ಕಾಕಸ್‌ಗೆ ಮುಂಚಿತವಾಗಿ ಈ ಪ್ರಕಟಣೆ ಬರಬಹುದು ಎಂದು ಅಂದಾಜಿಸಲಾಗಿದೆ.

ಲಿಬರಲ್ ಪಕ್ಷವು ಹೊಸ ನಾಯಕನನ್ನು ಹುಡುಕುವವರೆಗೆ ಟ್ರುಡೊ ಹಂಗಾಮಿ ಪ್ರಧಾನಿಯಾಗಿ ಉಳಿಯುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಾಸ್ತವವಾಗಿ, ಟ್ರೂಡೊ 2015 ರಲ್ಲಿ ಪ್ರಚಂಡ ವಿಜಯವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಅದರ ನಂತರ, 2019 ಮತ್ತು 2021 ರಲ್ಲೂ ಅವರು ತಮ್ಮ ಪಕ್ಷದ ಲಿಬರಲ್ಸ್ ಅನ್ನು ವಿಜಯದತ್ತ ಮುನ್ನಡೆಸಿದರು.

ಈಗ ಟ್ರುಡೊ ನೇತೃತ್ವದಲ್ಲಿ ಕೆನಡಾದಲ್ಲಿ ತಮ್ಮ ಸೋಲು ಖಚಿತ ಎಂಬ ಭಾವನೆ ಲಿಬರಲ್ ಪಕ್ಷಕ್ಕೆ ಶುರುವಾಗಿದೆ. ಆದ್ದರಿಂದ, ಈಗ ಟ್ರೂಡೊ ಪ್ರಧಾನಿ ಹುದ್ದೆಯನ್ನು ಕಳೆದುಕೊಳ್ಳುವ ಅಪಾಯ ಎದುರಾಗಿದೆ.

ಮತ್ತಷ್ಟು ಓದಿ: ಜಸ್ಟಿನ್ ಟ್ರುಡೊಗೆ ದೊಡ್ಡ ಹೊಡೆತ; ಕೆನಡಾ ಉಪ ಪ್ರಧಾನಿ ರಾಜೀನಾಮೆ

ಸಮೀಕ್ಷೆಗಳ ಪ್ರಕಾರ, ಪ್ರಸ್ತುತ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಪಿಯರೆ ಪೊಯಿಲಿವ್ರೆಗಿಂತ 20 ಪಾಯಿಂಟ್‌ಗಳಿಂದ ಹಿಂದುಳಿದಿದ್ದಾರೆ. ರಾಷ್ಟ್ರೀಯ ಕಾಕಸ್ ಸಭೆಯಲ್ಲಿ ಟ್ರುಡೊ ಬಂಡಾಯ ಎದುರಿಸಬೇಕಾಗಬಹುದು ಎಂದು ಪಕ್ಷಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

ತಕ್ಷಣವೇ ಹುದ್ದೆಗೆ ರಾಜೀನಾಮೆ ನೀಡುತ್ತಾರೆಯೇ ಅಥವಾ ಹೊಸ ನಾಯಕರ ಆಯ್ಕೆಯವರೆಗೆ ಈ ಹುದ್ದೆಯಲ್ಲಿ ಉಳಿಯುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಅವರ ಮೇಲಿನ ಒತ್ತಡವು ಸಾಕಷ್ಟು ಹೆಚ್ಚಾಯಿತು.

ಟ್ರಂಪ್ ಅವರನ್ನು ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದರು. ಈಗ ಟ್ರುಡೊಗೆ ಕ್ಷಣಗಣನೆ ಆರಂಭವಾಗಿದೆ ಎಂದು ಟ್ರಂಪ್ ವಿಜಯದ ನಂತರ ಎಲಾನ್ ಮಸ್ಕ್ ಕೂಡ ಹೇಳಿದ್ದರು.

ಪ್ರಸ್ತುತ ಲಿಬರಲ್ ಪಕ್ಷವು ಕೆನಡಾ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ 153 ಸಂಸದರನ್ನು ಹೊಂದಿದೆ. ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ 338 ಸ್ಥಾನಗಳಿವೆ. ಇದರಲ್ಲಿ ಬಹುಮತವು 170 ಆಗಿದೆ.

ಕೆಲವು ತಿಂಗಳ ಹಿಂದೆ, ಟ್ರೂಡೊ ಸರ್ಕಾರದ ಮಿತ್ರ ಪಕ್ಷವಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ತನ್ನ ಬೆಂಬಲವನ್ನು ಹಿಂಪಡೆದಿತ್ತು. ಎನ್‌ಡಿಪಿ ಖಲಿಸ್ತಾನಿ ಪರ ಕೆನಡಾದ ಸಿಖ್ ಸಂಸದ ಜಗ್ಮೀತ್ ಸಿಂಗ್ ಅವರ ಪಕ್ಷವಾಗಿದೆ.

ಮೈತ್ರಿ ಮುರಿದುಹೋದ ಕಾರಣ, ಟ್ರೂಡೊ ಸರ್ಕಾರವು ಅಲ್ಪಮತಕ್ಕೆ ಇಳಿಯಿತು. ಆದಾಗ್ಯೂ, ಅಕ್ಟೋಬರ್ 1 ರಂದು ನಡೆದ ಬಹುಮತದ ಪರೀಕ್ಷೆಯಲ್ಲಿ, ಟ್ರುಡೊ ಅವರ ಲಿಬರಲ್ ಪಕ್ಷವು ಮತ್ತೊಂದು ಪಕ್ಷದ ಬೆಂಬಲವನ್ನು ಪಡೆದುಕೊಂಡಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ