ನಯಾಗರಾ ಜಲಪಾತದ ಬಳಿ ಕಾರು ಸ್ಫೋಟ, ಇಬ್ಬರು ಸಾವು

|

Updated on: Nov 23, 2023 | 9:43 AM

ಅಮೆರಿಕದ ಈಶಾನ್ಯದಲ್ಲಿರುವ ನಯಾಗರಾ ಜಲಪಾತದ ಬಳಿ ಕಾರು ಸ್ಫೋಟಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ನಯಾಗರಾ ಜಲಪಾತದ ಬಳಿ ಯುಎಸ್-ಕೆನಡಾ ಗಡಿ ಬಳಿ ಘಟನೆ ಸಂಭವಿಸಿದೆ, ಗಡಿಯನ್ನು ಸಧ್ಯದ ಮಟ್ಟಿಗೆ ಮುಚ್ಚಲಾಗಿದೆ. ಸ್ಫೋಟದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಗುರುತು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ನಯಾಗರಾ ಜಲಪಾತದ ಬಳಿ ಕಾರು ಸ್ಫೋಟ, ಇಬ್ಬರು ಸಾವು
ಕಾರು ಸ್ಫೋಟಗೊಂಡ ಸ್ಥಳ
Image Credit source: India TV
Follow us on

ಅಮೆರಿಕದ ಈಶಾನ್ಯದಲ್ಲಿರುವ ನಯಾಗರಾ ಜಲಪಾತದ ಬಳಿ ಕಾರು ಸ್ಫೋಟಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ನಯಾಗರಾ ಜಲಪಾತದ ಬಳಿ ಯುಎಸ್-ಕೆನಡಾ ಗಡಿ ಬಳಿ ಘಟನೆ ಸಂಭವಿಸಿದೆ, ಗಡಿಯನ್ನು ಸಧ್ಯದ ಮಟ್ಟಿಗೆ ಮುಚ್ಚಲಾಗಿದೆ. ಸ್ಫೋಟದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಗುರುತು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ನಯಾಗರಾ ಜಲಪಾತದ ಸಮೀಪವಿರುವ ಯುಎಸ್-ಕೆನಡಾ ಚೆಕ್‌ಪಾಯಿಂಟ್‌ನಲ್ಲಿ ಬುಧವಾರ ಇದ್ದಕ್ಕಿದ್ದಂತೆ ಕಾರೊಂದು ಬೆಂಕಿಯ ಚೆಂಡಿಗೆ ಸಿಡಿದು ಅದರಲ್ಲಿದ್ದ ಇಬ್ಬರು ಸಾವನ್ನಪ್ಪಿದರು. ಇದು ಪ್ರಮುಖ ರಜೆಯ ಮುನ್ನಾದಿನದಂದು ಭಾರೀ ಭದ್ರತೆ ಕಲ್ಪಿಸಲಾಗಿದೆ.

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ನ್ಯೂಯಾರ್ಕ್ ನಗರದ ವಾಯುವ್ಯಕ್ಕೆ 400 ಮೈಲಿ (640 ಕಿಲೋಮೀಟರ್) ಚೆಕ್‌ಪಾಯಿಂಟ್‌ನಲ್ಲಿ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಭಯೋತ್ಪಾದಕ ದಾಳಿ ಎಂದು ಹೇಳಲು ಅಂತಹ ಯಾವುದೇ ಕುರುಹು ಪತ್ತೆಯಾಗಿಲ್ಲ, ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ಓದಿ:ವಿಶಾಖಪಟ್ಟಣಂ: ಲಾರಿಗೆ ಡಿಕ್ಕಿ ಹೊಡೆದ ಆಟೋ, 8 ಮಕ್ಕಳಿಗೆ ಗಂಭೀರ ಗಾಯ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರು 100 ಕಿ.ಮೀ ವೇಗದಲ್ಲಿತ್ತು, ಗಡಿಗೆ ಬರುತ್ತಿದ್ದಂತೆ ಸ್ಫೋಟಗೊಂಡು ಆಕಾಶದೆತ್ತರಕ್ಕೆ ಸಿಡಿಯಿತು , ಬೆಂಕಿಯ ಜ್ವಾಲೆಯಲ್ಲಿ ಇಬ್ಬರು ಬೆಂದು ಹೋಗಿದ್ದಾರೆ. ಎಲ್ಲೆಲ್ಲೂ ಹೊಗೆ ಆವರಿಸಿತ್ತು.

ನಯಾಗರಾ ನದಿಗೆ ಅಡ್ಡಲಾಗಿ ಎರಡು ದೇಶಗಳನ್ನು ಸಂಪರ್ಕಿಸುವ ರೈನ್ಬೋ ಸೇತುವೆಯ ಯುಎಸ್ ಬದಿಯಲ್ಲಿ ಸ್ಫೋಟ ಸಂಭವಿಸಿದೆ. ಪಶ್ಚಿಮ ನ್ಯೂಯಾರ್ಕ್ ಮತ್ತು ಒಂಟಾರಿಯೊ ನಡುವಿನ ಇತರ ಮೂರು ಸೇತುವೆಗಳನ್ನು ಮುನ್ನೆಚ್ಚರಿಕೆಯಾಗಿ ತ್ವರಿತವಾಗಿ ಮುಚ್ಚಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ