ಇಬ್ಬರು ಮಹಿಳೆಯರಿಗೆ ಈ ಬಾರಿಯ ರಸಾಯನಿಕ ಶಾಸ್ತ್ರ ನೊಬೆಲ್‍ ಪ್ರಶಸ್ತಿ

|

Updated on: Oct 07, 2020 | 5:06 PM

ಈ ವರ್ಷ 2020ರ ನೊಬೆಲ್‍ ಬಹುಮಾನಗಳು ಪ್ರಕಟವಾಗತೊಡಗಿ ಎರಡು ದಿನಗಳಾದವು. ಇಂದು ರಸಾಯನಿಕ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ. ಈ ವರ್ಷದ ರಸಾಯನಿಕ ವಿಜ್ಞಾನದ ಪ್ರಶಸ್ತಿಯನ್ನು ಇಬ್ಬರು ಮಹಿಳಾ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ರಸಾಯನ ವಿಜ್ಞಾನದ ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್ (Emmanuelle Charpentier)‌ ಮತ್ತು ಪ್ರೊ ಜೆನಿಫರ್‌ ಡೌನಾ ( Jennifer A. Doudna) ಅವರು “ಜೀನೊಮ್‌ ಎಡಿಟಿಂಗ್‌ ಕುರಿತಾದ ವೈಧಾನಿಕತೆಯ ಸಂಶೋಧನೆಗಾಗಿ ರಸಾಯನಿಕ ವಿಜ್ಞಾನದ ನೊಬೆಲ್‍ ಗಳಿಸಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್‌ ಅವರು […]

ಇಬ್ಬರು ಮಹಿಳೆಯರಿಗೆ ಈ ಬಾರಿಯ ರಸಾಯನಿಕ ಶಾಸ್ತ್ರ ನೊಬೆಲ್‍ ಪ್ರಶಸ್ತಿ
Follow us on

ಈ ವರ್ಷ 2020ರ ನೊಬೆಲ್‍ ಬಹುಮಾನಗಳು ಪ್ರಕಟವಾಗತೊಡಗಿ ಎರಡು ದಿನಗಳಾದವು. ಇಂದು ರಸಾಯನಿಕ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ. ಈ ವರ್ಷದ ರಸಾಯನಿಕ ವಿಜ್ಞಾನದ ಪ್ರಶಸ್ತಿಯನ್ನು ಇಬ್ಬರು ಮಹಿಳಾ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.

ರಸಾಯನ ವಿಜ್ಞಾನದ ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್ (Emmanuelle Charpentier)‌ ಮತ್ತು ಪ್ರೊ ಜೆನಿಫರ್‌ ಡೌನಾ ( Jennifer A. Doudna) ಅವರು “ಜೀನೊಮ್‌ ಎಡಿಟಿಂಗ್‌ ಕುರಿತಾದ ವೈಧಾನಿಕತೆಯ ಸಂಶೋಧನೆಗಾಗಿ ರಸಾಯನಿಕ ವಿಜ್ಞಾನದ ನೊಬೆಲ್‍ ಗಳಿಸಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್‌ ಅವರು ಮೂಲತಃ ಫ್ರಾನ್ಸ್‌ ದೇಶದ ಮಹಿಳಾ ವಿಜ್ಞಾನಿ, ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಸಂಸ್ಥೆಯು ಇವರ ಸದ್ಯದ ಕಾರ್ಯ ಕ್ಷೇತ್ರ. ಪ್ರೊ ಜೆನಿಫರ್‌ ಡೌನಾ ಅವರು ಜೀವಿ ರಸಾಯನಿಕ ವಿಜ್ಞಾನಿ, ಸದ್ಯ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.