ಬೀಜಿಂಗ್: ಕಳೆದ ಮೂರುವರೆ ತಿಂಗಳ ಹಿಂದೆಯಷ್ಟೇ ಮಹಾಮಾರಿ ಕೊರೊನಾ ವೈರಸ್ನ ತವರೂರು ಚೀನಾದಲ್ಲಿ ಪವಾಡವೇ ಸೃಷ್ಟಿಯಾಗಿತ್ತು. ಸೋಂಕಿತರಿಗಾಗಿಯೇ ಕೇವಲ 10ದಿನದಲ್ಲಿ 1 ಸಾವಿರ ಹಾಸಿಗೆ ಇರುವ ಬೃಹತ್ ಆಸ್ಪತ್ರೆಯನ್ನು ಯುದ್ಧೋಪಾದಿಯಲ್ಲಿ ಚೀನಾ ನಿರ್ಮಿಸಿತ್ತು.
ಚೀನಾದ ಪವಾಡವನ್ನು ಕಂಡು ಇಡೀ ಜಗತ್ತೇ ಬೆರಗಾಗಿತ್ತು. ಆದ್ರೆ ಈಗ ಇದೀಗ ಡ್ರ್ಯಾಗನ್ ನಾಡು ಚೀನಾದಲ್ಲಿ ಕೊವಿಡ್ -19 ಕೇಸ್ಗಳು ಎಲ್ಲಾ ನಿಯಂತ್ರಣಕ್ಕೆ ಬಂದ ಕಾರಣ ಆಸ್ಪತ್ರೆಯನ್ನು ಮುಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದ ಕಾರಣ ಇತ್ತೀಚೆಗಷ್ಟೇ ಚೀನಾದ ವುಹಾನ್ನಲ್ಲಿ 16 ತಾತ್ಕಾಲಿಕ ಆಸ್ಪತ್ರೆಗಳನ್ನು ಮುಚ್ಚಲಾಗಿದೆ. ಬೀಜಿಂಗ್‌ನ ಕ್ಸಿಯೋಟಾಂಗ್‌ಶಾನ್ ಆಸ್ಪತ್ರೆಯಲ್ಲಿ ಕೊವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಆಸ್ಪತ್ರೆಯಲ್ಲೂ ಎಲ್ಲಾ ಕೊರೊನಾ ಸೋಂಕಿತರನ್ನು ಡಿಸ್ಚಾರ್ಜ್ ಮಾಡಲಾಗಿದೆ. 2003ರಲ್ಲಿ SARS ರೋಗಿಗಳನ್ನು ಈ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಮೊನ್ನೆ ಕೊರೊನಾ ಅಂತಿಮ ಸೋಂಕಿತ ವುಹಾನ್ ಆಸ್ಪತ್ರೆಯಿಂದ ಹೊರಬಂದಿದ್ದಾನೆ. ಹಾಗಾಗಿ ವುಹಾನ್ ಆಸ್ಪತ್ರೆಯಲ್ಲಿ ಯಾವುದೇ ಕೊರೊನಾ ಸೋಂಕಿತ ವ್ಯಕ್ತಿ ಇಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ವುಹಾನ್ನ ಈ ಬೃಹತ್ ಆಸ್ಪತ್ರೆ ಈಗ ಕೊರೊನಾ ಸೋಂಕಿನಿಂದ ಮುಕ್ತ ಮುಕ್ತ ಮುಕ್ತ.
Published On - 12:55 pm, Wed, 29 April 20