ಕೊರೊನಾ ವೈರಸ್: 2800 ಬಲಿ, ಸೋಂಕು ತಗುಲಿರುವವರ ಸಂಖ್ಯೆ 6 ಲಕ್ಷ

|

Updated on: Feb 27, 2020 | 10:36 AM

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಮತ್ತಷ್ಟು ಡೆಡ್ಲಿಯಾಗುತ್ತಿದೆ. ಚೀನಾವೊಂದರಲ್ಲೇ ಸುಮಾರು 2800 ಜರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವುದರ ಜತೆಗೆ, ಸೋಂಕು ತಗುಲಿರುವವರ ಸಂಖ್ಯೆಯೂ 6 ಲಕ್ಷ ದಾಟಿದೆ. ತಾಯ್ನಾಡಿಗೆ ಮರಳಿದ ಭಾರತೀಯರು: ಇನ್ನು ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದವರ ಪೈಕಿ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಹಡಗಿನಲ್ಲಿದ್ದ 119 ಭಾರತೀಯರು ಹಾಗೂ ಐವರು ವಿದೇಶಿಗರು ದೆಹಲಿಗೆ ವಾಪಸ್ ಆಗಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯರನ್ನ ಮರಳಿ ತಾಯ್ನಾಡಿಗೆ ಕರೆತರಲಾಗಿದೆ. ನವಾಜ್ ಷರೀಫ್​ಗೆ ಮತ್ತೆ […]

ಕೊರೊನಾ ವೈರಸ್: 2800 ಬಲಿ, ಸೋಂಕು ತಗುಲಿರುವವರ ಸಂಖ್ಯೆ 6 ಲಕ್ಷ
Follow us on

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಮತ್ತಷ್ಟು ಡೆಡ್ಲಿಯಾಗುತ್ತಿದೆ. ಚೀನಾವೊಂದರಲ್ಲೇ ಸುಮಾರು 2800 ಜರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವುದರ ಜತೆಗೆ, ಸೋಂಕು ತಗುಲಿರುವವರ ಸಂಖ್ಯೆಯೂ 6 ಲಕ್ಷ ದಾಟಿದೆ.

ತಾಯ್ನಾಡಿಗೆ ಮರಳಿದ ಭಾರತೀಯರು:
ಇನ್ನು ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದವರ ಪೈಕಿ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಹಡಗಿನಲ್ಲಿದ್ದ 119 ಭಾರತೀಯರು ಹಾಗೂ ಐವರು ವಿದೇಶಿಗರು ದೆಹಲಿಗೆ ವಾಪಸ್ ಆಗಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯರನ್ನ ಮರಳಿ ತಾಯ್ನಾಡಿಗೆ ಕರೆತರಲಾಗಿದೆ.

ನವಾಜ್ ಷರೀಫ್​ಗೆ ಮತ್ತೆ ಸಂಕಷ್ಟ
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್​ಗೆ ಮತ್ತೊಂದು ಸಂಕಟ ಎದುರಾಗಿದೆ. ಜಾಮೀನಿನ ಮೇಲೆ ರಿಲೀಸ್ ಆಗಿ ಲಂಡನ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಜ್ ಷರೀಫ್, ಈ ಬಗ್ಗೆ ಸರಿಯಾದ ದಾಖಲೆ ಸಲ್ಲಿಸಲು ವಿಫಲರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಪಾಕ್ ಸರ್ಕಾರ ಷರೀಫ್ ತಲೆಮರೆಸಿಕೊಂಡಿದ್ದಾರೆ ಅಂತಾ ಹೇಳಿದೆ.

ದ್ವೀಪ ರಾಷ್ಟ್ರದಲ್ಲಿ ಮತ್ತೊಮ್ಮೆ ಪ್ರವಾಹ:
ಇತ್ತೀಚೆಗಷ್ಟೇ ಭಾರಿ ಮಳೆಯಿಂದ ಪ್ರವಾಹಕ್ಕೆ ಸಿಲುಕಿದ್ದ ಇಂಡೋನೇಷಿಯಾದಲ್ಲಿ ಮತ್ತೆ, ನೆರೆ ಹಾವಳಿ ಶುರುವಾಗಿದೆ. ಪ್ರವಾಹದ ಪರಿಣಾಮ ಲಕ್ಷಾಂತರ ಮಂದಿ ಸೂರು ಕಳೆದುಕೊಂಡಿದ್ದು, ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ. ಇನ್ನೂ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ.