ಕೈಕೊಟ್ಟ ಪ್ರಯೋಗ: ತಾನೇ ನಿರ್ಮಿಸಿದ ರಾಕೆಟ್​ನಿಂದ ಬಿದ್ದು ವ್ಯಕ್ತಿ ಸಾವು!

|

Updated on: Feb 24, 2020 | 8:25 AM

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲೇ ನಿರ್ಮಿಸಿದ ರಾಕೆಟ್​ನಿಂದ ಹಾರಲು ಹೋಗಿ, ಪ್ರಾಣ ಕಳೆದುಕೊಂಡಿದ್ದಾನೆ. ರಾಕೆಟ್​ನಿಂದ ಪ್ರಯೋಗಕ್ಕೆ ಮುಂದಾಗಿದ್ದ ವೇಳೆ, ಕ್ರಾಶ್ ಆಗಿದೆ. ನೂರಾರು ಅಡಿ ಎತ್ತರದಿಂದ ಬಿದ್ದ ಪರಿಣಾಮ ಕ್ಷಣಮಾತ್ರದಲ್ಲೇ ಆಗಸದಿಂದ ಕೆಳಗೆ ಬಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ನಿಯಂತ್ರಣಕ್ಕೆ ಸಿಗದ ‘ಕೊರೊನಾ’: ಕೊರೊನಾ ವೈರಸ್ ಚೀನಾದ ಅತಿದೊಡ್ಡ ಆರೋಗ್ಯ ತುರ್ತು ಪರಿಸ್ಥಿತಿ ಅಂತಾ ಚೀನಾ ಅಧ್ಯಕ್ಷ ಜಿನ್​ಪಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕು ತೀವ್ರವಾಗಿ ಹಬ್ಬುತ್ತಿದ್ದು, ಈಗಾಗಲೇ ಸುಮಾರು 2 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. […]

ಕೈಕೊಟ್ಟ ಪ್ರಯೋಗ: ತಾನೇ ನಿರ್ಮಿಸಿದ ರಾಕೆಟ್​ನಿಂದ ಬಿದ್ದು ವ್ಯಕ್ತಿ ಸಾವು!
Follow us on

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲೇ ನಿರ್ಮಿಸಿದ ರಾಕೆಟ್​ನಿಂದ ಹಾರಲು ಹೋಗಿ, ಪ್ರಾಣ ಕಳೆದುಕೊಂಡಿದ್ದಾನೆ. ರಾಕೆಟ್​ನಿಂದ ಪ್ರಯೋಗಕ್ಕೆ ಮುಂದಾಗಿದ್ದ ವೇಳೆ, ಕ್ರಾಶ್ ಆಗಿದೆ. ನೂರಾರು ಅಡಿ ಎತ್ತರದಿಂದ ಬಿದ್ದ ಪರಿಣಾಮ ಕ್ಷಣಮಾತ್ರದಲ್ಲೇ ಆಗಸದಿಂದ ಕೆಳಗೆ ಬಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

ನಿಯಂತ್ರಣಕ್ಕೆ ಸಿಗದ ‘ಕೊರೊನಾ’:
ಕೊರೊನಾ ವೈರಸ್ ಚೀನಾದ ಅತಿದೊಡ್ಡ ಆರೋಗ್ಯ ತುರ್ತು ಪರಿಸ್ಥಿತಿ ಅಂತಾ ಚೀನಾ ಅಧ್ಯಕ್ಷ ಜಿನ್​ಪಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕು ತೀವ್ರವಾಗಿ ಹಬ್ಬುತ್ತಿದ್ದು, ಈಗಾಗಲೇ ಸುಮಾರು 2 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿನ್​ಪಿಂಗ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಉಗ್ರ ಪಡೆಯಿಂದ ರಾಕೆಟ್ ದಾಳಿ..?
ಗಾಜಾದಿಂದ ಇಸ್ರೆಲ್ ಮೇಲೆ ಮತ್ತೆ ರಾಕೆಟ್ ದಾಳಿ ನಡೆದಿದೆ. ಈ ದಾಳಿಯ ಹಿಂದೆ ಇರಾನ್ ಬೆಂಬಲಿತ ಉಗ್ರ ಪಡೆ ಕೈವಾಡ ಇದೆ ಎಂದು ಆರೋಪಿಸಲಾಗುತ್ತಿದೆ. ಸುಮಾರು 30ಕ್ಕೂ ಹೆಚ್ಚು ರಾಕೆಟ್​ಗಳನ್ನ ಉಡಾಯಿಸಲಾಗಿದ್ದು, ಈ ಬಗ್ಗೆ ಇಸ್ರೆಲ್​ನಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

‘ದ್ವೀಪರಾಷ್ಟ್ರ’ದಲ್ಲಿ ನಿಲ್ಲದ ಹಿಂಸಾಚಾರ:
ದ್ವೀಪರಾಷ್ಟ್ರ ಹೈಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಪ್ರತಿಭಟಾನಾಕಾರರನ್ನ ನಿಯಂತ್ರಿಸಿ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನು ಹಿಂಸಾಚಾರದಲ್ಲಿ ತೊಡಗಿರುವ ಕೆಲವರ ಮೇಲೆ ಗುಂಡು ಹಾರಿಸಲಾಗಿದೆ. ಇದು ಪ್ರತಿಭಟನಾಕಾರರನ್ನ ಮತ್ತಷ್ಟು ಕೆರಳುವಂತೆ ಮಾಡಿದೆ.

Published On - 8:25 am, Mon, 24 February 20