AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆ ವರನ ವೇಷ ಹಾಕ್ತಾಳೆ, ಪಾರ್ಟಿ, ಸಂಗೀತ, ನೃತ್ಯ ಎಲ್ಲವೂ ರಿಯಲ್, ಪಾಕಿಸ್ತಾನದಲ್ಲಿ ನಡೆಯುತ್ತೆ ಫೇಕ್ ಮದುವೆ

ಮದುವೆ(Marriage)ಯೆಂಬುದು ಗಂಡು-ಹೆಣ್ಣಿನ ನಡುವಿನ ಪವಿತ್ರವಾದ ಬಂಧನ. ಮದುವೆ ಎರಡು ಮನಸ್ಸುಗಳು, ಎರಡು ಆತ್ಮಗಳು, ಎರಡು ದೇಹಗಳನ್ನು ಬೆಸೆಯುತ್ತದೆ. ಆದರೆ ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ಮದುವೆಗಳು ಹೆಚ್ಚು ಸದ್ದು ಮಾಡುತ್ತಿವೆ. ಕುಟುಂಬದ ಒತ್ತಡಗಳಿಲ್ಲದೆ ಮದುವೆ ಹೇಗೆ ನಡೆಯುತ್ತದೆ ಎಂಬುದನ್ನು ಆನಂದಿಸಲು ಈ ನಕಲಿ ಮದುವೆಗಳನ್ನು ಮಾಡಲಾಗುತ್ತದೆ. ಅಲ್ಲಿ ಮಹಿಳೆಯೇ ವರನ ಪಾತ್ರವಹಿಸುತ್ತಾಳೆ, ಆತನ ರೀತಿಯಲ್ಲೇ ವಸ್ತ್ರಗಳನ್ನು ತೊಡುತ್ತಾಳೆ. ಪಾಕಿಸ್ತಾನಿ ರೀತಿಯಲ್ಲಿ ಮೆಹಂದಿ ಕಾರ್ಯಕ್ರಮಗಳು ನಡೆಯುತ್ತವೆ, ಸಂಗೀತ, ನೃತ್ಯಗಳು ಇರುತ್ತದೆ. ಆದರೆ ಇದು ಸಲಿಂಗ ಮದುವೆಯಲ್ಲ.

ಮಹಿಳೆ ವರನ ವೇಷ ಹಾಕ್ತಾಳೆ, ಪಾರ್ಟಿ, ಸಂಗೀತ, ನೃತ್ಯ ಎಲ್ಲವೂ ರಿಯಲ್, ಪಾಕಿಸ್ತಾನದಲ್ಲಿ ನಡೆಯುತ್ತೆ ಫೇಕ್ ಮದುವೆ
ನಕಲಿ ಮದುವೆImage Credit source: DW Asia
ನಯನಾ ರಾಜೀವ್
|

Updated on:Dec 14, 2025 | 9:54 AM

Share

ಇಸ್ಲಾಮಾಬಾದ್, ಡಿಸೆಂಬರ್ 14: ಮದುವೆ(Marriage)ಯೆಂಬುದು ಗಂಡು-ಹೆಣ್ಣಿನ ನಡುವಿನ ಪವಿತ್ರವಾದ ಬಂಧನ. ಮದುವೆ ಎರಡು ಮನಸ್ಸುಗಳು, ಎರಡು ಆತ್ಮಗಳು, ಎರಡು ದೇಹಗಳನ್ನು ಬೆಸೆಯುತ್ತದೆ. ಆದರೆ ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ಮದುವೆಗಳು ಹೆಚ್ಚು ಸದ್ದು ಮಾಡುತ್ತಿವೆ. ಕುಟುಂಬದ ಒತ್ತಡಗಳಿಲ್ಲದೆ ಮದುವೆ ಹೇಗೆ ನಡೆಯುತ್ತದೆ ಎಂಬುದನ್ನು ಆನಂದಿಸಲು ಈ ನಕಲಿ ಮದುವೆಗಳನ್ನು ಮಾಡಲಾಗುತ್ತದೆ. ಅಲ್ಲಿ ಮಹಿಳೆಯೇ ವರನ ಪಾತ್ರವಹಿಸುತ್ತಾಳೆ, ಆತನ ರೀತಿಯಲ್ಲೇ ವಸ್ತ್ರಗಳನ್ನು ತೊಡುತ್ತಾಳೆ. ಪಾಕಿಸ್ತಾನಿ ರೀತಿಯಲ್ಲಿ ಮೆಹಂದಿ ಕಾರ್ಯಕ್ರಮಗಳು ನಡೆಯುತ್ತವೆ, ಸಂಗೀತ, ನೃತ್ಯಗಳು ಇರುತ್ತದೆ. ಆದರೆ ಇದು ಸಲಿಂಗ ಮದುವೆಯಲ್ಲ.

ಹಳದಿ ಕಾರ್ಯಕ್ರಮವೂ ಇರುತ್ತೆ. ಸಾಮಾಜಿಕ ಒತ್ತಡಗಳಿಂದ ಮುಕ್ತವಾಗಿ, ಮದುವೆ ಸಮಾರಂಭವನ್ನು ಆನಂದಿಸುತ್ತಾರೆ.ಈ ಪ್ರವೃತ್ತಿ 2023 ರಿಂದ ವೇಗವನ್ನು ಪಡೆಯುತ್ತಿದೆ. 2023 ರಲ್ಲಿ ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ (LUMS) ಆಯೋಜಿಸಿದ್ದ ನಕಲಿ ವಿವಾಹವು ರಾಷ್ಟ್ರೀಯ ಮತ್ತು ಜಾಗತಿಕ ಮಾಧ್ಯಮಗಳ ಗಮನ ಸೆಳೆದ ನಂತರ ಇಂತಹ ಕಾರ್ಯಕ್ರಮಗಳ ಜನಪ್ರಿಯತೆ ಹೆಚ್ಚಾಯಿತು.

ಈ ಪ್ರವೃತ್ತಿ ಯುವಕರು ಮತ್ತು ಜನರಲ್ಲಿ ಜನಪ್ರಿಯತೆಯನ್ನು ಗಳಿಸಿದರೂ, ಆನ್‌ಲೈನ್‌ನಲ್ಲಿ ಗಮನಾರ್ಹ ಟೀಕೆ ಮತ್ತು ಪ್ರತಿಕ್ರಿಯೆಗೆ ಕಾರಣವಾಯಿತು. ಘಟನೆಯ ದೃಶ್ಯಗಳು ವೈರಲ್ ಆದ ನಂತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಟ್ರೋಲಿಂಗ್ ಎದುರಿಸುತ್ತಿದ್ದಾರೆ ಎಂದು LUMS ವಿದ್ಯಾರ್ಥಿ ಪರಿಷತ್ತಿನ ಮಾಜಿ ಅಧ್ಯಕ್ಷ ಸಾಯಿರಾಮ್ ಹೆಚ್. ಮಿರಾನ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: ‘ನನಗೆ ನ್ಯಾಯ ಬೇಕು’: ಮತ್ತೊಂದು ಮದುವೆಗೆ ಸಿದ್ಧನಾಗಿದ್ದ ಶಿಕ್ಷಕನಿಗೆ ಶಾಕ್​​​ ಕೊಟ್ಟ ಯುವತಿ

ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಮತ್ತು ನಕಲಿ ವಿವಾಹ ಸಮಾರಂಭವು ಕೇವಲ ಖುಷಿಗಾಗಿ ಆಯೋಜಿಸಲಾಗುತ್ತದೆ.

ಈ ನಕಲಿ ವಿವಾಹ ಕಾರ್ಯಕ್ರಮಗಳ ಪ್ರಮುಖ ಆಕರ್ಷಣೆಯೆಂದರೆ ಸಮಾಜದ ಒತ್ತಡ ಅಥವಾ ಕುಟುಂಬದ ಮೇಲ್ವಿಚಾರಣೆಯಿಲ್ಲದೆ ವಿವಾಹ ಸಂಭ್ರಮವನ್ನು ಆನಂದಿಸುವ ಅವಕಾಶ.ಇದು ಮಹಿಳೆಯರಿಗೆ ಸಂತಸದ ವಿಚಾರ. ಇದು ಹೆಚ್ಚಿನದಾಗಿ ಹೆಣ್ಣುಮಕ್ಕಳಿಗಾಗಿಯೇ ನಡೆಸಲಾಗುತ್ತದೆ ಎಂದರೆ ತಪ್ಪಿಲ್ಲ. ಹಾಡು, ನೃತ್ಯ ಎಲ್ಲವೂ ಅವರಿಗಾಗಿಯೇ ನಡೆಯುತ್ತದೆ. ಈವೆಂಟ್ ಕ್ಯುರೇಟರ್ ಅಕೀಲ್ ಮುಹಮ್ಮದ್ ಪಾಕಿಸ್ತಾನದ ನಕಲಿ ವಿವಾಹಗಳನ್ನು ನ್ಯೂಯಾರ್ಕ್ ನಗರದಲ್ಲಿ ನಡೆಯುವ ಮೆಟ್ ಗಾಲಾಕ್ಕೆ ಹೋಲಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:52 am, Sun, 14 December 25