ರೀಲ್ಸ್ ಹುಚ್ಚಿನಲ್ಲಿ ಮದುವೆಯಾಗಿರುವುದನ್ನು ಮರೆತು ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಬೆಂಗಳೂರಿನ ಹೆಚ್‌ಎಸ್‌ಆರ್ ಠಾಣೆಯ ಪೊಲೀಸ್ ಚಾಲಕ ರಾಘವೇಂದ್ರ ಜತೆ ಮೈಸೂರು ಮೂಲದ ಮೋನಿಕಾ ಪರಾರಿಯಾಗಿದ್ದಾರೆ. 12 ವರ್ಷದ ಮಗ ಹಾಗೂ ಎರಡನೇ ಪತಿಯನ್ನು ಹೊಂದಿದ್ದ ಮೋನಿಕಾ, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ರಾಘವೇಂದ್ರನೊಂದಿಗೆ ಜೂನ್‌ನಲ್ಲಿ ಸ್ನೇಹ ಬೆಳೆಸಿದ್ದರು. ಇಬ್ಬರೂ ರೀಲ್ಸ್ ಮಾಡಿದ್ದು, ಈಗ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು, ಡಿ.13: ಮೈಸೂರು ಮೂಲದ ಮೋನಿಕಾ ಎಂಬ ಮಹಿಳೆ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರನ ಪರಾರಿಯಾಗಿದ್ದಾಳೆ. ರೀಲ್ಸ್ ಮಾಡುತ್ತ ಕಾನ್ಸ್ ಟೇಬಲ್ ಜತೆಗೆ ಜಾಲಿ ಮಾಡುತ್ತಿದ್ದ ಮೋನಿಕಾ, ಇದೀಗ ಗಂಡನಿಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ. ಈಕೆಗೆ 12 ವರ್ಷದ ಮಗ ಕೂಡ ಇದ್ದ, ನನ್ನ ಗಂಡ ಸರಿ ಇಲ್ಲ, ಅವನಿಗೆ ಬುದ್ಧಿ ಹೇಳಿ ಎಂದು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಗಂಡ ಪೊಲೀಸ್ ಠಾಣೆಗ ಹೋಗುತ್ತಿದ್ದಂತೆ ಮೋನಿಕಾ ಮನೆಯಿಂದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣ ಜತೆಗೆ ಎಸ್ಕೇಪ್ ಆಗಿದ್ದಾಳೆ. ಇದೀಗ ಪೊಲೀಸರಿಗೆ ಗಂಡ ಮೋನಿಕಾ ವಿರುದ್ಧ ದೂರು ನೀಡಿದ್ದಾನೆ. ಇನ್ನು ಈ ವಿಚಾರ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ರಾಘವೇಂದ್ರನನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

