ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ, ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್
ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ 'ಬ್ಯಾಸ್ಟಿಯನ್' ಪಬ್‌ನಲ್ಲಿ ಉದ್ಯಮಿ ಸತ್ಯ ನಾಯ್ಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅತಿಯಾದ ಮದ್ಯಪಾನ ಮಾಡಿ, ಸರ್ವಿಸ್ ವಿಚಾರದಲ್ಲಿ ಗಲಾಟೆ ಸೃಷ್ಟಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸತ್ಯ ನಾಯ್ಡು ಮಾಜಿ ಬಿಗ್ ಬಾಸ್ ಸ್ಪರ್ಧಿ ಪತಿಯಾಗಿದ್ದಾರೆ. ಇದೀಗ ಗಲಾಟೆ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು, ಡಿ.13: ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಒಡೆತನದ ‘ಬ್ಯಾಸ್ಟಿಯನ್’ ಪಬ್‌ನಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ನಿರೂಪಕಿಯ ಮಾಜಿ ಪತಿ ಹಾಗೂ ಉದ್ಯಮಿ ಸತ್ಯ ನಾಯ್ಡು ಗುರುವಾರದಂದು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಸತ್ಯ ನಾಯ್ಡು ಪಬ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸರ್ವಿಸ್ ವಿಚಾರವಾಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವೇಳೆ ಸತ್ಯ ನಾಯ್ಡು ಅತಿಯಾಗಿ ಮದ್ಯಪಾನ ಮಾಡಿದ್ದರು. ಇದೀಗ ಪೊಲೀಸರು ಸ್ವತಃ ಪಬ್ಗೆ ಬಂದು ಮಾಹಿತಿ ಕಲೆಹಾಕಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಈ ಗಲಾಟೆ ಬಗ್ಗೆ ವಿಡಿಯೋವೊಂದು ಸಿಕ್ಕಿದೆ. ಆ ವಿಡಿಯೋದ ಆಧಾರ ಮೇಲೆ ತನಿಖೆ ಶುರು ಮಾಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

