ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ತುಮಕೂರಿನ ಹೆಗ್ಗೆರೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು.ಪರಮೇಶ್ವರ್ ಸಿಎಂ ಆಗಲಿ ಅನ್ನೋ ಆಸೆ ನನಗೆ ಇದೆ. ನಾನು ಮಂತ್ರಿಯಾದ ಮೇಲೆ ಮೊದಲು ಕರೆ ಮಾಡಿದ್ದು ಪರಮೇಶ್ವರ್ ಎಂದು ಗೃಹ ಸಚಿವರ ಪರ ವಿ.ಸೋಮಣ್ಣ ಬ್ಯಾಟ್ ಬೀಸಿದ್ದಾರೆ.
ತುಮಕೂರು, ಡಿಸೆಂಬರ್ 13: ಗೃಹ ಸಚಿವ ಜಿ. ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ತುಮಕೂರಿನ ಹೆಗ್ಗೆರೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಎಲ್ಲೋ ಒಂದು ಕಡೆ ಸಿಎಂ ಆಗಲಿ ಅನ್ನೋ ಆಸೆ ನನಗೆ ಇದೆ. ನನ್ನೊಬ್ಬನ ಆಸೆ ಅನ್ನೋದಕ್ಕಿಂತ ಜಿಲ್ಲೆಯ ಜನರಿಗೆ ಆಸೆ ಇದೆ. ನಾನು ಮಂತ್ರಿಯಾದ ಮೇಲೆ ಮೊದಲು ಕರೆ ಮಾಡಿದ್ದು ಪರಮೇಶ್ವರ್ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
