ಆರೋಗ್ಯ ಸಚಿವರಿಗೂ ತಗುಲಿತು ಡೆಡ್ಲಿ ಕೊರೊನಾ ವೈರಸ್!

|

Updated on: Feb 26, 2020 | 8:35 AM

ಭೀಕರ ಕೊರೊನಾ ವೈರಸ್ ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವ ಬೆನ್ನಲ್ಲೇ, ಅಮೆರಿಕದ ಬದ್ಧ ವೈರಿ ಇರಾನ್​ನಲ್ಲೂ ತನ್ನ ಹಾವಳಿ ಶುರುಮಾಡಿದೆ. ಇರಾನ್ ಆರೋಗ್ಯ ಸಚಿವರಿಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಹೀಗಾಗಿ ಸೋಂಕು ಪೀಡಿತ ಸಚಿವನಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಇರಾನ್ ತುಂಬಾ ಹೈಅಲರ್ಟ್ ಘೋಷಿಸಲಾಗಿದೆ. ‘ಕೊರೊನಾ’ ಸ್ಯಾಂಪಲ್ ಸಂಗ್ರಹ..! ಒಂದ್ಕಡೆ ಕೊರೊನಾ ಭೀಕರ ರೂಪ ತಾಳುತ್ತಿದ್ರೆ, ಈ ಬಗ್ಗೆ ಅಧ್ಯಯನ ನಡೆಸಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ಟೀಂ ಚೀನಾಗೆ ತೆರಳಿದೆ. ಕೊರೊನಾ ವೈರಾಣು ಚೀನಾದ ಬಯೋ ವೆಪನ್ ಅಂತಾ ಹೇಳಲಾಗುತ್ತಿರುವ […]

ಆರೋಗ್ಯ ಸಚಿವರಿಗೂ ತಗುಲಿತು ಡೆಡ್ಲಿ ಕೊರೊನಾ ವೈರಸ್!
Follow us on

ಭೀಕರ ಕೊರೊನಾ ವೈರಸ್ ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವ ಬೆನ್ನಲ್ಲೇ, ಅಮೆರಿಕದ ಬದ್ಧ ವೈರಿ ಇರಾನ್​ನಲ್ಲೂ ತನ್ನ ಹಾವಳಿ ಶುರುಮಾಡಿದೆ. ಇರಾನ್ ಆರೋಗ್ಯ ಸಚಿವರಿಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಹೀಗಾಗಿ ಸೋಂಕು ಪೀಡಿತ ಸಚಿವನಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಇರಾನ್ ತುಂಬಾ ಹೈಅಲರ್ಟ್ ಘೋಷಿಸಲಾಗಿದೆ.

‘ಕೊರೊನಾ’ ಸ್ಯಾಂಪಲ್ ಸಂಗ್ರಹ..!
ಒಂದ್ಕಡೆ ಕೊರೊನಾ ಭೀಕರ ರೂಪ ತಾಳುತ್ತಿದ್ರೆ, ಈ ಬಗ್ಗೆ ಅಧ್ಯಯನ ನಡೆಸಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ಟೀಂ ಚೀನಾಗೆ ತೆರಳಿದೆ. ಕೊರೊನಾ ವೈರಾಣು ಚೀನಾದ ಬಯೋ ವೆಪನ್ ಅಂತಾ ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ, ಇದ್ರ ಸ್ಯಾಂಪಲ್ ಪಡೆಯಲು ಮುಂದಾಗಿದೆ. ವುಹಾನ್​ನ ಸ್ಥಳೀಯ ಪ್ರದೇಶಗಳಲ್ಲಿ ವೈರಸ್ ಸ್ಯಾಂಪಲ್ ಪಡೆಯಲಾಗುತ್ತಿದೆ.

ನೆಲಕ್ಕುರುಳಿತು ಗಗನಚುಂಬಿ ಕಟ್ಟಡ..!
ಅಮೆರಿಕದ ಡಲ್ಲಾಸ್​ನ ಗಗನಚುಂಬಿ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. 11 ಅಂತಸ್ತಿನ ಈ ಕಟ್ಟಡ ಕುಸಿತ ಕಂಡಿದ್ದ ಹಿನ್ನೆಲೆಯಲ್ಲಿ, ಅಪಾಯದ ಮುನ್ಸೂಚನೆ ಅರಿತ ಸ್ಥಳೀಯ ಆಡಳಿತ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಬೃಹತ್ ಕ್ರೇನ್​ಗಳನ್ನ ಬಳಸಿ ತೆರವು ಮಾಡಲಾಗುತ್ತಿದೆ.