ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ಧನೆ (Dinesh Gunawardena) ಅವರನ್ನು ನೇಮಿಸಲಾಗಿದೆ. ಕೊಲಂಬೊದ ಫ್ಲವರ್ ರೋಡ್ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ದಿನೇಶ್ ಗುಣವರ್ಧನೆ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಚಿತ್ರಗಳನ್ನು ಶ್ರೀಲಂಕಾದ ಮಾಧ್ಯಮಗಳು ಪ್ರಕಟಿಸಿವೆ. ಗೊಟಬಯ ರಾಜಪಕ್ಷ ಅವರು ದೇಶಬಿಟ್ಟು ಓಡಿಹೋದ ನಂತರ ಅಧ್ಯಕ್ಷ ಸ್ಥಾನಕ್ಕೆ ಬಂದ ನಿಕಟಪೂರ್ವ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಇಂದು ತಮ್ಮ ನೂತನ ಸಚಿವ ಸಂಪುಟ ಪ್ರಕಟಿಸುವ ಸಾಧ್ಯತೆಯಿದೆ. ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿರುವ ಹಲವು ಹೊಸ ಮುಖಗಳ ಪೈಕಿ ದಿನೇಶ್ ಗುಣವರ್ಧನೆ ಮೊದಲಿಗರಾಗಿದ್ದಾರೆ.
ಮಹಾಜನ ಏಕ್ಸತ್ ಪೆರುಮುನ (Mahajana Eksath Peramuna – MEP) ಪಕ್ಷದ ನಾಯಕರಾಗಿರುವ ದಿನೇಶ್,
Dinesh Gunawardena appointed as the Prime Minister of Sri Lanka.
He took oath as the new Prime Minister at the Prime Minister’s Office on Flower Road, Colombo today.
(Photo source: NewsWire) pic.twitter.com/V6LnrpBQgj
— ANI (@ANI) July 22, 2022
1970ರಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಹಿಂದಿನ ಹಲವು ಸರ್ಕಾರಗಳಲ್ಲಿ ವಿದೇಶಾಂಗ ವ್ಯವಹಾರ, ಸಾರಿಗೆ ಮತ್ತು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಹತ್ತುಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಶ್ರೀಲಂಕಾ ಸರ್ಕಾರದ ಮುಂದಿರುವ ಸವಾಲುಗಳು
ಹೊಸದಾಗಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ದಿನೇಶ್ ಗುಣವರ್ಧನೆ ಮತ್ತು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಎದುರು ಹತ್ತಾರು ಸವಾಲುಗಳಿವೆ. ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದ ಆರ್ಥಿಕತೆ ಮೇಲೆತ್ತಲು ಕ್ರಮ ಕೈಗೊಳ್ಳುವುದು. ಪ್ರವಾಸೋದ್ಯಮ ಚೇತರಿಕೆ ಆಗುವಂತೆ ಮಾಡಬೇಕು. ಚೀನಾದ ಸಾಲದ ಟ್ರ್ಯಾಪ್ ಅನ್ನೂ ನಿಭಾಯಿಸಬೇಕು. ಶ್ರೀಲಂಕಾದ ಜನರ ವಿಶ್ವಾಸ ಗಳಿಸಬೇಕು. ರಾಜಪಕ್ಸೆ ಕುಟುಂಬದಂತೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು
ಜನರ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಬೇಕು. ವಿದೇಶಿ ನೆರವು ತರಬೇಕು, ಐಎಂಎಫ್ ನೆರವು ಪಡೆಯಬೇಕು. ಶ್ರೀಲಂಕಾದ ಕೃಷಿ ಕ್ಷೇತ್ರದಲ್ಲಿ ಮೊದಲಿನಂತೆ ಉತ್ತಮ ಉತ್ಪಾದನೆ ಆಗಲು ಕ್ರಮ ಕೈಗೊಳ್ಳಬೇಕು. ಶ್ರೀಲಂಕಾಕ್ಕೆ ಆರ್ಥಿಕ ಸ್ಥಿರತೆ, ರಾಜಕೀಯ ಸ್ಥಿರತೆಯನ್ನು ತಂದುಕೊಡುವುದರತ್ತ ಇವರಿಬ್ಬರೂ ಹೆಚ್ಚು ಗಮನ ಹರಿಸಬೇಕು ಎಂದು ಶ್ರೀಲಂಕಾದ ಜನರು ನಿರೀಕ್ಷಿಸುತ್ತಿದ್ದಾರೆ.
Published On - 11:00 am, Fri, 22 July 22