ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಆದ್ರೆ, ವೈರಸ್ ವಿಚಾರದಲ್ಲಿ ಆರಂಭದಿಂದಲೂ ಉಡಾಫೆಯಿಂದ ವರ್ತಿಸುತ್ತಿರೋ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದು ಎಡವಟ್ಟನ್ನ ಮಾಡಿದ್ದಾರೆ. ಪೋನಿಕ್ಸ್ನಲ್ಲಿ ಅರಿಜೋನಾದಲ್ಲಿ ಹನಿವೆಲ್ ಮಾಸ್ಕ್ ಫ್ಯಾಕ್ಟರಿಯನ್ನ ಉದ್ಘಾಟಿಸಿದ್ರು. ಆದ್ರೆ, ಮಾಸ್ಕ್ ಧರಿಸದೇ ಕೇವಲ ಕನ್ನಡಕ ಮಾತ್ರ ಧರಿಸಿದ್ದು ಸಾಕಷ್ಟು ಟೀಕೆಗೆ ಒಳಗಾಗಿದೆ.
ಕೊರೊನಾ ಪತ್ತೆಗೆ ‘ಡಿವೈಸ್’:
ಕೊರೊನಾ ಸೋಂಕು ಪತ್ತೆಗೆ ಜಗತ್ತಿನೆಲ್ಲೆಡೆ ನಾನಾ ಕಸರತ್ತುಗಳನ್ನ ನಡೆಸ್ತಿದ್ದಾರೆ. ಆದ್ರೆ, ಅಮೆರಿಕದ ಚಿಕಾಗೋದ ನಾರ್ಥ್ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಶಿರ್ಲಿ ರಿಯಾನ್ ಎಬಿಲಿ ಲ್ಯಾಬ್ ಸಣ್ಣ ಡಿವೈಸ್ವೊಂದನ್ನ ಸಂಶೋಧನೆ ನಡೆಸಿದ್ದಾರೆ. ಸ್ಟಾಂಪ್ ಸೈಜ್ ಆಕಾರದ ಸಣ್ಣ ಯಂತ್ರವನ್ನ ಗಂಟಲ ಬಳಿ ಇಟ್ರೆ, ಡಾಟಾ ಮೂಲಕ ಮೊಬೈಲ್ನಲ್ಲಿ ಸೋಂಕು ಇರೋದು ಗೊತ್ತಾಗಲಿದೆಯಂತೆ.
ವೈದ್ಯಕೀಯ ಸಿಬ್ಬಂದಿ ನೆರವು:
ಅಮೆರಿಕದಲ್ಲಿ ಕೊರೊನಾ ಸೋಂಕು ಇನ್ನಿಲ್ಲದಂತೆ ಆವರಿಸಿಕೊಳ್ತಿರೋದ್ರಿಂದ ವೈದ್ಯಕೀಯ ಸಿಬ್ಬಂದಿ ಎಡೆಬಿಡದೇ ಕರ್ತವ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ, ಅವರಿಗೆ ನೆರವು ನಿಡಲು ನ್ಯೂಯಾರ್ಕ್ನ ರೆಸ್ಟೋರೆಂಟ್ ಸಿಬ್ಬಂದಿ ಮುಂದಾಗಿದ್ದಾರೆ. ಅಗತ್ಯ ಆಹಾರ ಪದಾರ್ಥಗಳನ್ನ ಪ್ಯಾಕ್ ಮಾಡಿ ವೈದ್ಯಕೀಯ ಸಿಬ್ಬಂದಿಗೆ ತಲುಪಿಸುತ್ತಿದ್ದಾರೆ. ಸಸ್ಯಹಾರಿ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಕಿಟ್ಗಳನ್ನ ನೀಡಲಾಗಿತ್ತು.
ರೋಬೋಟ್ನಿಂದ ಕ್ಲೀನಿಂಗ್:
ಅಮೆರಿಕದೆಲ್ಲೆಡೆ ಕೊರೊನಾ ಆವರಿಸಿರೋದ್ರಿಂದ ವಿಮಾನ ನಿಲ್ದಾಣ ಕ್ಲೀನ್ ಮಾಡಲು, ಸಿಬ್ಬಂದಿಯೂ ಬರುತ್ತಿಲ್ಲ. ಹೀಗಾಗಿ ರೋಬೋಟ್ಗಳನ್ನ ಬಳಸಿಕೊಳ್ಳಲಾಗ್ತಿದೆ. ಪೆನ್ಸಿಲ್ವೇನಿಯಾದಲ್ಲಿನ ವಿಮಾನ ನಿಲ್ದಾಣದಲ್ಲಿ ರೋಬೋಟ್ ಸ್ವಚ್ಛತೆ ಮಾಡ್ತಿದೆ. ಸದ್ಯದಲ್ಲೇ ಅಮೆರಿಕದಲ್ಲಿ ಎಲ್ಲಾ ವಿಮಾನ ನಿಲ್ದಾಣಗಳನ್ನ ರೀ ಓಪನ್ ಮಾಡುವ ಮುನ್ಸೂಚನೆ ಸಿಕ್ಕಿದ್ದು, ಸ್ವಚ್ಛತೆಗೆ ರೋಬೋಟ್ ಬಳಸಿಕೊಳ್ಳಲಾಗ್ತಿದೆ.