ಶಾರ್ಜಾದಲ್ಲಿ 48 ಅಂತಸ್ತುಗಳ ಟವರ್ ಧಗಧಗ, ಮುಂದೇನಾಯ್ತು?
ದುಬೈ: ಸಂಯುಕ್ತ ಅರಬ್ ರಾಷ್ಟ್ರ ಶಾರ್ಜಾದ ಅಲ್ ನಹ್ದಾದ ಪ್ರದೇಶದಲ್ಲಿ ಇರುವ 48 ಅಂತಸ್ತುಗಳ ಟವರ್ನಲ್ಲಿ ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸಮಯಕ್ಕೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 12 ಜನರಿಗೆ ಗಾಯಗಳಾಗಿದ್ದು, ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಏಳು ಮಂದಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗಿದೆ. ಶಾರ್ಜಾ ನಾಗರಿಕ ರಕ್ಷಣಾ ತಂಡಗಳ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. 48 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹತ್ತಿಕೊಳ್ಳಲು ಕಾರಣವೇನು ಎಂಬುವುದು ಇನ್ನು ತಿಳಿದು ಬಂದಿಲ್ಲ. ಆದರೆ […]
ದುಬೈ: ಸಂಯುಕ್ತ ಅರಬ್ ರಾಷ್ಟ್ರ ಶಾರ್ಜಾದ ಅಲ್ ನಹ್ದಾದ ಪ್ರದೇಶದಲ್ಲಿ ಇರುವ 48 ಅಂತಸ್ತುಗಳ ಟವರ್ನಲ್ಲಿ ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸಮಯಕ್ಕೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 12 ಜನರಿಗೆ ಗಾಯಗಳಾಗಿದ್ದು, ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಏಳು ಮಂದಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗಿದೆ.
ಶಾರ್ಜಾ ನಾಗರಿಕ ರಕ್ಷಣಾ ತಂಡಗಳ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. 48 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹತ್ತಿಕೊಳ್ಳಲು ಕಾರಣವೇನು ಎಂಬುವುದು ಇನ್ನು ತಿಳಿದು ಬಂದಿಲ್ಲ. ಆದರೆ ಮೊದಲ ಬಾರಿಗೆ 10 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ವೇಗವಾಗಿ ಬೆಂಕಿ ಹಬ್ಬಿದೆ ಎಂದು ವರದಿಗಳು ತಿಳಿಸಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದರಲ್ಲಿ 38 ವಸತಿ ಮಹಡಿಗಳು, ಮತ್ತು ಒಂಬತ್ತು ಹಂತದ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡಿರುವ 48 ಅಂತಸ್ತಿನ ಕಟ್ಟಡ ಇದಾಗಿದೆ. ಕಟ್ಟಡದಲ್ಲಿ ವಾಸವಿದ್ದವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
Published On - 8:02 am, Wed, 6 May 20