ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಈವರೆಗೆ ಎರಡು ಬಾರಿ ಕೊಲೆ ಯತ್ನ ನಡೆದಿದೆ. ಪೊಲೀಸರು ಟ್ರಂಪ್ ಮೇಲೆ ನಡೆಯಬಹುದಾದ ಮೂರನೇ ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಶಂಕಿತ ವ್ಯಕ್ತಿಯೊಬ್ಬನ ಜತೆ ಲೋಡ್ ಮಾಡಿದ ಬಂದೂಕು, ನಕಲಿ ಐಡಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾದ ಕೋಚೆಲ್ಲಾ ವ್ಯಾಲಿಯಲ್ಲಿ ನಡೆದ ರ್ಯಾಲಿ ಸಂದರ್ಭದಲ್ಲಿ ಆಗಬಹುದಾದ ಯತ್ನವನ್ನು ತಡೆದಿದ್ದಾರೆ.
ಶಂಕಿತನನ್ನು ಲಾಸ್ ವೇಗಾಸ್‌ನ 49 ವರ್ಷದ ವೆಮ್ ಮಿಲ್ಲರ್ ಎಂದು ಗುರುತಿಸಲಾಗಿದೆ, ರ್ಯಾಲಿ ಸೈಟ್‌ನಿಂದ ಸುಮಾರು ಅರ್ಧ ಮೈಲಿ ದೂರದಲ್ಲಿ ಸುಮಾರು 5 ಗಂಟೆಗೆ ಕಪ್ಪು ಎಸ್ಯುವಿಯಲ್ಲಿದ್ದ ವ್ಯಕ್ತಿಯನ್ನು ರಿವರ್‌ಸೈಡ್ ಕೌಂಟಿ ಪೊಲೀಸರು ಬಂಧಿಸಿದ್ದಾರೆ.
ಮಿಲ್ಲರ್ ನಕಲಿ ವಿಐಪಿ ಪಾಸ್ ಹೊಂದಿದ್ದ, ಮೊದಲು ಭದ್ರತಾ ಚೆಕ್ಪಾಯಿಂಟ್ ಮೂಲಕ ಸುಲಭವಾಗಿ ಒಳಗೆ ಹೋಗಿದ್ದರು.
ಲೋಡ್ ಮಾಡಿದ ಬಂದೂಕು ಹೊಂದಿದ್ದಕ್ಕಾಗಿ ಮತ್ತು ಹೆಚ್ಚಿನ ಸಾಮರ್ಥ್ಯದ ಮ್ಯಾಗಜೀನ್ ಹೊಂದಿದ್ದಕ್ಕಾಗಿ ಆತನ ಮೇಲೆ ಅನುಮಾನ ಮೂಡಿದೆ.
ಮತ್ತಷ್ಟು ಓದಿ: ಟ್ರಂಪ್ ಮೇಲಿನ ಮಾರಣಾಂತಿಕ ದಾಳಿ ಪ್ರಕರಣ, ಪಾಕಿಸ್ತಾನಿ ವ್ಯಕ್ತಿಯ ಬಂಧನ
ನಾವು ಮುಂದೆ ಸಂಭವಿಸಬಹುದಾದ ದೊಡ್ಡ ಕೊಲೆ ಯತ್ನವನ್ನು ತಡೆದಿದ್ದೇವೆ ಎಂದು ಭಾವಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಬಳಿ ಹಲವರ ಪರವಾನಗಿ ಹಾಗೂ ಕಾರಿನ ನಕಲಿ ನಂಬರ್ ಪ್ಲೇಟ್ಗಳು ಪತ್ತೆಯಾಗಿವೆ. ಪಾಸ್ಪೋರ್ಟ್ಗಳು ಕೂಡ ಸಿಕ್ಕಿವೆ.
ಪೊಲೀಸರು ವಾಹನದಲ್ಲಿ ಲೋಡ್ ಮಾಡಿದ ಕೈಬಂದೂಕು ಮತ್ತು ಶಾಟ್‌ಗನ್ ಅನ್ನು ಪತ್ತೆ ಮಾಡಿದ್ದಾರೆ ಆದರೆ ಇವೆರಡೂ ನೋಂದಣಿಯಾಗಿಲ್ಲ.
ಅಮೆರಿಕ ಮಾಜಿ ಅಧ್ಯಕ್ಷ, ಈ ಬಾರಿಯ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಅವರ ಗಾಲ್ಫ್ ಕ್ಲಬ್‌ನಲ್ಲಿ ದಾಳಿ ನಡೆಸಲಾಗಿತ್ತು. ನಂತರ 58 ವರ್ಷದ ರೌತ್ ಎಂಬಾತನನ್ನು ಬಂಧಿಸಲಾಗಿದೆ. ಎರಡು ಬ್ಯಾಕ್‌ಪ್ಯಾಕ್‌ಗಳು, ಗುರಿಗಾಗಿ ಬಳಸಲಾದ ಸ್ಕೋಪ್ ಮತ್ತು ಗೋಪ್ರೊ ಕ್ಯಾಮೆರಾದೊಂದಿಗೆ ಬಂದೂಕನ್ನು ವಶಪಡಿಸಿಕೊಳ್ಳಲಾಗಿತ್ತು.
ಕೆಲವು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಾರಿಯು ಅದೇ ರೀತಿ ಸುರಕ್ಷಿತವಾಗಿ ಆರೋಗ್ಯವಾಗಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ಎಫ್ಬಿಐ ಬಂಧಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:20 am, Mon, 14 October 24