
ವಾಷಿಂಗ್ಟನ್, ಜೂನ್ 12: ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್(AMA)ನ 179 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮೂಲದ ವ್ಯಕ್ತಿಯೊಬ್ಬರು ಸಂಸ್ಥೆಯ ಆಡಳಿತವನ್ನು ವಹಿಸಿಕೊಂಡಿದ್ದಾರೆ. ಡಾ. ಶ್ರೀನಿವಾಸ್ ಮುಕ್ಕಾಮಲ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜನರು ಅವರನ್ನು ಪ್ರೀತಿಯಿಂದ ಬಾಬಿ ಮುಕ್ಕಾಮಲ ಎಂದು ಕರೆಯುತ್ತಾರೆ. MD ಆಗುವುದರ ಜೊತೆಗೆ, ಅವರು ಕಿವಿ ಗಂಟಲು ತಜ್ಞ.
ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ವೆಬ್‌ಸೈಟ್ ಪ್ರಕಾರ, ಜೂನ್ 10 ರಂದು ರಾತ್ರಿ ಹಯಾತ್ ರೀಜೆನ್ಸಿ ಚಿಕಾಗೋದಲ್ಲಿ ನಡೆದ ಸಮಾರಂಭದಲ್ಲಿ ಶ್ರೀನಿವಾಸ್ ಮುಕ್ಕಾಮಲ ಅವರು 180 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇದು ತಮಗೆ ಭಾವನಾತ್ಮಕ ಕ್ಷಣ ಅದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಕಳೆದ ವರ್ಷ ನವೆಂಬರ್‌ನಲ್ಲಿ, 53 ವರ್ಷದ ಡಾ. ಬಾಬಿ ಮುಕ್ಕಾಮಲ ಅವರ ಮೆದುಳಿನ ಎಡಭಾಗದಲ್ಲಿ 8 ಸೆಂ.ಮೀ. ಉದ್ದದ ಟೆಂಪೊರಲ್ ಲೋಬ್ ಗೆಡ್ಡೆ ಇರುವುದು ಪತ್ತೆಯಾಗಿತ್ತು.
ಮೂರು ವಾರಗಳ ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶೇಕಡ 90 ರಷ್ಟು ಗೆಡ್ಡೆಯನ್ನು ತೆಗೆದುಹಾಕಲಾಯಿತು. ಇದು ಅವರಿಗೆ ವಿಕಿರಣ ಮತ್ತು ಕೀಮೋಥೆರಪಿಯನ್ನು ತಪ್ಪಿಸಲು ಸಹಾಯ ಮಾಡಿತು. ಅವರು 20 ವರ್ಷಗಳ ಕಾಲ ಬದುಕಬಹುದೆಂದು ಅವರ ವೈದ್ಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಶಸ್ತ್ರಚಿಕಿತ್ಸೆಯ ಕ್ಷಣಗಳನ್ನು ನೆನಪಿಸಿಕೊಂಡರು.
ಮತ್ತಷ್ಟು ಓದಿ: Indians in US: ಅಮೆರಿಕದಲ್ಲಿ ಭಾರತೀಯರು ಕೆಲಸ ಮಾಡ್ತಾರೆ, ದೊಂಬಿ ಮಾಡಲ್ಲ: ವೈರಲ್ ಆದ ಎಕ್ಸ್ ಪೋಸ್ಟ್
ಡಾ.ಮುಕ್ಕಾಮಲ ತಮ್ಮ ಕುಟುಂಬದೊಂದಿಗೆ ಮಿಚಿಗನ್‌ನ ಫ್ಲಿಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ದಶಕಗಳ ಕಾಲ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ.ಅವರ ಪತ್ನಿ ನೀತಾ ಕುಲಕರ್ಣಿ ಒಬ್ಬ ಪ್ರಸೂತಿ-ಸ್ತ್ರೀರೋಗತಜ್ಞೆ. AMA ಹೌಸ್ ಆಫ್ ಡೆಲಿಗೇಟ್ಸ್ ಸಭೆ ಜೂನ್ 6 ರಿಂದ ಜೂನ್ 11 ರವರೆಗೆ ನಡೆಯಿತು.
Please join us in celebrating the inauguration of Bobby Mukkamala, MD, the 180th president of #OurAMA. Dr. Mukkamala is an accomplished otolaryngologist based in Flint, Michigan, with over two decades of dynamic leadership in organized medicine and public health. He is also the… pic.twitter.com/xTSUAZDzsF
— AMA (@AmerMedicalAssn) June 11, 2025
ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಮೆರಿಕದ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ವೈದ್ಯಕೀಯ ಸಂಸ್ಥೆಯಾಗಿದೆ.ಶ್ರೀನಿವಾಸ್ ಮುಕ್ಕಾಮಲ ಅವರು ಇಎನ್‌ಟಿ ತಜ್ಞರಾಗಿದ್ದಾರೆ. ಕೆಲವು ತಿಂಗಳ ಹಿಂದೆ ನಾನು ಇಂದು ಇಲ್ಲಿ ಇರುತ್ತೇನೆಯೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿರಲಿಲ್ಲ ಆದರೆ ಇಂದು ಇಲ್ಲಿ ನಿಂತಿದ್ದೀನಿ, ಇದು ಕನಸಂತೆ ಅನಿಸುತ್ತಿದೆ ಎಂದರು.
ಡಾ. ಮುಕ್ಕಾಮಲ ಮಿಚಿಗನ್ ವಿಶ್ವವಿದ್ಯಾಲಯದ ಮಿಚಿಗನ್ ವೈದ್ಯಕೀಯ ಶಾಲೆಯಲ್ಲಿ ವೈದ್ಯಕೀಯ ಪದವಿ ಪಡೆದರು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರಲ್ಲಿ ನಿಖಿಲ್ ಬಯೋಮೆಡಿಕಲ್ ಎಂಜಿನಿಯರ್ ಆಗಿದ್ದರೆ, ಮತ್ತೊಬ್ಬ ಮಗ ದೇವನ್ ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ