ಕೊರೊನಾ ಕೇಕೆಯಿಂದ ಕೋಟ್ಯಂತರ ಉದ್ಯೋಗಕ್ಕೆ ಕತ್ತರಿ, ತಜ್ಞರು ಏನ್ ಹೇಳಿದ್ದಾರೆ ಕೇಳಿ

| Updated By: ಸಾಧು ಶ್ರೀನಾಥ್​

Updated on: Aug 26, 2020 | 11:50 AM

ಕೊರೊನಾ ವೈರಸ್‌ನ ಹಾವಳಿಯಿಂದ ಬಚಾವ್‌ ಆದ ಯಾರೂ ಈ ಭೂಮಿಯ ಮೇಲೆ ಇಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಕೊರೊನಾ ಚೀನಾದಲ್ಲಿ ಹುಟ್ಟಿದ್ದೇ ಬಂತು ಪೂರ್ವದಿಂದ ಪಶ್ಚಿಮದ ಅಂತ್ಯದವರೆಗೂ ರಣಕೇಕೆ ಹಾಕುತ್ತಿದೆ. ಇದರ ಪರಿಣಾಮ ಈಗ ವಿಶ್ವದ ಪ್ರವಾಸೋದ್ಯಮವೂ ಕೂಡಾ ಸಾಕಷ್ಟು ನಷ್ಟ ಅನುಭವಿಸಿದೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್‌ ಪ್ರಕಾರ ಕಳೆದ ಐದು ತಿಂಗಳಲ್ಲಿ ಕೊರೊನಾದಿಂದಾಗಿ ವಿಶ್ವ ಪ್ರವಾಸೋದ್ಯಮಕ್ಕೆ ಸುಮಾರು 320 ಬಿಲಿಯನ್‌ ಡಾಲರ್‌ ನಷ್ಟವಾಗಿದೆ. ಹಾಗೇನೆ ಸುಮಾರು 120 ಮಿಲಿಯನ್‌ಗೂ ಹೆಚ್ಚು ಉದ್ಯೋಗಿಗಳು […]

ಕೊರೊನಾ ಕೇಕೆಯಿಂದ ಕೋಟ್ಯಂತರ ಉದ್ಯೋಗಕ್ಕೆ ಕತ್ತರಿ, ತಜ್ಞರು ಏನ್ ಹೇಳಿದ್ದಾರೆ ಕೇಳಿ
Follow us on

ಕೊರೊನಾ ವೈರಸ್‌ನ ಹಾವಳಿಯಿಂದ ಬಚಾವ್‌ ಆದ ಯಾರೂ ಈ ಭೂಮಿಯ ಮೇಲೆ ಇಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಕೊರೊನಾ ಚೀನಾದಲ್ಲಿ ಹುಟ್ಟಿದ್ದೇ ಬಂತು ಪೂರ್ವದಿಂದ ಪಶ್ಚಿಮದ ಅಂತ್ಯದವರೆಗೂ ರಣಕೇಕೆ ಹಾಕುತ್ತಿದೆ. ಇದರ ಪರಿಣಾಮ ಈಗ ವಿಶ್ವದ ಪ್ರವಾಸೋದ್ಯಮವೂ ಕೂಡಾ ಸಾಕಷ್ಟು ನಷ್ಟ ಅನುಭವಿಸಿದೆ.

ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್‌ ಪ್ರಕಾರ ಕಳೆದ ಐದು ತಿಂಗಳಲ್ಲಿ ಕೊರೊನಾದಿಂದಾಗಿ ವಿಶ್ವ ಪ್ರವಾಸೋದ್ಯಮಕ್ಕೆ ಸುಮಾರು 320 ಬಿಲಿಯನ್‌ ಡಾಲರ್‌ ನಷ್ಟವಾಗಿದೆ. ಹಾಗೇನೆ ಸುಮಾರು 120 ಮಿಲಿಯನ್‌ಗೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ವಿಶ್ವ ಪ್ರವಾಸೋದ್ಯಮ ವಿಶ್ವದ ಮೂರನೇ ಅತ್ಯಂತ ದೊಡ್ಡ ಉದ್ಯಮವಾಗಿದ್ದು, ವಿಶ್ವದ ಒಟ್ಟು ಜಿಡಿಪಿಯಲ್ಲಿ ಇದರ ಪಾಲೇ ಶೇ.7ರಷ್ಟಿದೆ. ವಿಶ್ವದ ಪ್ರತಿ 10 ಜನರಲ್ಲಿ ಒಬ್ಬರು ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಕೆಲಸ ಮಾಡುತ್ತಾರೆ. ಒಟ್ಟು ಕೋಟ್ಯಂತರ ಜನರು ಪ್ರವಾಸೋದ್ಯಮದ ಮೇಲೆಯೇ ಅವಲಂಬಿತರಾಗಿದ್ದಾರೆ.

ವಿಶ್ವ ಸಂಸ್ಥೆಯ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥರ ಪ್ರಕಾರ 2020ರಲ್ಲಿ ಪ್ರವಾಸೋದ್ಯಮ ಸುಮಾರು 910 ಬಿಲಿಯನ್‌ ಡಾಲರ್‌ನಿಂದ ಸುಮಾರು 1.2 ಟ್ರಿಲಿಯನ್‌ ಡಾಲರ್‌ನಷ್ಟು ನಷ್ಟ ಅನುಭವಸಲಿದೆ ಎಂದು ಅಂದಾಜಿಸಲಾಗಿದೆ. ಹಾಗೇನೆ ಸುಮಾರು 144 ಮಿಲಿಯನ್‌ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಆರ್ಥಿಕವಾಗಿ ಹೇಳೋದಾದ್ರೆ ವಿಶ್ವದ ಜಿಡಿಪಿಯಲ್ಲಿ ಸುಮಾರು 1.5% ನಿಂದ 2.8% ರಷ್ಟು ಕುಸಿತವಾಗಲಿದೆ ಎಂದು ಅಂದಾಜಿಸಲಾಗಿದೆ.