ಟೆಹ್ರಾನ್: ಅಮೆರಿಕ ಮತ್ತು ಇರಾಕ್ ನಡುವೆ ಈಗಾಗಲೇ ಮಹಾ ಕದನವೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಇರಾನ್ನ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೊಲೆಮಾನಿಯನ್ನು ವಾಯುದಾಳಿ ಮೂಲಕ ಅಮೆರಿಕ ಅಟ್ಟಾಡಿಸಿ ಕೊಂದಿತ್ತು. ತದನಂತರ ಇರಾನ್ ಸಹ ಅಮೆರಿಕ ವಿರುದ್ಧ ತೊಡೆತಟ್ಟಿ ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು.
ಇದೇ ಬೆನ್ನಲ್ಲೇ ಇಂದು ಇರಾನ್ನ ಹಲವೆಡೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಇರಾನ್ನ ಅಣುಸ್ಥಾವರದ ಸಮೀಪದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ಮತ್ತು 4.9ರಷ್ಟು ತೀವ್ರತೆ ದಾಖಲಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆಯೇ ಭೂಕಂಪನವಾಗಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಆದ್ರೆ ಇದು ನೈಸರ್ಗಿಕವಾಗಿ ಸಂಭವಿಸಿರುವ ಭೂಕಂಪ ಎಂದು ವರದಿಯಾಗಿದೆ.
ಬಾಗ್ದಾದ್‌ನಲ್ಲಿನ ಅಮೆರಿಕದ ಎರಡು ವಾಯುನೆಲೆಗಳ ಮೇಲೆ ಇರಾನ್ ನಿನ್ನೆ ಸಂಜೆ ಕ್ಷಿಪಣಿ ದಾಳಿ ನಡೆಸಿದೆ. ಏರ್ಬೇಸ್ ಮೇಲೆ ಇರಾನ್ ದಾಳಿ ನಡೆಸಿದ ಪರಿಣಾಮ ಅಮೆರಿಕದ 80 ಸೈನಿಕರು ಮೃತಪಟ್ಟಿರುವುದಾಗಿ ಇರಾನ್ ಮಾಹಿತಿ ನೀಡಿದೆ. ಆದ್ರೆ, ದಾಳಿಯಲ್ಲಿ ತಮ್ಮ ಸೈನಿಕರು ಮೃತಪಟ್ಟಿರುವ ಬಗ್ಗೆ ಅಮೆರಿಕ ಸ್ಪಷ್ಟಪಡಿಸಿಲ್ಲ.
Published On - 11:59 am, Wed, 8 January 20